ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಿಂದ ದೂರ ಉಳಿದು ಅದೇನು ಮಾಡುತ್ತಿದ್ದಾರೆ ಎಂಬುದಾಗಿ ಮಾತ್ರ ಯಾರಿಗೂ ಗೊತ್ತಿಲ್ಲ. ಆದರೆ ಏನೇ ಡಿಫರೆಂಟ್ ಆಗಿ ಮಾಡಿದರೂ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದನ್ನು ಮರೆಯುವುದಿಲ್ಲ. 

ರಮ್ಯಾ, ರಾಧಿಕಾ ಜೊತೆ ತಾರಾ; ಮೂವರು ನಟಿಯರನ್ನು ಒಟ್ಟಾಗಿ ಕಂಡ ನೆಟ್ಟಿಗರು ಶಾಕ್! 

ಹೌದು! ದೆಹಲಿಯಲ್ಲಿ ವಾಸವಿರುವ ರಮ್ಯಾ ತಮ್ಮ ಶ್ವಾನಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ. ಸದಾ ಅವುಗಳ ಜೊತೆ ಇನ್‌ಸ್ಟಾಗ್ರಾಂ ಸ್ಟೋರಿ ಹಾಕುತ್ತಿದ್ದ ನಟಿ ಇದೀಗ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. 'ಇದು ಪರಿಶುದ್ಧವಾದ ಪ್ರೀತಿ' ಎಂದು ಬರೆದುಕೊಂಡು ಮೂರು ಶ್ವಾನಗಳನ್ನು ಮುದ್ದಾಡುತ್ತಿದ್ದಾರೆ. ಸಂಯುಕ್ತಾ ಹೊರ್ನಾಡ್, ಧನ್ಯಾ ರಾಮ್‌ಕುಮಾರ್, ರಕ್ಷಿತಾ ಸೇರಿದಂತೆ ಅನೇಕ ನಟಿಯರು ರಮ್ಯಾ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. 

ಈ ಹಿಂದೆ ಅಂತಾರಾಷ್ಟ್ರೀಯ ಶ್ವಾನ ದಿನದಂದೂ ತಮ್ಮ ಮೂರು ಮುದ್ದು ಮರಿಗಳ ಫೋಟೋ ಹಂಚಿಕೊಂಡಿದ್ದರು. ರಮ್ಯಾ ಸೋಷಿಯಲ್ ಮೀಡಿಯಾಗೆ ಕಮ್ ಬ್ಯಾಕ್‌ ಮಾಡಿದ್ದು ಕೂಡ ತಮ್ಮ ಶ್ವಾನಗಳ ಫೋಟೋ ಶೇರ್ ಮಾಡುವ ಮೂಲಕವೇ. ಇನ್ನು ರಮ್ಯಾ ರಾಜಕೀಯಕ್ಕಾಗಲಿ ಅಥವಾ ಸಿನಿಮಾ ಕ್ಷೇತ್ರಕ್ಕಾಗಲಿ ಕಮ್ ಬ್ಯಾಕ್ ಮಾಡುವುದರ ಬಗ್ಗೆ ಮಾಹಿತಿ ಇಲ್ಲ, ಕೆಲವರು ರಮ್ಯಾ ದರ್ಶನ್ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುತ್ತಾರೆ ಇನ್ನೂ ಕೆಲವರು ಪುನೀತ್‌ಗೆ ಜೋಡಿಯಾಗಲಿದ್ದಾರೆ ಎನ್ನುತ್ತಿದ್ದಾರೆ. ಮಹಿಳಾ ಪ್ರಧಾನ ಪಾತ್ರವಾದರೂ ಮಾಡಿ ಸಿನಿಮಾ ಮಾಡಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.