Asianet Suvarna News Asianet Suvarna News

ಕನ್ನಡ ಸಿನಿಮಾಗಳನ್ನು ಒಟಿಟಿಗಳು ಖರೀದಿಸುತ್ತಿಲ್ಲ; ನಟಿ ರಮ್ಯಾ ಬೇಸರ

ಕನ್ನಡ ಸಿನಿಮಾಗಳನ್ನು ಒಟಿಟಿಗಳು ಖರೀದಿಸುತ್ತಿಲ್ಲ ಎಂದು ನಟಿ ರಮ್ಯಾ ಬೇಸರ ಹೊರಹಾಕಿದ್ದಾರೆ.

Ramya says no OTT takers for Kannada films despite giving successful films like KGF2 and Kantara sgk
Author
First Published Apr 22, 2023, 6:49 PM IST

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವರ್ಷಗಳ ಬಳಿಕ ರಮ್ಯಾ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ನಟನೆ ಜೊತೆಗೆ ರಮ್ಯಾ ನಿರ್ಮಾಮದಲ್ಲಿ ತೊಡಗಿಕೊಂಡಿದ್ದಾರೆ. ಆಪಲ್ ಬಾಕ್ಸ್ ಸಿನಿಮಾ ಮೂಲಕ ರಮ್ಯಾ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಈ ನಡುವೆ ರಮ್ಯಾ ಕನ್ನಡ ಸಿನಿಮಾಗಳನ್ನು ಒಟಿಟಿ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಮತ್ತು ಸೌತ್ ವರ್ಸಸ್ ಬಾಲಿವುಡ್ ಚರ್ಚೆ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಹೆಮ್ಮೆ ವ್ಯಕ್ತಪಡಿಸುತ್ತಿವೆ ಎಂದು ಹೇಳಿದ್ದಾರೆ.  

ಭಾರತೀಯ ಚಿತ್ರರಂಗದಲ್ಲಿ ಹಿಂದಿ ಸಿನಿಮಾಗಳೇ ಕೇಂದ್ರಬಿಂದುವಾಗಿರುತ್ತಿತ್ತು. ಆದರೆ ಈಗ ದಕ್ಷಿಣ ಸಿನಿಮಾಗಳು ಖ್ಯಾತಿಗಳಿಸುತ್ತಿವೆ ದಕ್ಷಿಣ ಸಿನಿಮಾಗಳು ಗುರಿತಿಸಿಕೊಳ್ಳುವ ಸಮಯವಿದು ಎಂದು ರಮ್ಯಾ  ಇಂಡಿಯಾ ಟುಡೇ ಸಂವಾದದಲ್ಲಿ ಮಾತನಾಡಿದ್ದಾರೆ.  

'ನಾನು ಇವಾಗ ದಕ್ಷಿಣ ಭಾರತದ ಚಲನಚಿತ್ರಗಳು ಎಂದು ಹೇಳಲು ಇಷ್ಟಪಡುವುದಿಲ್ಲ. ನಾವು ಈಗ  ಗುರುತಿಸಿಕೊಳ್ಳುತ್ತಿದ್ದೇವೆ ಮತ್ತು ನಾವು ನಿಜವಾಗಿಯೂ ಹೆಮ್ಮೆಪಡಬೇಕು. ನಾವು ಭಾರತದಲ್ಲಿನ ಚಲನಚಿತ್ರಗಳ ಬಗ್ಗೆ ಮಾತನಾಡುವಾಗ ಅದು ಯಾವಾಗಲೂ ಕೇವಲ ಹಿಂದಿ ಚಿತ್ರಗಳು ಅಂತ ಮಾತನಾಡುತ್ತಿದ್ದರು. ಆದರೀಗ ತಮಿಳು, ತೆಲುಗು, ಕನ್ನಡ, ಮಲಯಾಳಂ ಅಂತ ಆಗಿದೆ. ಅದರಲ್ಲೂ ಮಲಯಾಳಂ ಬಗ್ಗೆ ಯಾರೂ ಮಾತನಾಡಬೇಕಿಲ್ಲ ಅವರು ಉತ್ತಮ ಸಿನಿಮಾಗಳನ್ನು ನೀಡುತ್ತಿದ್ದಾರೆ' ಎಂದು ಹೇಳಿದರು. 

