ರಕ್ಷಿತಾ ಸಹೋದರ ರಾಣಾ ನಟನೆಯ ಎರಡನೇ ಚಿತ್ರದ ಶೂಟಿಂಗ್‌ಗೆ ಅರಣ್ಯ ಇಲಾಖೆ ಅಡ್ಡಿಪಡಿಸಿದೆ. ತುಮಕೂರಿನ ನಾಮದ ಚಿಲುಮೆಯಲ್ಲಿ ಅನುಮತಿ ಇಲ್ಲದೆ ಚಿತ್ರೀಕರಣ ನಡೆಸುತ್ತಿದ್ದ ಕಾರಣಕ್ಕೆ ಶೂಟಿಂಗ್ ನಿಲ್ಲಿಸಲಾಗಿದೆ. ಕ್ಯಾರವಾನ್, ಕ್ಯಾಮೆರಾ, ಲೈಟ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ತರುಣ್ ಸುಧೀರ್ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ನಾಯಕಿಯಾಗಿದ್ದಾರೆ. ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರೂ, ಅನುಮತಿ ಸಿಕ್ಕಿರಲಿಲ್ಲ.
ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾ ನಟನೆಯ ಎರಡನೇ ಸಿನಿಮಾ ಚಿತ್ರೀಕರಣ ಭರ್ಜರಿಯಾಗಿ ಆರಂಭವಾಗಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಣ್ಣ ಬ್ರೇಕ್ ನಂತರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ ಎರಡನೇ ಸಿನಿಮಾ ಶೂಟಿಂಗ್‌ಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿದೆ. ತುಮಕೂರಿನ ಈ ಜಾಗದಲ್ಲಿ ಶೂಟಿಂಗ್ ಮಾಡಲು ಅನುಮತಿ ಪಡೆದಿಲ್ಲ ಎಂದು ಅಧಿಕಾರಿಗಳು ಸೆಟ್‌ನಲ್ಲಿದ್ದ ಐಟಂಗಳನ್ನು ಸೀಜ್ ಮಾಡಿದ್ದಾರೆ ಎನ್ನಲಾಗಿದೆ.
ಹೌದು! ತುಮಕೂರು ನಗರಕ್ಕೆ ಮೀಸಲು ಅರಣ್ಯ ಪ್ರದೇಶವಾದ ನಾಮದ ಚಿಲುಮೆಯಲ್ಲಿ ರಾಣಾ ಸಿನಿಮಾ ತಂಡ ಅನುಮತಿ ಇಲ್ಲದೆ ಚಿತ್ರೀಕರಣ ಮಾಡುತ್ತಿದ್ದರಂತೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೂಟಿಂಗ್ ನಿಲ್ಲಿಸಿದ್ದಾರೆ. ಇನ್ನೂ ಹೆಸರಿಡದ ಸಿನಿಮಾ ಇದಾಗಿದ್ದು ಕಳೆದ 5 ದಿನಗಳಿಂದ ಈ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಾಹಿಳೆ ಲಭ್ಯವಾಗುತ್ತಿದ್ದಂತೆ ಅರಣ್ಯ ಇಲಾಖೆ ಎಸಿಎಫ್ ಪವಿತ್ರಾ ನೇತೃತ್ವದ ಸಿಬ್ಬಂದಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಸಂಪೂರ್ಣ ಬಂದ್ ಮಾಡಿಸಿದ್ದಾರೆ. ಶೂಟಿಂಗ್‌ಗೆ ಬಳಸುತ್ತಿದ್ದ ಕ್ಯಾರವಾನ್, ಕ್ಯಾಮೆರಾ, ಲೈಟ್, ಅಡುಗೆ ಸಾಮಾಗ್ರಿ, ಚೇರ್‌ಗಳು, ಟೆಂಪೋ ಟ್ರಾವೆಲರ್ ಹಾಗೂ ಕೆಲಸ ಸಾಮಾಗ್ರಿಗಳನ್ನು ಸೀಜ್ ಮಾಡಿದ್ದಾರೆ ಎನ್ನಲಾಗಿದೆ.
ಹೊಸ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಮೀಳಾ ಜೋಷಾಯ್; ಸ್ಟಾರ್ ನಟಿಯರ ಫೋಟೋ ವೈರಲ್
ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನ ಪ್ರಿಯಾಂಕಾ ಈ ಚಿತ್ರದ ನಾಯಕಿಯಾಗಿ ಮಿಂಚುತ್ತಿದ್ದಾರೆ. ತರುಣ್ ಸುಧೀರ್ ಮತ್ತು ಅಂಟ್ಲಾಂಟ ನಾಗೇಂದ್ರ ಅವರು ಬಂಡವಾಳ ಹೂಡಿದ್ದು, ಪುನೀತ್ ರಂಗಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ. ನಾಮಚ ಚಿಲುಮೆಯಲ್ಲಿ ಸುಮಾರು 70 ರಿಂದ 100 ಜನರ ಶೂಟಿಂಗ್‌ಗೆ ಎಂದು ಸೇರಿದರು ಎನ್ನಲಾಗಿದೆ. ಅರಣ್ಯ ಅಧಿಕಾರಿಗಳು ಪ್ರಶ್ನೆ ಮಾಡಿದಾಗ 'ನಾವು ಊಟ ಮಾಡುವುದಕ್ಕೆ ಮಾತ್ರ ನಿಲ್ಲಿಸಿರುವುದು ಇಲ್ಲ ನಾವು ಶೂಟಿಂಗ್ ಮಾಡುತ್ತಿಲ್ಲ' ಎಂದಿದ್ದಾರೆ. ಈ ಸ್ಥಳದಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ತರುಣ್ ಸುಧೀರ್ ಪ್ರೊಡಕ್ಷನ್ ಹೆಸರಿನಲ್ಲಿ ಅನುಮತಿ ಬೇಡಿ ಅರ್ಜಿ ಸಲ್ಲಿಸಿದ್ದರು ಆದರೆ ಅರಣ್ಯ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಇದು ಹೊರತಾಗಿಯೂ ಚಿತ್ರೀಕರಣ ಮಾಡಿದ್ದಕ್ಕೆ ಬಂದ್ ಮಾಡಿ ಹಲವು ಐಟಂಗಳನ್ನು ಸೀಜ್ ಮಾಡಿದ್ದಾರೆ.
ಯಾವ ಸ್ಟಾರ್ ಹೀರೋಗೂ ಕಡಿಮೆ ಇಲ್ಲ ವಿಜಯ್ ರಾಘವೇಂದ್ರ ಪುತ್ರ; ಫೋಟೋ ನೋಡಿ ಎಲ್ಲರೂ ಶಾಕ್
