ಕಾಂತಾರ - ಬ್ರಹ್ಮಾಸ್ತ್ರ ವಾರ್: ರಿಷಬ್ ಶೆಟ್ಟಿಗಿಂತ ರಣಬೀರ್ ಕಪೂರ್ ಬೆಸ್ಟ್ ಎಂದ ಓಟಿಟಿ ವೀಕ್ಷಕರು!
ಓಟಿಟಿಯಲ್ಲಿ ರಿಲೀಸ್ ಆಯ್ತು ರಿಷಬ್ 'ಕಾಂತಾರ' ಮತ್ತು ರಣಬೀರ್ 'ಬ್ರಹ್ಮಾಸ್ತ್ರ'. ಥಿಯೇಟರ್ ವೀಕ್ಷಕರಿಗಿಂತ ವಿಭಿನ್ನವಾಗಿದೆ ಓಟಿಟಿ ರಿವ್ಯೂ....
ಸ್ಯಾಂಡಲ್ ವುಡ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಷಬ್ ಶೆಟ್ಟಿ ಸಿನಿಮಾ ಕನ್ನಡ ಮಾತ್ರಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಎಲ್ಲಾ ಭಾಷೆಯ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ನವೆಂಬರ್ 16 ಅಥವಾ 18ರಂದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭವಾಗಲಿದೆ ಎನ್ನುವ ಸುದ್ದಿ ಹಬ್ಬಿದೆ. ಯಾವ ಮಾಹಿತಿಗೂ ಖಚಿತವಿಲ್ಲದ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್‌ಗಳು ವಾರ್ ಶುರು ಮಾಡಿದ್ದಾರೆ. ರಿಷಬ್ ಸಿನಿಮಾನ ಬಾಲಿವುಡ್ ಸಿನಿಮಾ ಜೊತೆ ಹೊಲಿಸುತ್ತಿದ್ದಾರೆ.
ಹೌದು! ಬಾಲಿವುಡ್ ಬಹುಕೋಟಿ ವೆಚ್ಚದ ಬ್ರಹ್ಮಾಸ್ತ್ರ ಸಿನಿಮಾ ಈಗ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಂಬಿನೇಷನ್ ಸಿನಿಮಾವನ್ನು ನೀವು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಹಾಡುಗಳು ಸೂಪರ್ ಹಿಟ್ ಆಗಿದ್ದು ಕಥೆ ವಿಭಿನ್ನವಾಗಿದೆ ಎಂದು ಎರಡನೇ ಭಾಗವೂ ಬಿಡುಗಡೆಗೆ ಸಜ್ಜಾಗುತ್ತಿದೆ. ಹೀಗಿರುವಾಗ ಕಾಂತಾರ ಮತ್ತು 'ಬ್ರಹ್ಮಾಸ್ತ್ರ ನಡುವೆ ಓಟಿಟಿ ಫೈಟ್ ಶುರು ಮಾಡಿದ್ದಾರೆ ಫ್ಯಾನ್ಸ್.
ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿರುವವರು ಹಾಗೂ ಬ್ರಹ್ಮಾಸ್ತ್ರವನ್ನು ಓಟಿಟಿಯಲ್ಲಿ ಕಂಡವರು ಸಿನಿಮಾ ಹೇಗಿದೆ ಎಂದು ಹೊಲಿಕೆ ಮಾಡುತ್ತಿದ್ದಾರೆ. ಕಾಂತಾರ ಚಿತ್ರದ ಮೊದಲ ಭಾಗ ಚೆನ್ನಾಗಿದೆ ಆದರೆ ಎರಡನೇ ಭಾಗ ಅರ್ಥವೇ ಆಗೋಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ ಇನ್ನೂ ಕೆಲವರು ಕಾಂತಾರ ಮೇಕಿಂಗ್ ಅದ್ಭುತವಾಗಿ ಆದರೆ ಕಥೆ ಏನೂ ಇಲ್ಲ ಎಂದು ಕಾಲೆಳೆದಿದ್ದಾರೆ. ಉತ್ತರ ಭಾರತೀಯರು ಬ್ರಹ್ಮಾಸ್ತ್ರ ಪರ ನಿಂತರ ದಕ್ಷಿಣ ಭಾರತೀಯರ ಕಾಂತಾರ ಪರ ನಿಂತಿದ್ದಾರೆ. ಎರಡೂ ಸಿನಿಮಾ ವಿಭಿನ್ನ ಕಥೆ ಹೊಂದಿದೆ ಹಾಗೂ ಅದರದ್ದೇ ಮಹತ್ವ ಸಾರಿಗೆ ಹೀಗಾಗಿ ಎರಡು ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದಬೇಕು ಎಂದಿದ್ದಾರೆ ನೆಟ್ಟಿಗರು.
