ಅಸಿಸ್ಟೆಂಟ್ ಮದುವೆಯಲ್ಲಿ ರಶ್ಮಿಕಾ ಮಂದಣ್ಣ; ಕಾಲಿಗೆ ಬಿದ್ದ ವಧು-ವರ ವಿಡಿಯೋ ವೈರಲ್!
ರಶ್ಮಿಕಾ ಮಂದಣ್ಣ ಆಶೀರ್ವಾದ ಮಾಡೋಷ್ಟು ದೊಡ್ಡವರಾದ್ರಾ? ಮದುವೆ ಮನೆಯಲ್ಲಿ ಸೆರೆ ಹಿಡಿದಿರುವ ವಿಡಿಯೋ ಸಖತ್ ವೈರಲ್....
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಅನಿಮಲ್ ಸಿನಿಮಾ, ತೆಲುಗುವಿನಲ್ಲಿ ಪುಷ್ಪ 2 ಮತ್ತು ರೇನ್ಬೋದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಕೆಲವು ದಿನಗಳ ಹಿಂದೆ ವಿಜಯ್ ದೇವರಕೊಂಡ ಕೈ ಹಿಡಿದು ಪೋಸ್ ಕೊಟ್ಟು ಶೀಘ್ರದಲ್ಲಿ ಮತ್ತೊಂದು ವಿಶೇಷ ಸುದ್ದಿ ಅನೌನ್ಸ್ ಮಾಡುವುದಾಗಿ ಹೇಳಿದ್ದರು. So, ರಶ್ಮಿಕಾ ಮಂದಣ್ಣ ಎಲ್ಲಿರಲ್ಲಿ ಏನೇ ಮಾಡಲಿ ಸುದ್ದಿಯಲ್ಲಿರುತ್ತಾರೆ.
ಸೆಪ್ಟೆಂಬರ್ 3ರಂದು ಶುಭ ಲಗ್ನ ಎನ್ನುವ ಕಾರಣ ಸಾಕಷ್ಟು ಮದುವೆ, ಗೃಹಪ್ರವೇಶ, ಎಂಗೇಜ್‌ಮೆಂಟ್ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿತ್ತು. ನಿನ್ನೆ ಹೈದರಾಬಾದ್‌ನಲ್ಲಿ ರಶ್ಮಿಕಾ ಮಂದಣ್ಣ ಅಸಿಸ್ಟೆಂಟ್ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆಯಲ್ಲಿ ಭಾಗಿಯಾಗಿದ್ದ ಸುಂದರಿ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ್ದಾರೆ ತಕ್ಷಣವೇ ವಧು ವರ ರಶ್ಮಿಕಾ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಮುಜುಗರ ಪಡುವ ರಶ್ಮಿಕಾ ಮಂದಣ್ಣ ನೀವಿಬ್ಬರು ಖುಷಿಯಾಗಿರಿ ಎಂದು ವಿಶ್ ಮಾಡುತ್ತಾರೆ.
ನೋಡೋಕೆ ಅಷ್ಟು ಚೆಂದ ಇದ್ರೂ ಕಪಿ ತರ ಮುಖ ಮಾಡೋದ್ಯಾಕೆ?; ರಶ್ಮಿಕಾ ಮಂದಣ್ಣ ಕಾಲೆಳೆದ ನೆಟ್ಟಿಗರು
ರಶ್ಮಿಕಾ ಮಂದಣ್ಣರನ್ನು ಪಕ್ಕಕ್ಕೆ ಕರೆದು ವಧು-ವರ ಪೋಸ್ ಕೊಟ್ಟಿದ್ದಾರೆ. ಅಲ್ಲೂ ಕ್ಯಾಮೆರಾ ನೋಡದೆ ಅಲ್ಲಿ ಇಲ್ಲಿ ಇರುವರನ್ನು ಮಾತನಾಡಿಸಿಕೊಂಡು ತುಂಟಾಟ ಮಾಡಿದ್ದಾರೆ. ಹಳದಿ ಬಣ್ಣದ ಫ್ಯಾನ್ಸಿ ಸೀರೆಗೆ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ ರಶ್ಮಿಕಾ ಮಂದಣ್ಣ. ಸುಂದರ ನಟಿಯನ್ನು ನೋಡಿ ವಧು-ವರರ ಫ್ಯಾಮಿಲಿ ಸೆಲ್ಫಿ ಪಡೆಯಲು ಮುಗ್ಗಿ ಬಿದ್ದಿದ್ದಾರೆ. 'ಆಶೀರ್ವಾದ ಮಾಡುವಷ್ಟು ದೊಡ್ಡ ಹುಡುಗಿ ಆಗಿದ್ದಾಳ ರಶ್ಮಿಕಾ ಮಂದಣ್ಣ? ಒಳ್ಳೆಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಿರಿ ಏನೂ ಸಾಧನೆ ಮಾಡದವರ ಕಾಲಿಗೆ ಅಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಗುರು ಇದು 690 ರೂ. ಟಾಪ್; ದುಡ್ಡು ಉಳಿಸುತ್ತಿದ್ದಾರಾ ರಶ್ಮಿಕಾ ಮಂದಣ್ಣ?
