Asianet Suvarna News Asianet Suvarna News

777 ಚಾರ್ಲಿ ಹಾಡಿನಲ್ಲಿ ಆರ್ಣವ, ಅಜಿಂಕ್ಯ ಕೋರಸ್‌

ರಕ್ಷಿತ್‌ ಶೆಟ್ಟಿನಟಿಸಿರುವ ‘777 ಚಾರ್ಲಿ’ ಚಿತ್ರದ ‘ಟಾರ್ಚರ್‌ ಸಾಂಗ್‌’ ಬಿಡುಗಡೆಯಾಗಿ ಲಕ್ಷಾಂತರ ವೀಕ್ಷಣೆ ಪಡೆಯುತ್ತಿದೆ.
 

Rakshith Shetty 777 Charlie Torture Song goes viral vcs
Author
Bangalore, First Published Sep 10, 2021, 10:36 AM IST
  • Facebook
  • Twitter
  • Whatsapp

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆ 777 ಚಾರ್ಲಿ  ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.  ನೊಬಿನ್‌ ಪೌಲ್‌ ಸಂಗೀತ ನಿರ್ದೇಶನದ ವಿಜಯ ಪ್ರಕಾಶ್‌ ಹಾಡಿರುವ ಈ ಹಾಡು ಮುಗಿದ ಬಳಿಕವೂ ಮನಸ್ಸಲ್ಲಿ ಉಳಿಯೋದು ‘ರಾಪಾಪಾಪಾ ರಾಪಾಪಪಾಪಾ..’ ಅನ್ನೋ ಮಕ್ಕಳ ಜೋಶ್‌ನ ದನಿ. 

ಈ ಹಾಡಿಗೆ ಧ್ವನಿಯಾದ ಮಕ್ಕಳು ಆರ್ಣವ, ಅಜಿಂಕ್ಯ. ಮಕ್ಕಳ ಹಾಡಿನ ವೀಡಿಯೋವನ್ನು ನೋಡಿದ ಚಿತ್ರತಂಡ ಈ ಅವಕಾಶ ನೀಡಿತ್ತು. ಐದೂ ಭಾಷೆಯಲ್ಲೂ ಈ ಮಕ್ಕಳ ಧ್ವನಿ ಇರೋದು ವಿಶೇಷ. ಮೂರನೇ ಕ್ಲಾಸ್‌ ಓದುತ್ತಿರುವ ಅಜಿಂಕ್ಯ ಈ ಹಿಂದೆ ಕಾರ್ಟೂನ್‌ ಸಿನಿಮಾದ ಹೀರೋ ಪಾತ್ರಕ್ಕೆ ಡಬ್ಬಿಂಗ್‌ ಮಾಡಿದ ಪ್ರತಿಭೆ. ಇಬ್ಬರೂ ಸಹೋದರರಿಗೆ ತಾಯಿ, ಹಿರಿಯ ಗಾಯಕಿ ನಾಗಚಂದ್ರಿಕಾ ಭಟ್‌ ಸಂಗೀತ ಕಲಿಸುತ್ತಿದ್ದಾರೆ. ಇವರು ಕನ್ನಡಪ್ರಭ ಪತ್ರಿಕೆಯ ಅಸಿಸ್ಟೆಂಟ್‌ ಎಡಿಟರ್‌ ರವಿಶಂಕರ ಭಟ್‌ ಅವರ ಮಕ್ಕಳು.

ಲಕ್ಷ್ಮಿ ಹಬ್ಬದ ದಿನ ಆಡಿ ಕ್ಯೂ8 ಕಾರು ಖರೀದಿಸಿದ ರಕ್ಷಿತ್ ಶೆಟ್ಟಿ!

ಚಾರ್ಲಿ ಚಿತ್ರದಲ್ಲಿ ಬಳಸಿರುವ ನಾಯಿ ಹಿಂದೆಯೂ ಒಂದು ಕಥೆ ಇದೆ. ಟೀಸರ್ ನೋಡಿದವರೆಲ್ಲ ಚಾರ್ಲಿ ನಾಯಿಯ ಫ್ಯಾನ್‌ಗಳಾಗಿದ್ದಾರೆ. ಕವಲು ದಾರಿ ಸಿನಿಮಾದಲ್ಲಿ ಅನಂತ್‌ನಾಗ್ ಅವರಿಗೂ ಒಂದು ನಾಯಿಯನ್ನು ಟ್ರೈನ್‌ ಮಾಡಿ ಕೊಟ್ಟಿರುತ್ತಾರೆ ಅದೇ ನಾಯಿ ಈ ಚಿತ್ರದಲ್ಲಿ ಬಳಸಲಾಗಿದೆ. 

 

Follow Us:
Download App:
  • android
  • ios