ನಟಿ ಲೀಲಾವತಿ ಕುರಿತು ಡಾ.ರಾಜ್ ಕುಮಾರ್ ಅಭಿಮಾನಿ ಎನ್.ಆರ್. ರಮೇಶ್ ಅವರು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಲೀಲಾವತಿ ಅವರ ವೈಯಕ್ತಿಕ ಜೀವನದ ರಹಸ್ಯಗಳು ಹಾಗೂ ವಿನೋದ್ ರಾಜ್ ವಿದೇಶಕ್ಕೆ ಹೋಗದಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಬೆಂಗಳೂರು (ಮಾ.04): ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ಅವರು ಜೀವನದುದ್ದಕ್ಕೂ ವಿವಾದದ ಕೇಂದ್ರಬಿಂದುವಾಗಿಯೇ ತಮ್ಮ ಜೀವನ ಸವೆಸಿದ್ದಾರೆ. ಇದೀಗ ಲೀಲಾವತಿ ಅವರು ಕಾಲವಾದ ನಂತರ ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಡಾ.ರಾಜ್ ಕುಮಾರ್ ಸಂಘದ ಮುಖ್ಯಸ್ಥ ಎನ್.ಆರ್. ರಮೇಶ್ ಅವರು ಲೀಲಾವತಿ ಅವರು ಮಹಾಲಿಂಗ ಭಾಗವತರ 3ನೇ ಹೆಂಡತಿ ಆಗಿದ್ದಾರೆ. ಆದರ ಜೊತೆಗೆ, ಈವರೆಗೆ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಯಾವುದೇ ವಿದೇಶಕ್ಕೆ ಹೋಗದಿರಲು ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಖಾಸಗಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದ ವಿಡಿಯೋ ಭಾರೀ ವೈರಲ್ ಆಗಿದೆ. ಇದೀಗ ಅದರ ತುಣುಕನ್ನು ರಮೇಶ್ ಎಂ. ಎನ್ನುವವರು ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಎನ್.ಆರ್. ರಮೇಶ್ ಅವರು 'ಲೀಲಾವತಿ ನಿಜವಾದ ಹೆಸರು ಲೀನಾ ಸೀಕ್ವೆರಾ ಮತ್ತು ಅವರ ಇನ್ನೊಬ್ಬ ಸಹೋದರಿಯ ಹೆಸರು ಏಂಜೆಲಿನಾ ಸೀಕ್ವೆರಾ ಎಂದಾಗಿದೆ. ಮಹಲಿಂಗ ಭಾಗವತ್ ಅವರಿಗೆ ಲೀಲಾವತಿ ಅವರು 3ನೇ ಹೆಂಡತಿ ಆಗಿದ್ದಾರೆ ಎಂದು ಸ್ಪಷ್ಟವಾದ ದಾಖಲೆಗಳು ಕೂಡ ಇವೆ ಎಂದಿದ್ದಾರೆ.

ಇಷ್ಟು ವರ್ಷವಾದರೂ ವಿನೋದ್ ರಾಜ್ ಅವರಿಗೆ ಮದುವೆ ಆಗಿಲ್ಲವಾ? ಎಂಬ ಪ್ರಶ್ನೆ ಕಾಡುತ್ತಿತ್ತು. ವಿನೋದ್ ಅವರಿಗೆ ಮದುವೆ ಆಗಿದೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಸ್ವತಃ ಲೀಲಾವತಿ ಅವರಾಗಲೀ, ವಿನೋದ್ ರಾಜ್ ಅವರಾಗಲೀ 2021ರವರೆಗೆ ಎಲ್ಲಿಯೂ ಮಾಹಿತಿಯನ್ನು ಬಿಚ್ಚಿಟ್ಟಿರಲಿಲ್ಲ. ಎಲ್ಲಿಯೂ ಕೂಡ, ಅಪ್ಪಿತಪ್ಪಿ ತುಟಿ ಬಿಚ್ಚಿ ಮಾತನಾಡಿರಲಿಲ್ಲ. ಇನ್ನು ನಟ ವಿನೋದ್ ರಾಜ್ ಅವರು ಈವರೆಗೆ ಕೂಡ ಯಾವುದೇ ದೇಶಕ್ಕೆ ಹೋಗಿಲ್ಲ ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: 'ಡಾ ರಾಜ್‌ ಸ್ಮಾರಕ ಲೋಕಾರ್ಪಣೆ'ಗೆ ಲೀಲಾವತಿ-ವಿನೋದ್‌ರಾಜ್ ಹೋದಾಗ ಶಿವಣ್ಣ ಮಾಡಿದ್ದೇನು?

