ಮೆಗಾ ಸ್ಟಾರ್ ಚಿರಂಜೀವಿ ಮಕ್ಕಳೆಲ್ಲರೂ ಚಿತ್ರರಂಗದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಹಿರಿಯ ಪುತ್ರಿ ಸುಶ್ಮಿತಾ ನಿರ್ಮಾಪಕಿಯಾಗಿ ಹಾಗೂ ಪುತ್ರ ರಾಮ್‌ ಚರಣ್‌ ನಟನಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕೆಲವು ವರ್ಷಗಳಿಂದ ತಂದೆಯ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಶ್ಮಿತಾ, ಈಗ ಮತ್ತೆ ನಿರ್ದೇಶನಕ್ಕೆ ಕಾಲಿಟ್ಟು ಸಿನಿಮಾವೊಂದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ರಾಮ್ ಚರಣ್ - ಉಪಾಸನಾ ಲವ್‌ ಸ್ಟೋರಿಯಲ್ಲೊಂದು ಟ್ವಿಸ್ಟ್‌! ಕ್ಯೂಟ್‌ ಕಪಲ್‌ ನೋಡಿ 

ಸುಶ್ಮಿತಾ ನಿರ್ದೇಶನದಲ್ಲಿ 'ಶೂಟೌಟ್‌ ಆಟ್‌ ಆಲಿಯಾ' ಶೀರ್ಷಿಕೆಯ ಸಿನಿಮಾ ತೆಗೆದಿದ್ದಾರೆ. ಈ ಸಿನಿಮಾ ಝೀ 5ನಲ್ಲಿ ಬಿಡುಗಡೆ ಮಾಡಲಾಗತ್ತಿದೆ. ಇದರ ಪ್ರಚಾರ ಜೋರಾಗಿ ನಡೆಯುತ್ತಿದ್ದು, ತಮ್ಮ ರಾಮ್ ಚರಣ್‌ ಭಾಗಿಯಾಗಿದ್ದರು.  ಅಲ್ಲದೇ ಪ್ರಚಾರಕ್ಕೆಂದು ಗನ್‌ ಹಿಡಿದು ಪೋಸ್‌ ಕೊಟ್ಟಿದ್ದಾರೆ. ಅಕ್ಕನಿಗಾಗಿ ಏನೂ ಬೇಕಾದರೂ ಮಾಡುವುದಾಗಿ ಹೇಳಿಕೊಂಡಿದ್ದಾರೆ.

 

ರಾಮ್‌ ಚರಣ್‌ಗೆ ಅಕ್ಕ ಸುಶ್ಮಿತಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಅಕ್ಕನ ಮಾತನ್ನು ಎಂದಿಗೂ ಮೀರುವುದಿಲ್ಲ. ಬಹಳ ಸಮಯದ ನಂತರ ಸಿನಿಮಾ ನಿರ್ದೇಶನ ಮಾಡುತ್ತಿರುವ ಕಾರಣ ಪ್ರತಿ ಹಂತದಲ್ಲಿಯೂ ಆಕೆಯ ಜೊತೆಗಿದ್ದು, ಸಹಾಯ ಮಾಡುತ್ತೇವೆ ಎಂದಿದ್ದಾರೆ ರಾಮ್‌. ಆದರೆ ಈಗ ಮ್ಯಾಟರ್ ಆಗುತ್ತಿರುವುದು ಸಿನಿಮಾನೂ ಅಲ್ಲ, ರಾಮ್‌ ಚರಣ್ ಮಾತೂ ಅಲ್ಲ ಬದಲಿಗೆ ಅವರು ಕೈಯಲ್ಲಿ ಹಿಡಿದು ನಿಂತಿದ್ದ ಗನ್.

ಪವನ್ ಕಲ್ಯಾಣ್ ಫ್ಯಾನ್ಸ್ ಕುಟುಂಬಕ್ಕೆ ರಾಮ್ ಚರಣ್ 7.5 ಲಕ್ಷ ನೆರವು 

'ಸಿನಿಮಾ ಹೆಸರಿನಲ್ಲಿ ಶೂಟೌಟ್‌ ಇದೆ ಅಂತ ಸ್ಟೇಜ್‌ ಮೇಲೆ ಬರ್ತಿದ್ದ ಹಾಗೆ ಗನ್ ಹಿಡಿತ್ತಿದ್ದೀರಾ?' ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು 'ಪ್ರಚಾರಕ್ಕೆ ಗನ್ ಹಿಡಿದಿದ್ದೀರಾ? ಮುಂದೆ ಅಕ್ಕನ ನಿಮಗಾಗಿ ಸಿನಿಮಾ ಮಾಡ್ತಾರೆ ಅದರಲ್ಲಿ ಲಾಂಗ್ ಹಿಡಿಯಿರಿ,' ಎಂದು ಕಮೆಂಟ್ ಮಾಡಿದ್ದಾರೆ.