Rashmika Mandanna ರಕ್ಷಿತ್ ಶೆಟ್ಟಿ ಹಾಗೆ ವಿಜಯ್ ದೇವರಕೊಂಡಗೆ ಅಸುರಕ್ಷತೆ ಭಾವನೆ ಇಲ್ಲ; ರಶ್ಮಿಕಾ ಮಂದಣ್ಣ
ಗುಡ್ ಬೈ ಸಿನಿಮಾ ಫ್ಲಾಪ್? ವಿಜಯ್ ಜೊತೆ ಮಾಲ್ಡೀವ್ಸ್ ಟ್ರಿಪ್...ರಕ್ಷಿತ್ ಬಗ್ಗೆ ಹಳೆ ಮಾತು ವೈರಲ್....
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ. ಅಮಿತಾಭ್ ಬಚ್ಚನ್ ಮಗಳಾಗಿ ಅಭಿನಯಿಸಿರುವ ಗುಡ್ ಬೈ ಸಿನಿಮಾ ಬಿಡುಗಡೆಯಾಗಿದೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದರೂ ರಶ್ಮಿಕಾ ಮತ್ತು ಅಮಿತಾಭ್ ಕಾಂಬಿನೇಷನ್ ನೆಟ್ಟಿಗರ ಗಮನ ಸೆಳೆದಿದೆ. ಈ ನಡುವೆ ರಾಶ್ ಮಾಲ್ಡೀವ್ಸ್‌ಗೆ ಹಾರಿರುವುದು ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ....
ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಕೊಂಡು ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದರು. ಸಿನಿಮಾ ಹಿಟ್ ಇವರಿಬ್ಬರ ಕಾಂಬಿನೇಷನ್ ಕೂಡ ಹಿಟ್ ಆಯ್ತು. ಇವರಿಬ್ಬರು ಒಟ್ಟಿಗೆ ನಟಿಸಿದಕ್ಕೆ ಲಿಪ್ ಲಾಕ್ ಮಾಡಿದಕ್ಕೆ ರಕ್ಷಿತ್ ಶೆಟ್ಟಿ ಜೊತೆಗೆ ನಡೆದಿದ್ದ ನಿಶ್ಚಿತಾರ್ಥ ಮುರಿದು ಬಿತ್ತು ಎನ್ನಲಾಗಿತ್ತು. ಹೌದು! ಕಿರಿಕ್ ಪಾರ್ಟಿ ಸಿನಿಮಾ ಸಮಯದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು. ಮನಸ್ಥಾಪಗಳು ಅನುಮಾನಗಳಿಂದ ಮುರಿದು ಬಿತ್ತು ಅಂತ ಕೆಲವರು ಹೇಳಿದ್ದರೆ ಇನ್ನೂ ಕೆಲವರು ವಿಜಯ್ ಕಾರಣ ಎಂದಿದ್ದಾರೆ.
ಮಾಲ್ಟೀವ್ಸ್ ಟ್ರಿಪಲ್ಲಿ ಬ್ಯುಸಿಯಾಗಿರುವ ಇವರಿಬ್ಬರ ಲವ್ ಸ್ಟೋರಿನ ನೆಟ್ಟಿಗರು ವಿಶ್ಲೇಷಣೆ ಮಾಡುತ್ತಿದ್ದಾರೆ. 2020ರಲ್ಲಿ ವಿಜಯ್ ಮತ್ತು ರಕ್ಷಿತ್ ಬಗ್ಗೆ ರಶ್ಮಿಕಾ ಕೊಟ್ಟ ಹೇಳಿಕೆಯನ್ನು ಈಗ ವೈರಲ್ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದಿನ ಮಾತುಕತೆ ಈ ತುಂಬಾನೇ ಅರ್ಥ ಕೊಡುತ್ತಿದೆ.
