'ರಾಮಾ ರಾಮಾ ರೇ' ಖ್ಯಾತಿಯ ಧರ್ಮಣ್ಣ ಎರಡನೇ ಬಾರಿ ತಂದೆಯಾದ ಸಂಭ್ರಮದಲ್ಲಿದ್ದಾರೆ.

ಕನ್ನಡ ಚಿತ್ರರಂಗದ ಹಾಸ್ಯ ನಟ ಧರ್ಮಣ್ಣ ಹೆಣ್ಣು ಮಗುವಿಗೆ ತಂದೆಯಾದ ಸಂತಸದಲ್ಲಿದ್ದಾರೆ. ಕಿಚ್ಚ ಸುದೀಪ್‌ ಅಭಿನಯದ ರಾಮಾ ರಾಮಾ ರೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಧರ್ಮಣ್ಣ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಹೆಣ್ಣು ಮಗುವಿಗೆ ತಾಯಾದ ಅಕ್ಷತಾ... ಹೆಸರು ಆಗಲೆ ಇಟ್ಟಾಗಿದೆ! 

ಟಾಪ್‌ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಧರ್ಮಣ್ಣ ಇದೀಗ ಎರಡನೇ ಮಗುವನ್ನು ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ. ಧರ್ಮಣ್ಣ ಹಾಗೂ ಕಾವ್ಯ ದಂಪತಿಗೆ ಶಶಾಂಕ್‌ ಎಂಬ ಗಂಡು ಮಗನಿದ್ದಾನೆ.

ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಧರ್ಮಣ್ಣ ಮೂಲತಃ ಕೃಷಿಕರು. 2014ರಲ್ಲಿ ಕುಟುಂಬದವರು ನೋಡಿದ ಹುಡುಗಿ ಕಾವ್ಯರನ್ನು ಮದುವೆಯಾಗಿದ್ದಾರೆ. ದರ್ಶನ್‌ ಜತೆ ರಾಬರ್ಟ್‌, ಪೃಥ್ವಿ ಜೊತೆ ಶುಗರ್‌ಲೆಸ್‌ ಹಾಗೂ ಪ್ರಜ್ವಲ್ ದೇವರಾಜ್‌ ಜತೆ ಇನ್‌ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಧರ್ಮಣ್ಣ ಅಭಿನಯಿಸಿದ್ದಾರೆ.