ಕಿಚ್ಚ ಸುದೀಪ್ ಭಾವುಕ ಪತ್ರಕ್ಕೆ ಬಂತು ಬಾಲಿವುಡ್ ನಟ ರಣಬೀರ್ ಕಪೂರ್ ಉತ್ತರ!
ಕಿಚ್ಚ ಸುದೀಪ್ ಆಪ್ತಮಿತ್ರರಾದ ರಿತೇಶ್ ದೇಖ್‌ಮುಖ್ ಸಹ ಸುದೀಪ್ ಲೆಟರ್ ನೋಡಿ ಉತ್ತರ ನೀಡಿದ್ದಾರೆ. ಬಹುತೇಕ ಎಲ್ಲರಿಗು ಗೊತ್ತಿರುವಂತೆ, ನಟ ರಿತೇಶ್ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾ ದಂಪತಿಗಳು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಅತ್ಯಂತ ಆಪ್ತರು...
ಪ್ಯಾನ್ ಇಂಡಿಯಾ ಖ್ಯಾತಿಯ ಕನ್ನಡದ ನಟ ಕಿಚ್ಚ ಸುದೀಪ್ ಅವರ ತಾಯಿ ಇತ್ತೀಚೆಗಷ್ಟೇ ನಿಧನರಾಗಿರುವ ಸಂಗತಿ ಬಹುತೇಕರಿಗೆ ಗೊತ್ತಿದೆ. ಇಂದು ನಟ ಕಿಚ್ಚ ಸುದೀಪ್ ಅವರು, ತಮ್ಮ ಅಮ್ಮನ ಬಗ್ಗೆ ಸುದೀರ್ಘವಾದ ಭಾವುಕ ಪತ್ರವೊಂದನ್ನು ಬರೆದು ತಮ್ಮ ಸೋಷಿಯಲ್ ಮೀಡಿಯಾ 'ಎಕ್ಸ್ ( X)' ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಹಲವಾರು ಸಿನಿಮಾ ತಾರೆಯರು ಉತ್ತರ ಬರೆದಿದ್ದಾರೆ. ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಸಹ, ಎಕ್ಸ್‌ನಲ್ಲಿ ಉತ್ತರಿಸಿದ್ದಾರೆ.
ಕಿಚ್ಚ ಸುದೀಪ್ ಪೋಸ್ಟ್ ಮಾಡಿರುವ ಪತ್ರಕ್ಕೆ ಹಿಂದಿ ನಟ ರಣಬೀರ್ ಕಪೂರ್ 'ಮೈ ಡಿಯರ್ ಬ್ರದರ್ ಕಿಚ್ಚ ಸುದೀಪ್, ನಿನ್ನ ಪತ್ರ ನೋಡಿ ನನ್ನ ಹೃದಯ ಸಾವಿರ ಸಾರಿ ಒಡೆದಂತಾಯಿತು. ನಾನು ನಿನಗೆ ಸಕಲ್ ಪ್ರೀತಿಯನ್ನೂ ಧಾರೆ ಎರೆಯುತ್ತೇನೆ. ನಿನ್ನ ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ.. ನಿನಗೆ ತುಂಬು ಹೃದಯದ ಹಗ್, ಈ ನೋವಿನ ಕ್ಷಣಗಳನ್ನು ಭರಿಸುವ ಶಕ್ತಿಯನ್ನು ಆ ದೇವರು ನನಗೆ ಕರುಣಿಸಲಿ..' ಎಂದು 'ಆನಿಮಲ್' ನಟ ರಣಬೀರ್ ಕಪೂರ್ ಬರೆದು ಪೋಸ್ಟ್ ಮಾಡಿದ್ದಾರೆ.
ಹೊಸಬರ ಜೊತೆ ನಿವೇದಿತಾ ಗೌಡ ರೊಮ್ಯಾನ್ಸ್, ರಸಿಕರ ರಾಣಿಯಾಗಲು ಹೊರಟ 'ರೀಲ್ಸ್ ರಾಣಿ'!