Maldives; ರಶ್ಮಿಕಾ-ದೇವರಕೊಂಡ ತಂಗಿದ್ದ ರೆಸಾರ್ಟ್‌ನ ದಿನದ ಚಾರ್ಜ್ ಕೇಳಿದ್ರೆ ಹೌಹಾರ್ತೀರಾ
'ವಿಜಯ್ ದೇವರಕೊಂಡ ತುಂಬಾನೇ ಸಿಂಪಲ್ ಮನುಷ್ಯ ಅವನ ಪ್ರಪಂಚದಲ್ಲಿ ಅವನು ಖುಷಿಯಾಗಿದ್ದಾನೆ. ಗೀತಾ ಗೋವಿಂದಂ ಸಿನಿಮಾ ನಡೆಯುವಾಗ ನಾನು ಕೇಲವ ಸ್ನೇಹಿತರಾಗಿದ್ದೆವು ಆದರೆ ನಮ್ಮ ನಡುವೆ ಇದ್ದ ಸಣ್ಣ ಸ್ಪಾರ್ಕ್‌ನ ನಾವು ಬಿಟ್ಟುಕೊಡಲು ಆಗಲಿಲ್ಲ. ಕೆಲವೊಂದು ಸಲ ನನ್ನ ಹೃದಯ ಹೇಳುತ್ತಿತ್ತು 'ವಿಜಯ್ ಸ್ಪೆಷಲ್ ವಿಜಯ್ ಸ್ಪೆಷಲ್' ಎಂದು. ನಮ್ಮಿಬ್ಬರ ನಡುವೆ ಸಂಬಂಧ ಬದಲಾಗಿದ್ದು ನಾವು ಡಿಯರ್ ಕಾಮ್ರೇಡ್ ಸಿನಿಮಾ ಆರಂಭಿಸಿದ್ದಾಗ' ಎಂದು ರಶ್ಮಿಕಾ ಬ್ಯುಸಿನೆಸ್ ಟೈಮ್ಸ್ 2020ರ ಸಂದರ್ಶನದಲ್ಲಿ ಮಾತನಾಡಿದ್ದರು.
ಸಖತ್ ಬೋಲ್ಡ್ ಅವತಾರದಲ್ಲಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್
'ಒಮ್ಮೆ ನನ್ನ ಪ್ರೀತಿಯನ್ನು ವಿಜಯ್ ದೇವರಕೊಂಡ ಜೊತೆ ಹಂಚಿಕೊಂಡೆ ಆದರೆ ಆರಂಭದಲ್ಲಿ ನಾಚಿಕೊಂಡರು..ಆದರೆ ನನ್ನ ಮೇಲೆ ಸ್ಪೆಷಲ್ ಫೀಲಿಂಗ್ ಇರುವುದು ಹೌದು. ನನ್ನ ಭಾವನೆಗಳನ್ನು ಆತ ಒಪ್ಪಿಕೊಂಡಿದ್ದಾರೆ ನಾವು ಸಂತೋಷವಾಗಿದ್ದೀವಿ. ನನ್ನ ಎಕ್ಸ್ ಬಾಯ್‌ಫ್ರೆಂಡ್ ರಕ್ಷಿತ್ ಶೆಟ್ಟಿ ರೀತಿ ಆತನಿಗೆ ಇನ್‌ಸೆಕ್ಯೂರ್ ಫೀಲ್ ಇಲ್ಲ ಹಾಗೇ ನನ್ನ ವೃತ್ತಿ ಜೀವನ ಬಿಟ್ಟು ಕೆಲಸ ಮಾಡು ಅಂತ ಹೇಳಿಲ್ಲ. ವಿಜಯ್ ಓಪನ್ ಮೈಂಡ್ ಇರುವ ಹುಡುಗ ನಾನು ಇಂಡಿಪೆಂಡೆಂಟ್ ಆಗಿರಬೇಕು ಅನ್ನೋದು ಅತನ ಆಸೆ' ಎಂದ ರಶ್ಮಿಕಾ ಹೇಳಿದ್ದಾರೆ.
ರಶ್ಮಿಕಾ ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಮಾಡಿದಕ್ಕೆ 'ಇಲ್ಲ ನಮ್ಮ ಮದುವೆ ಕಾರ್ಡ್ ಇನ್ನೂ 5-7 ಪ್ರಿಂಟ್ ಆಗುವುದಿಲ್ಲ ಅಂದ್ರೆ ನೋ ಮ್ಯಾರೇಜ್ ಫಾರ್ 7 ಇಯರ್' ಎಂದಿದ್ದಾರೆ.