ಸಖತ್ ಬೋಲ್ಡ್ ಅವತಾರದಲ್ಲಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್
ಈ ದಿನಗಳಲ್ಲಿ ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ಸಖತ್ ಸುದ್ದಿಯಲ್ಲಿದ್ದಾರೆ. ಅವರ ಮೊದಲ ಬಾಲಿವುಡ್ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಇದರ ನಡುವೆ ಅವರ ಬೋಲ್ಡ್ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿವೆ. ನಟಿ ಬಿಕಿನಿ (Bikini) ಅವತಾರದಲ್ಲಿ, ಟ್ರಾವೆಲ್ ಮ್ಯಾಗಜೀನ್ (Travel Magazine) ಫೋಟೋಶೂಟ್‌ನಲ್ಲಿ ರಶ್ಮಿಕಾ ತನ್ನ ಪರ್ಫೇಕ್ಟ್ ಫಿಗರ್ ತೋರಿಸಿದ್ದಾರೆ. ಇಲ್ಲಿದೆ ರಶ್ಮಿಕಾರ ಬೋಲ್ಡ್ ಫೋಟೋಗಳು.
ರಶ್ಮಿಕಾ ಮಂದಣ್ಣ ಸಂಪೂರ್ಣ ಚಿನ್ನದ ಹುಡುಗಿ ಆಗಿ ಮಿಂಚುತ್ತಿದ್ದಾರೆ. ನಟಿಯ ಗೋಲ್ಡನ್ ಬಿಕಿನಿ ಹಾಟ್ ಆವತಾರ ಸೋಸಿಯಲ್ ಮಿಡೀಯಾದಲ್ಲಿ ಸೆನ್ಸೇಷನ್ ಉಂಟುಮಾಡಿದೆ.
ಫ್ಯಾಷನ್ ಡಿಸೈನರ್ ಅನೈತಾ ಶ್ರಾಫ್ ಅಡಾಜಾನಿಯಾ ಅವರು ವಿನ್ಯಾಸ ಮಾಡಿದ ಬಿಕಿನಿಯಲ್ಲಿ ಟ್ರಾವೆಲ್ + ಲೀಸರ್ ಇಂಡಿಯಾ ಮ್ಯಾಗಜೀನ್‌ಗಾಗಿ ರಶ್ಮಿಕಾ ಫೋಟೋಶೂಟ್ ಮಾಡಿದ್ದಾರೆ
ಫೋಟೋಶೂಟ್‌ನಲ್ಲಿ ರಶ್ಮಿಕಾ ಬಿಕಿನಿ ಕೌಗರ್ಲ್ ಆಗಿ ಬದಲಾಗಿದ್ದಾರೆ ಮತ್ತು ಈ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ ಪರ್ಫೆಕ್ಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಅನುಮಾನವೇ ಇಲ್ಲ.
ರಶ್ಮಿಕಾ ಮಂದಣ್ಣ ಅಬುಧಾಬಿಯ ಬೀಚ್‌ನಲ್ಲಿ ಗೋಥಿಕ್ ಕಪ್ಪು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ. ಬೋಲ್ಡ್ ಬಿಕಿನಿ ಲುಕ್‌ನಲ್ಲಿನ ರಶ್ಮಿಕಾರ ಆತ್ಮವಿಶ್ವಾಸಕ್ಕೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದು, ಇವರ ಈ ಹಾಟ್ ಫೋಟೋಗಳು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿವೆ.
ರಶ್ಮಿಕಾ ಇತ್ತೀಚೆಗೆ ಅಮಿತಾಭ್ ಬಚ್ಚನ್ ಮತ್ತು ನೀನಾ ಗುಪ್ತಾ ಜೊತೆ ಗುಡ್ ಬೈ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾದ ಮೂಲಕ ಆಕೆ ಬಾಲಿವುಡ್ ನಟನೆಗೆ ಪಾದಾರ್ಪಣೆ ಮಾಡಿದರು.
ಪ್ರಸ್ತುತ ಅವರ ಖಾತೆಯಲ್ಲಿ ಅವರು ಅಲ್ಲು ಅರ್ಜುನ್ ಅವರ ಪುಷ್ಪಾ: ದಿ ರೂಲ್, ಸಿದ್ಧಾರ್ಥ್ ಮಲ್ಹೋತ್ರಾ ಅವರ ಮಿಷನ್ ಮಜ್ನು ಮತ್ತು ರಣಬೀರ್ ಕಪೂರ್ ಅವರೊಂದಿಗೆ ಆನಿಮಲ್ ಸಿನಿಮಾಗಳಿವೆ.