ರಶ್ಮಿಕಾ ಮಾಂಸ ತಿನ್ನುತ್ತಾರಾ?
ಹಿಂದೊಂದು ವೀಡಿಯೋದಲ್ಲಿ ಈ ಕೊಡಗಿನ ಬಂಗಾರಿ ತಾನು ವೆಜಿಟೇರಿಯನ್ ಮಾತ್ರ ಅಲ್ಲ, ವೇಗನ್ ಕೂಡ ಆಗಿದ್ದೀನಿ ಅಂದುಬಿಟ್ಟು ಸುದ್ದಿಯಾಗಿದ್ರು. ನನಗೆ ಪ್ರಾಣಿಗಳನ್ನು ಕಂಡ್ರೆ ಸ್ಯಾನೆ ಪಿರೂತಿ. ಹೀಗಾಗಿ ಪ್ರಾಣಿಗಳನ್ನೆಲ್ಲ ತಿನ್ನೋದಿಲ್ಲ. ಬರೀ ಸೊಪ್ಪು ತರಕಾರಿ ತಿಂದು ಬದುಕ್ತೀನಿ ಅಂದಿದ್ರು. ಇದಾಗಿ ಕೆಲವು ದಿನದಲ್ಲಿ ಚಿಕನ್ ಆಡ್‌ನಲ್ಲಿ ಕಾಣಿಸಿಕೊಂಡಿದ್ರು.ಈಗ ಅವರು ಹಂದಿ ಮಾಂಸ ತಿನ್ನೋ ಬಗ್ಗೆ ಚರ್ಚೆ ಶುರುವಾಗೋ ಲಕ್ಷಣ ಕಾಣ್ತಿದೆ.ಹೇಳಿ ಕೇಳಿ ಈ ಸುಂದರಿ ಕೊಡಗಿನವರು. ಕೂರ್ಗಿಗಳಲ್ಲಿ ಹಂದಿಮಾಂಸ ಸಖತ್ ಫೇಮಸ್. ಪಂದಿಕರಿ ಅಂತ ಕರೆಯೋ ಈ ಖಾದ್ಯ ಅವರ ಮನೆ ಫಂಕ್ಷನ್‌ಗಳಲ್ಲಿ(function), ಮದುವೆಗಳಲ್ಲಿ ಮಸ್ಟ್ ಆಂಡ್ ಶುಡ್ ರೆಸಿಪಿ. ಈ ಬಗ್ಗೆ ಮಾತಾಡಿರೋ ರಶ್ಮಿಕಾ ಕೊಡವರು ಹಂದಿಮಾಂಸವನ್ನು ಹೆಚ್ಚಾಗಿ ತಿನ್ನುತ್ತಾರೆ ಎಂದು ತಿಳಿಸಿದ್ದಾರೆ. ಹಂದಿಮಾಂಸವು ತಮ್ಮ ಸಾಂಪ್ರದಾಯಿಕ (traditional)ಭಕ್ಷ್ಯವಾಗಿದೆ. ಹಂದಿಮಾಂಸವನ್ನು ಬೆಂಕಿಯಲ್ಲಿ ಹುರಿದು ತಿನ್ನುತ್ತೇವೆ. ವೈನ್‌ನೊಂದಿಗೆ ಹಂದಿ ಮಾಂಸ ತಿನ್ನೋದನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ ಅಂತಲೂ ಸೇರಿಸಿದ್ದಾರೆ.