ನಮ್ಮನ್ನು ಯಾವ ಜಾಗದಲ್ಲಿ ಇಟ್ಟಿರುತ್ತಾರೆ ಅನ್ನೋದು ಮುಖ್ಯ; ಪತಿ ರಾಮ್‌ಕುಮಾರ್‌ ಬಗ್ಗೆ ಅಣ್ಣಾವ್ರ ಮಗಳ ಮಾತು ವೈರಲ್

ರಾಮ್‌ಕುಮಾರ್ ವ್ಯಕ್ತಿತ್ವ ಹೇಗೆ? ಅವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ? ಪ್ರೀತಿಯಲ್ಲಿ ಏನು ಮುಖ್ಯ ಅನ್ನೋದನ್ನು ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಪೂರ್ಣಿಮಾ ಮಾತನಾಡಿದ್ದಾರೆ. 

Rajkumar daughter poornima talks about husband ramkumar and family

ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್ ಮತ್ತು ಡಾ. ಪಾರ್ವತಮ್ಮ ರಾಜ್‌ಕುಮಾರ್ ಮುದ್ದಿನ ದ್ವಿತಿಯ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಇದೀಗ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಭಾಗಿಯಾಗಿದ್ದರು. ತಂದೆ ಜೊತೆಗಿನ ಒಡನಾಟ, ದೊಡ್ಡ ಮನೆಯಲ್ಲಿ ಬೆಳೆದ ವಾತಾವರಣ, ಮದುವೆ ನಂತರದ ಜೀವನ ಹೀಗೆ ಪ್ರತಿಯೊಂದನ್ನು ಹಂಚಿಕೊಂಡಿದ್ದಾರೆ. ಇದುವರೆಗೂ ಪತಿ ರಾಮ್‌ಕುಮಾರ್‌ ಬಗ್ಗೆ ಪೂರ್ಣಿಮಾರವರು ಮಾತನಾಡಿರುವುದು ತುಂಬಾನೇ ಕಡಿಮೆ. ರಾಮ್‌ಕುಮಾರ್‌ ವ್ಯಕ್ತಿತ್ವ ಎಂಥದ್ದು ಎಂದು ವಿವರಿಸಿದ್ದಾರೆ.

'ಮೊದಲು ಇಂಪ್ರೆಸ್ ಆಗುವುದು ನಮಗೆ ತೋರಿಸುವ ಪ್ರೀತಿ ನಮ್ಮನ್ನು ಯಾವ ರೀತಿ ಇಟ್ಟಿರುತ್ತಾರೆ ಯಾವ ಜಾಗದಲ್ಲಿ ಇಟ್ಟಿರುತ್ತಾರೆ ಎಂದು. ರಾಜ್‌ಕುಮಾರ್ ಮಗಳು ಅಂದ್ರೆ ಹೇಗೋ ಇರ್ತಾರೆ ಅನ್ನೋ ಯೋಚನೆಗಳು ಇರುತ್ತದೆ ಆದರೆ ನನ್ನನ್ನು ಜೊತೆ ಇದ್ದಾಗ ಎಷ್ಟು ಗ್ರೌಂಡೆಡ್‌ ಅಂತ ತಿಳಿದುಕೊಂಡರು. ಇಡೀ ಮನೆ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತಿದ್ದ ಕಾರಣ ನನ್ನ ಮೇಲೆ ಇಷ್ಟ ಆಗಿರಬಹುದು. ರಾಮ್‌ಕುಮಾರ್‌ರವರು ನನ್ನ ತಾಯಿ ತರ. ಅಪ್ಪಾಜಿ ರೀತಿ ಇರುವ ಹುಡುಗ ಬೇಕು ಅಂತ ಅಂದುಕೊಂಡಿದ್ದೆ ಆದರೆ ಅವರು ಸ್ವಲ್ಪ ಅಮ್ಮನ ತರ. ಕೆಲವೊಂದು ವಿಚಾರಗಳಿಗೆ ಅವರದ್ದೇ ಯೋಚನೆಗಳು ಇರುತ್ತದೆ. ಈ ಕೆಲಸ ಈ ರೀತಿ ಆಗಬೇಕು, ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸಬೇಕು...ಇದೆಲ್ಲಾ ನನ್ನ ತಾಯಿ ತರ. ಕೆಲವೊಮ್ಮೆ ನನ್ನನ್ನು ಮಗು ತರ ನೋಡಿಕೊಳ್ಳುತ್ತಾರೆ ನನಗೆ ಏನೂ ಅರ್ಥ ಆಗುವುದಿಲ್ಲ ಎಂದು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಪೂರ್ಣಿಮಾ ಮಾತನಾಡಿದ್ದಾರೆ. 

ಮಲ್ಲೇಶ್ವರಂನ ಪ್ರತಿಷ್ಠಿತ ದೇವಸ್ಥಾನದಲ್ಲಿ ಚಿನ್ನದ ಸರ ಕಳೆದುಕೊಂಡ ವರುಣ್ ಆರಾಧ್ಯ; ವಿಡಿಯೋ ವೈರಲ್

'ತಂದೆ ಮತ್ತು ತಾಯಿ ಇಬ್ಬರಿಗೂ ರಾಮ್‌ಕುಮಾರ್‌ನ ಇಷ್ಟ ಪಟ್ಟರು. ನನ್ನ ತಾಯಿ ಬಳಿ ಅಪ್ಪಾಜಿ ಒಮ್ಮೆ ಹೇಳಿದ್ದರು 'ನಾವೇ ಹುