Asianet Suvarna News Asianet Suvarna News

ಕನ್ನಡ ರಾಜ್ಯೋತ್ಸವ; ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ 'ಹಚ್ಚೇವು ಕನ್ನಡದ ದೀಪ..' ಹಾಡು, ಹೇಗಿದೆ?

ಕನ್ನಡ ರಾಜೋತ್ಸವದ ಪ್ರಯುಕ್ತ ನಟ ರಕ್ಷಿತ್ ಶೆಟ್ಟಿ ಹಚ್ಚೇವು ಕನ್ನಡದ ದೀಪ ಹಾಡನ್ನು ಬಿಡುಗಡೆ ಮಾಡಿದ್ದಾರೆ. 

rakshith Shetty released Hacchevu Kannadada deepa song for ocation of kannada rajyotsava sgk
Author
First Published Nov 1, 2022, 12:39 PM IST

ನವೆಂಬರ್​ ಎಂದರೆ ಕನ್ನಡಿಗರಿಗೆ ಹಬ್ಬ. ಹಬ್ಬದ ವಾತಾವರಣ ನಿರ್ಮಾಣ ಆಗಿರುತ್ತದೆ. ಎಲ್ಲಿ ನೋಡಿದ್ರು ಕೆಂಪು-ಹಳದಿ ಬಾವುಟಗಳೇ ರಾರಾಜಿಸುತ್ತಿದೆ. ಇಡೀ ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದೆ. ಎಲ್ಲಿ ನೋಡಿದರೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳೇ ಕಾಣಿಸುತ್ತಿದೆ, ಕನ್ನಡದ ಹಾಡುಗಳೇ ಕೇಳಿಸುತ್ತಿದೆ. ಕನ್ನಡಿಗರ ಹೆಮ್ಮೆಯ ಹಬ್ಬ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ಕಲಾವಿದರೂ ಶುಭಾಶಯ ತಿಳಿಸುತ್ತಿದ್ದಾರೆ. ಕನ್ನಡದ ಕಂಪನ್ನು ಪಸರಿಸುವ ಅನೇಕ ಹಾಡುಗಳಿವೆ. ಹಾಡಿನ ಸಾಲನ್ನು ಬರೆದು ಅಭಿಮಾನಿಗಳಿಗೆ ಶುಭಾಶಯ ತಿಲಿಸುತ್ತಿದ್ದಾರೆ. ಈ ಸಮಯದಲ್ಲಿ ನಟ  ರಕ್ಷಿತ್ ಶೆಟ್ಟಿ ಹಲವು ವರ್ಷಗಳಿಂದ ಕನ್ನಡ ಕಂಪನ್ನು ಹರಡುತ್ತಿರುವ ಪ್ರಸಿದ್ಧ ಹಚ್ಚೇವು ಕನ್ನಡದ ದೀಪ ಹಾಡನ್ನು ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ. 

ಅನೇಕ ಕನ್ನಡ ಗೀತೆಗಳಲ್ಲಿ ಒಂದಾಗಿರುವ ಡಿ ಎಸ್ ಕರ್ಕಿ ಅವರ 'ಹಚ್ಚೇವು ಕನ್ನಡದ ದೀಪ...' ಹಾಡನ್ನು ರೀ ಕ್ರಿಯೇಟ್ ಮಾಡಿದ್ದಾರೆ. ಹೊಸ ವರ್ಸನ್ ನಲ್ಲಿ ಹಾಡನ್ನು ನಿರ್ಮಿಸಿ ರಿಲೀಸ್ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಮತ್ತು ಹರ್ಷಿಕಾ ದೇವನಾಥ್ ಧ್ವನಿಯಾಗಿದ್ದಾರೆ. 

ಹಚ್ಚೇವು ಕನ್ನಡದ ದೀಪ..ಈ ಹಾಡು ಕೇಳಿದಾಕ್ಷಣ ಖ್ಯಾತ ಸಂಗೀತಗಾರ ಸಿ ಅಶ್ವತ್ ಅವರು ನೆನಪಾಗುತ್ತಾರೆ. ಈ ಹಾಡಿಗೆ ಅವರೇ ಸಂಗೀತ ನೀಡಿದ್ದರು. ಇಂದಿಗೂ  ಅವರ ಸಂಗೀತ ನಿರ್ದೇಶನದಲ್ಲೇ ಮೂಡಿಬಂದಿರುವ ಹಾಡನ್ನು ಕೇಳುತ್ತಿದ್ದೆವು. ಇದೀಗ ಅಜನೀಶ್ ಲೋಕನಾಥ್ ಹೊಸ ಟಚ್ ನೀಡಿದ್ದಾರೆ.  

ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ Jr.NTR

ಈ ಹಾಡನ್ನು ರಕ್ಷಿತ್ ಶೆಟ್ಟಿ ಅವರ ಪರಂವಃ ಮ್ಯೂಸಿಕ್‌ನಲ್ಲಿ ರಿಲೀಸ್ ಮಾಡಲಾಗಿದೆ. ಈ ಹಾಡನ್ನು ಬಿಡುಗಡೆ ಮಾಡಿ, 'ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು' ತಿಳಿಸಿದ್ದಾರೆ. ಜೊತೆಗೆ  'ಹಲವಾರು ವರ್ಷಗಳಿಂದ ಕನ್ನಡ ಕಂಪನ್ನು ಹರಡುತ್ತಿರುವ ಹಚ್ಚೇವು ಕನ್ನಡದ ದೀಪ ನಮ್ಮ ಪರಂವಃ ಪ್ರೀತಿಯ ಪ್ರಯತ್ನದಲ್ಲಿ' ಎಂದು ಹೇಳಿದ್ದಾರೆ. 

ಡಿಎಸ್ ಕರ್ಕಿ ಬರೆದಿರುವ ಹಚ್ಚೇವು ಕನ್ನಡ ದೀಪ ಹಾಡನ್ನು ರಕ್ಷಿತ್ ಮತ್ತು ತಂಡ  ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕದ ಕಡಲ ತೀರ, ಪರ್ವತ ಶ್ರೇಣಿ, ಬುಡಕಟ್ಟು ಭಾಗಗಳು ಹಾಗೂ ಐತಿಹಾಸಿಕ ತಾಣಗಳನ್ನು ಸುತ್ತಿ ಸೆರೆಹಿಡಿಯಲಾಗಿದೆ. ಈ ಹಾಡಿಗೆ ಕನ್ನಡ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ರಕ್ಷಿತ್ ಶೆಟ್ಟಿ ಸಿನಿಮಾ ವಿಚಾರಕ್ಕೆ ಬರುವುದಾದರೆ  777 ಚಾರ್ಲಿ ಸಕ್ಸಸ್‌ನಲ್ಲಿರುವ ಸಿಂಪಲ್ ಸ್ಟಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಶೂಟಿಂಗ್ ಮುಗಿಸಿರುವ ರಕ್ಷಿತ್ ರಿಚರ್ಡ್ ಆಂಟೋನಿಯ ತಯಾರಿಯಲ್ಲಿದ್ದಾರೆ.

Follow Us:
Download App:
  • android
  • ios