ಇನ್ನು, ಕಿಚ್ಚ ಸುದೀಪ್ ಅವರ ಮತ್ತೊಬ್ಬ ಆಪ್ತಮಿತ್ರರಾದ ರಿತೇಶ್ ದೇಖ್‌ಮುಖ್ ಸಹ ಸುದೀಪ್ ಲೆಟರ್ ನೋಡಿ ಉತ್ತರ ನೀಡಿದ್ದಾರೆ. ಬಹುತೇಕ ಎಲ್ಲರಿಗು ಗೊತ್ತಿರುವಂತೆ, ನಟ ರಿತೇಶ್ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾ ದಂಪತಿಗಳು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಅತ್ಯಂತ ಆಪ್ತರು. ಅವರ ನಡುವೆ ಆಗಾಗ ಭೇಟಿ, ಮಾತುಕತೆಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಕಮ್ಯುನಿಕೇಶನ್‌ಗಳು ನಡೆಯುತ್ತಲೇ ಇರುತ್ತವೆ.
ಇನ್ನು ತೆಲುಗು ನಟ ನಾನಿ ಸೇರಿದಂತೆ, ಹಲವಾರು ಪ್ಯಾನ್ ಇಂಡಿಯಾ ಖ್ಯಾತಿಯ ನಟನಟಿಯರು ಕನ್ನಡಿಗ ಕಿಚ್ಚ ಸುದೀಪ್ 'ಎಕ್ಸ್'ನಲ್ಲಿ ಅಗಲಿದ ತಮ್ಮ ಅಮ್ಮನ ಕುರಿತು ಬರೆದು ಪೋಸ್ಟ್ ಮಾಡಿರುವ ಭಾವುಕ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ. ಸುದೀಪ್ ಅಮ್ಮನ ಆತ್ಮಕ್ಕೆ ಶಾಂತಿ ಕೋರಿರುವ ಅವರೆಲ್ಲರೂ, 'ನಟ ಸುದೀಪ್ ಅವರಿಗೆ ಅಮ್ಮನ ಅಗಲಿಕೆಯ ನೋವನ್ನು ಸಹಿಸಲು ಭಗವಂತ ಶಕ್ತಿ ನೀಡಲಿ' ಎಂದು ಪ್ರಾರ್ಥಿಸಿದ್ದಾರೆ.
ಏಷ್ಯಾನೆಟ್ ಸುವರ್ಣಗೆ ರಂಜಿತ್ ಎಕ್ಸ್‌ಕ್ಲೂಸಿವ್ ಮಾತು: ನನಗಾದ ನಷ್ಟ ಯಾರು ಕೊಡ್ತಾರೆ?
ಕನ್ನಡದ ಬಹಳಷ್ಟು ತಾರೆಗಳು, ಸುದೀಪ್ ನಿವಾಸಕ್ಕೆ ತೆರಳಿ ಸುದೀಪ್ ಅಮ್ಮ ಸರೋಜಾರ ಅಂತಿಮ ದರ್ಶನ್ ಪಡೆದಿದ್ದಾರೆ, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಸಿನಿಮಾ ಮಾತ್ರವಲ್ಲದೇ ಕ್ರಿಕೆಟ್ ಆಟಗಾಗರೂ ಆಗಿರುದರಿಂದ ಅವರಿಗೆ ಸಿನಿಮಾರಂಗ ಮೀರಿಯೂ ಬಹಳಷ್ಟು ಸ್ನೇಹಿತರು ಹಾಗೂ ಅಭಿಮಾನಿಗಳು ಇದ್ದಾರೆ. ತುಂಬಾ ವರ್ಷಗಳ ಹಿಂದೆಯೇ ನಟ ಕಿಚ್ಚ ಸುದೀಪ್ ಅವರು ಕನ್ನಡದ ಹೊರತಾಗಿಯೂ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಲ್ಲೂ ನಟಿಸಿ ಅಲ್ಲಿಯೂ ಅಭಿಮಾನಗಳನ್ನು ಸಂಪಾದಿಸಿಕೊಂಡಿದ್ದಾರೆ.