ಸ್ಯಾಂಡಲ್ ವುಡ್ ಮಟ್ಟಿಗೆ ಗುರುವಾರ ಹಬ್ಬದ ವಾತಾವಣ.  ಬಹು ದಿನಗಳಿಂದ ಕಾಯುತ್ತಿದ್ದ 'ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ಗುರುವಾರ ಬಿಡುಗಡೆಯಾಗಿ ಯೂ ಟ್ಯೂಬ್ ನಲ್ಲಿ ಮುಂದೆ ನುಗ್ಗುತ್ತಿದೆ.

ಸ್ಯಾಂಡಲ್ ವುಡ್ ನಟಿಯ ಮದುವೆಗೆ ಯಾರೆಲ್ಲ ಬಂದಿದ್ರು?

80ರ ದಶಕದ ರೆಟ್ರೋ ಲುಕ್​ಲ್ಲಿ ರಕ್ಷಿತ್​ ಶೆಟ್ಟಿ ಮಿಂಚಿದ್ದಾರೆ. ಇಂದು ಐದೂ ಭಾಷೆಗಳಲ್ಲೂ ಎಎಸ್​ಎನ್​​ ಟ್ರೈಲರ್​ ಬಿಡುಗಡೆಯಾಗಿದೆ. 'ಅವನೇ ಶ್ರೀಮನ್ನಾರಾಯಣ’ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಹೊರಬರಲಿದ್ದು 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ.

ರಕ್ಷಿತ್​ ಶೆಟ್ಟಿ ಜತೆ ಶಾನ್ವಿ ಶ್ರೀವಾಸ್ತವ್​, ಪ್ರಮೋದ್​ ಶೆಟ್ಟಿ, ಅಚ್ಚ್ಯುತ್​ ಕುಮಾರ್​, ಬಾಲಾಜಿ ಮನೋಹರ್​ ತಾರಾಗಣದಲ್ಲಿದ್ದಾರೆ. ಈ ಸಿನಿಮಾ ಡಿಸೆಂಬರ್​ ಅಂತ್ಯದಲ್ಲಿ ತೆರೆಗಪ್ಪಳಿಸಲಿದೆ. ಕೆಜಿಎಫ್ ಮತ್ತು ಪೈಲ್ವಾನ್ ನಂತರ ಮತ್ತೆ ಅಷ್ಟೆ ಕುತೂಹಲ ಕೆರಳಿಸಿರುವ ಚಿತ್ರ ಇದಾಗಿದೆ.

ಖಡಕ್ ಡೈಲಾಗ್ ಗಳ ಮೂಲಕ ರಕ್ಷಿತ್ ಶೆಟ್ಟಿ ಎಂಟ್ರಿ ಕೊಡುತ್ತಾರೆ. ಹಾಗಾದರೆ ಟ್ರೇಲರ್ ಹೇಗಿದೆ ನೀವು ಒಮ್ಮೆ ನೋಡಿಕೊಂಡು ಬನ್ನಿ. ಅದು ಕನ್ನಡದಲ್ಲಿ.