ವಿನೋದ್ ರಾಜ್ ಒಂದು ವೇಳೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಹೋದರೆ, ಅವರ ಆಧಾರ್‌ ಕಾರ್ಡ್‌ನಲ್ಲಿ ಏನಿದೆ ಎಂಬುದನ್ನು ಜನರು ನೋಡಿಬಿಡುತ್ತಾರೆ. ಆಗ ತಮ್ಮ ತಂದೆ ಯಾರೆಂಬ ಮಾಹಿತಿಯನ್ನು ಕನ್ನಡಿಗರು ನೋಡಿಬಿಡುತ್ತಾರೆ ಎಂಬ ಕಾರಣದಿಂದ ಅವರು ಈವರೆಗೆ ಯಾವುದೇ ವಿದೇಶಕ್ಕೆ ಹೋಗಿಲ್ಲ. ಇನ್ನುಮುಂದೆ ಯಾರೇ ಡಾ.ರಾಜ್ ಕುಮಾರ್ ಅವರ ಬಗ್ಗೆ ಮಾತನಾಡುವುದಾಗಲೀ, ಲೀಲಾವತಿ ಅಥವಾ ವಿನೋದ್ ರಾಜ್‌ ಅವರೊಂದಿಗೆ ಸಂಬಂಧ ಕಲ್ಪಿಸಿ ಮಾತನಾಡುವುದಾಗಲೀ ಮಾಡಿದರೆ ಅವರ ವಿರುದ್ಧ ನೂರಕ್ಕೆ ನೂರು ಕಾನೂನು ಹೋರಾಟವನ್ನು ಮಾಡುತ್ತೇನೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ನಾನು ಇವಾಗ ವಿನೋದ್ ರಾಜ್ ಅವರಿಗೆ ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನಿಮ್ಮ ತಾಯಿ ಲೀಲಾವತಿ ಅವರು ಹೋದ ನಂತರ, ಸೋಲದೇವನಹಳ್ಳಿಯಲ್ಲಿರುವ ಜಮೀನು ಒಂದು ತರಹ ನಿತ್ಯಾನಂದನ ಆಶ್ರಮದ ರೀತಿ ಪರಿವರ್ತನೆ ಆಗಿದೆ ಎಂಬುದು ನಿವೋ, ಸುಳ್ಳೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: 'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!

ಈ ಅರ್ಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ರಮೇಶ್ ಎಂ. ಎನ್ನುವವರು ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ '50 ವರ್ಷಗಳಿಂದ ಅಣ್ಣಾವ್ರ ಮೇಲಿದ್ದ ಕಳಂಕವನ್ನು ತೊಡೆದು ಹಾಕುವ ಮೂಲಕ ಸರ್ಕಾರಿ ದಾಖಲೆಗಳ ಮೂಲಕ ವಿನೋದ್ ರಾಜ್ ರವರು ಅಣ್ಣಾವ್ರ ಮಗ ಅಲ್ಲ ಎಂದು ಎನ್.ಆರ್ ರಮೇಶ್ ಸರ್ ಅವರು ಕರ್ನಾಟಕದ ಜನತೆಗೆ ಸತ್ಯಾಂಶವನ್ನು ಬಯಲು ಮಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು 'ಸೋಲದೇವನ ಹಳ್ಳಿಯ ಜಾಗವೂ ಅರಣ್ಯ ಇಲಾಖೆಗೆ ಸೇರಿದ್ದು. ಜನರ ಸಿಂಪತಿ ಗಳಿಸಲು ಜೀವನ ಪೂರ್ತಿ ಸುಳ್ಳು ಹೇಳುತ್ತಲೇ ಬಂದರು' ಎಂದು ಕಾಮೆಂಟ್ ಮಾಡಿದ್ದಾರೆ.

View post on Instagram