'ನಾವು ದಕ್ಷಿಣ ಭಾರತದ  ಸಿನಿಮಾಗಳೊಂದಿಗೆ ಸ್ಪರ್ಧೆ ಮಾಡಬೇಕು ಎಂದು ಅವರು ಹೇಳುತ್ತಿರುವಾಗ ನನಗೆ ಸಂತೋಷವಾಗಿದೆ. ಅವರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಮಗೆ ಹೆಮ್ಮೆ ಆಗುತ್ತೆ' ಎಂದು ರಮ್ಯಾ ಹೇಳಿದರು. 

ರಮ್ಯಾ ಇಂಗ್ಲಿಷ್‌, ಪ್ರಭುದೇವ್ ಚಾಮರಾಜನಗರ ಕನ್ನಡ ಬಗ್ಗೆ ವೈರಲ್ ಪೋಸ್ಟ್‌; ರಮೇಶ್ ಅರವಿಂದ್ ಪ್ರತಿಕ್ರಿಯೆ ವೈರಲ್

ಕನ್ನಡ ಸಿನಿಮಾಗಳನ್ನು ಒಟಿಟಿ ಖರೀದಿಸುತ್ತಿಲ್ಲ 

ಇದೇ ವೇಳೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡ ಸಿನಿಮಾಗಳನ್ನು ನಿರ್ಲಕ್ಷ ಮಾಡುತ್ತಿರುವ ಬಗ್ಗೆ ಬೇಸರ ಹೊರಹಾಕಿದರು. 'ದುಃಖದ ಸಂಗತಿಯೆಂದರೆ, ಕನ್ನಡ ಚಿತ್ರಗಳನ್ನು ಒಟಿಟಿ ತೆಗೆದುಕೊಳ್ಳುತ್ತಿಲ್ಲ. ಅವರು ತಮಿಳು, ತೆಲುಗು ಅಥವಾ ಮಲಯಾಳಂ ಚಿತ್ರಗಳು ಖರೀದಿಸುತ್ತಾರೆ. ಆದರೆ ಅವರು ಕನ್ನಡ ಚಲನಚಿತ್ರಗಳನ್ನು ಖರೀದಿಸುವುದಿಲ್ಲ. ಇದು ಅವರ ಕೆಲವು ನೀತಿಯಾಗಿದೆ. ಕನ್ನಡ ಚಿತ್ರಗಳು ಕಾಂತಾರವಾಗಲಿ ಅಥವಾ ಕೆಜಿಎಫ್ 2 ಆಗಿರಲಿ ಇಷ್ಟು ದೊಡ್ಡ ಸಕ್ಸಸ್ ಕಂಡರೂ ತೆಗೆದುಕೊಳ್ಳುವವರು ಇಲ್ಲ. ಕನ್ನಡ ಚಿತ್ರ ಇನ್ನೂ ಕಷ್ಟಸಾಧ್ಯ' ಎಂದು ಹೇಳಿದರು. 

ನಿರ್ಮಾಪಕಿ ರಮ್ಯಾಗೆ ನಿರಾಳ: 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾಗೆ ತಡೆಯಾಜ್ಞೆ ತೆರವು

'ನಮ್ಮಲ್ಲಿ ಅಮೆಜಾನ್ ಇದೆ, ಅದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ನಂತರವೇ ತೆಗೆದುಕೊಳ್ಳುತ್ತದೆ. ಸೋನಿ ಖರೀದಿಸುತ್ತಿಲ್ಲ. ನೆಟ್‌ಫ್ಲಿಕ್ಸ್ ಖರೀದಿಸುತ್ತಿಲ್ಲ. ಕೇವಲ Voot ಮತ್ತು ಝೀ ಮಾತ್ರ ತೆಗೆದುಕೊಳ್ಳುವುದು. ಆಯ್ಕೆಗಳು ತುಂಬಾ ಸೀಮಿತವಾಗಿವೆ.  OTT ಸಿನಿಮಾ ಖರೀದಿಗೆ ಮುಂದಾದರೂ ಕಡಿಮೆ ಮೊತ್ತ ಪಾವತಿಸುತ್ತಾರೆ' ಎಂದು ರಮ್ಯಾ ಹೇಳಿದ್ದಾರೆ. 
 

Follow Us:
Download App:
  • android
  • ios