ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಆಗಿ ಎರಡು ವರ್ಷಗಳೇ ಕಳೆದಿವೆ. ಆದರೂ ಆಗಾಗ ಬ್ರೇಕಪ್ ಸದ್ದು ಮಾಡುತ್ತಲೇ ಇರುತ್ತದೆ. ಇಬ್ಬರೂ ಎಲ್ಲಿಯೂ ಈ ಬಗ್ಗೆ ಅಷ್ಟೊಂದು ಮಾತನಾಡಿರಲಿಲ್ಲ. ಇಬ್ಬರೂ ಅವರವರ ಕರಿಯರ್‌ನಲ್ಲಿ ಬ್ಯುಸಿಯಾಗಿದ್ದಾರೆ. 

ಬಿಕಿನಿ ಫೋಟೋ ನೋಡಿ ನಟಿಗೆ 'ದೇಶ ಬಿಟ್ಟು ಹೋಗು' ಎಂದ ನೆಟ್ಟಿಗರು!

ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ' ಜೀವನ ನಮಗೆ ಸಾಕಷ್ಟು ಅನುಭವಗಳನ್ನು ಕೊಡುತ್ತದೆ. ಅವುಗಳಲ್ಲಿ ಒಂದಷ್ಟು ಒಳ್ಳೆಯ ಅನುಭವಗಳು, ಇನ್ನೊಂದಿಷ್ಟು ಕೆಟ್ಟ ಅನುಭವಗಳು.  ಪ್ರತಿಯೊಂದು ಅನುಭವಗಳೂ ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಮುಂದಕ್ಕೆ ಕೊಂಡೊಯ್ಯುತ್ತದೆ' ಎಂದಿದ್ದಾರೆ. 

ಗಟ್ಟಿಮೇಳ 'ಜಗಳ ಗಂಟಿ' ನಿಶಾ ರವಿಕುಮಾರ್ ಗ್ಲಾಮರಸ್ ಫೋಟೋ!

'ಲೈಫಲ್ಲಿ ಸಾಕಷ್ಟು ಬ್ರೇಕಪ್‌ಗಳಾಗುತ್ತದೆ. ಅದು ಸಂಬಂಧದಲ್ಲೇ ಇರಬಹುದು, ಫ್ರೆಂಡ್‌ಶಿಪ್‌ನಲ್ಲೇ ಇರಬಹುದು. ಇದನ್ನೆಲ್ಲಾ ದಾಟಿಕೊಂಡು ಮುಂದೆ ಹೋಗಬೇಕು. ಇವೆಲ್ಲಾ ಚಿಕ್ಕ ಚಿಕ್ಕ ಸಂಗತಿಗಳು' ಎಂದಿದ್ದಾರೆ. 

ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡಿ. 27 ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು ಭಾರೀ ನಿರೀಕ್ಷೆ ಮೂಡಿಸಿದೆ.