Asianet Suvarna News Asianet Suvarna News

ಯಾರ ದೃಷ್ಟಿಯೂ ಬೀಳದೆ ಇರಲಿ: ಒಂದೇ ತಟ್ಟೆಯಲ್ಲಿ ಬಿರಿಯಾನಿ ತಿಂದ ರಕ್ಷಿತ್, ರಿಷಬ್, ಪ್ರಮೋದ್‌ಗೆ ಅಭಿಮಾನಿಗಳ ಹಾರೈಕೆ

ರಕ್ಷಿತ್, ರಿಷಬ್, ಪ್ರಮೋದ್‌ ಶೆಟ್ಟಿ ಒಂದೇ ತಟ್ಟೆಯಲ್ಲಿ ಬಿರಿಯಾನಿ ತಿಂದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು  ಯಾರ ದೃಷ್ಟಿ ಬೀಳದೆ ಇರಲಿ: ಎಂದು ಹಾರೈಸುತ್ತಿದ್ದಾರೆ. 

Rakshith Shetty Rishab Shetty And Pramod Shetty eat biryani together from one plate video viral sgk
Author
First Published Jul 9, 2023, 12:00 PM IST | Last Updated Jul 9, 2023, 12:02 PM IST

ಸ್ಯಾಂಡಲ್‌ವುಡ್‌ನಲ್ಲಿ ಶೆಟ್ರ ಹವಾ ಜೋರಾಗಿದೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹೀಗೆ ಅನೇಕ ಶೆಟ್ರ ಸ್ನೇಹಿತರು ಉತ್ತಮ ಸಿನಿಮಾಗಳನ್ನು ಮಾಡುತ್ತಾ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಉತ್ತಮ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಬ್ಬರ ಸ್ನೇಹ ಸಿನಿಮಾರಂಗಕ್ಕೂ ಬರುವ ಮೊದಲೇ ಇತ್ತು. ಇಂದಿಗೂ ಹಾಗೆ ಇದೆ. ಒಬ್ಬರಿಗೂ ಸಹಾಯ ಮಾಡುಕೊಳ್ಳುತ್ತಾ, ಬೆಂಬಲ ನೀಡಿಕೊಳ್ಳುತ್ತಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯ ಎಲ್ಲರೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕಾಂತಾರ ಸೂಪರ್ ಸಕ್ಸಸ್ ಬಳಿಕ ರಿಷಬ್ ಹವಾ ರಾಷ್ಟ್ರವ್ಯಾಪಿ ಪಸರಿಸಿದೆ. 

ಅಂದಹಾಗೆ ರಿಷಬ್ ಶೆಟ್ಟಿ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಜುಲೈ 7 ರಿಷಬ್ ಶೆಟ್ಟಿ ಅವರಿಗೆ ಹುಟ್ಟುಹಬ್ಬ ಸಂಭ್ರಮ. ಕಾಂತಾರ ಸೂಪರ್ ಸಕ್ಸಸ್ ಬಳಿಕ ರಿಷಬ್ ಮೊದಲ ಬಾರಿಗೆ ಅಭಿಮಾನಿಗಳ ಜೊತೆ ಬರ್ತಡೇ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ರಿಷಬ್ ಬರ್ತಡೇ ಆಚರಿಸಿಕೊಂಡರು. ರಿಷಬ್ ಶೆಟ್ಟಿಗೆ ಅಭಿಮಾನಿಗಳು ಮತ್ತು ಸಿನಿಮಾರಂಗದ ಅನೇಕ ಗಣ್ಯರು ಶುಭಾಶಯತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. 

Rishab Shetty: ಹುಲಿ ವೇಷಧಾರಿಗಳ ಜೊತೆ ಮಸ್ತ್‌ ಡ್ಯಾನ್ಸ್‌ ಮಾಡಿದ ರಿಷಬ್‌ ಶೆಟ್ಟಿ

ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ನಿರೂಪಕಿ, ನಿರ್ದೇಶಕಿ ಶೀತಲ್ ಶೆಟ್ಟಿ ವಿಶೇಷ ವಿಡಿಯೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಹೌದು, ರಿಷಬ್, ರಕ್ಷಿತ್ ಮತ್ತು ಪ್ರಮೋದ್ ಶೆಟ್ಟಿ ಒಂದೇ ತಟ್ಟೆಯಲ್ಲಿ ಬಿರಿಯಾನಿ ತಿನ್ನುತ್ತಿರುವ ವಿಡಿಯೋವನ್ನು ಶೀತಲ್ ಹಂಚಿಕೊಂಡಿದ್ದಾರೆ. ಮೂವರು ಶೆಟ್ಟರುಗಳ ಅಪರೂಪದ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿದೆ. 

ಅನೇಕರು ನಿಮ್ಮ ಸ್ನೇಹಕ್ಕೆ ಯಾರ ದೃಷ್ಟಿಯೂ ಬೀಳದೆ ಇರಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇನ್ನೂ ಅನೇಕರು ರಾಜ್ ಬಿ ಶೆಟ್ಟಿ ಮಿಸ್ಸಿಂಗ್ ಎಂದು ಹೇಳುತ್ತಿದ್ದಾರೆ.  ಲಾಸ್ಟ್ ಪೆಗ್ ಏರಿಸಿ ಊಟದ ಸಮಯನಾ ಎಂದು ಕೇಳುತ್ತಿದ್ದಾರೆ. ಅನೇಕರು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ಬಳಿಕ ಫೋಟೋದಲ್ಲಿ ರಿಷಬ್ ಪತ್ನಿ, ಪ್ರಮೋದ್ ಶೆಟ್ಟಿ ಪತ್ನಿ ಹಾಗೂ ಶೀತಲ್ ಶೆಟ್ಟಿ ಪೋಸ್ ನೀಡಿದ್ದಾರೆ.

ಕನ್ನಡ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಆಗಲು ಕನ್ನಡಿಗರೇ ಕಾರಣ: ರಿಷಬ್‌ ಶೆಟ್ಟಿ

ರಿಷಬ್ ಶೆಟ್ಟಿ ಸದ್ಯ ಕಾಂತಾರ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ರಕ್ಷಿತ್ ಶೆಟ್ಟಿ ಸದ್ಯ ಸಪ್ತಾ ಸಾಗರದಾಚೆ ಎಲ್ಲೋ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಜೊತೆಗೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಜೊತೆ ರಿಚರ್ಡ್ ಆಂಟನಿ ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯ ಕೂಡ ಮಾಡುತ್ತಿದ್ದಾರೆ. 

Latest Videos
Follow Us:
Download App:
  • android
  • ios