ಕಾಂತಾರ ಕಲೆಕ್ಷನ್:
ಇದೀಗ ಕಾಂತಾರ 300 ಕೋಟಿ ಕ್ಲಬ್ ಸೇರಿದೆ. ಒಂದೇ ತಿಂಗಳ ಅವಧಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಾಂತಾರ ಸಾಧನೆ ಮಾಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಓವರ್‌ಸೀಸ್ ಗಳಿಕೆಯ ಒಟ್ಟು ಮೊತ್ತ 300 ಕೋಟಿ ದಾಟಿದೆ. ಈ ಮೊತ್ತದಲ್ಲಿ ಕನ್ನಡದ ಗಳಿಕೆ ರು.150 ಕೋಟಿಯಾದರೆ ತೆಲುಗಿನಿಂದ ಬಂದದ್ದು .50 ಕೋಟಿ. ಹಿಂದಿ ಅವತರಣಿಕೆಯ ಗಳಿಕೆ 50 ರೂ. ಕೋಟಿ ದಾಟಿದೆ. ತಮಿಳುನಾಡಿನ ಮಂದಿ ಮಳೆಯ ನಡುವೆಯೇ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಕೇರಳದಲ್ಲೂ ಚಿತ್ರ ಜಯಭೇರಿ ಬಾರಿಸಿದೆ.ತೆಲುಗು ಭಾಷೆಯೊಂದರಲ್ಲೇ ಚಿತ್ರ 50 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿದೆ. ತೆಲುಗಿಗೆ ಡಬ್ ಆಗಿ ಈ ಮೊತ್ತ ಸಂಗ್ರಹಿಸುತ್ತಿರುವ 6ನೇ ಸಿನಿಮಾ ಇದಾಗಿದೆ. ಕನ್ನಡದ 2ನೇ ಸಿನಿಮಾವಾಗಿ ಕಾಂತಾರ ಹೊರಹೊಮ್ಮಿದೆ. ಎಲ್ಲಾ ಭಾಷೆಯಿಂದನೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿಯೂ ಭರ್ಜರಿ ಕಮಾಯಿ ಮಾಡಿದೆ.
ಹಿಂದಿ ಸಿನಿಮಾಗಳಲ್ಲಿ ನಟಿಸಲು ಸೌತ್ ಸ್ಟಾರ್ಸ್ ಯಾಕೆ ಇಷ್ಟಪಡಲ್ಲ? ಅಭಿಮಾನಿಗಳ ಹೃದಯ ಗೆದ್ದ ರಿಷಬ್ ಉತ್ತರ
ಬ್ರಹ್ಮಸ್ತ್ರಾ ಕಲೆಕ್ಷನ್:
ಕರಣ್ ಜೋಹರ್ (Karan Johar)ಅವರ ಧರ್ಮ ಪ್ರೊಡೆಕ್ಷನ್ ನಿರ್ಮಾಣದ 'ಬ್ರಹ್ಮಾಸ್ತ್ರ ಭಾಗ 1: ಶಿವ' (Brahmastra) ಚಿತ್ರ 16 ದಿನಗಳಲ್ಲಿ 400 ಕೋಟಿ ರೂಪಾಯಿ ಗಡಿ ದಾಟಿದೆ. ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಈ ಸಾಧನೆ ಮಾಡಿದೆ ಆದರೆ ಇದು ಇನ್ನೂ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂಪಾಯಿಗಳನ್ನು ಮುಟ್ಟಿಲ್ಲ. ಆದರೆ ಇದು ಭಾನುವಾರದ ಸಂಗ್ರಹಣೆಯಲ್ಲಿ ಈ ಅಂಕಿಅಂಶವನ್ನು ದಾಟಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಲನಚಿತ್ರವಾಗಿ ಹೊರಹೊಮ್ಮಲಿದೆ ಎಂದು ನಿರೀಕ್ಷಿಸಲಾಗಿದೆ.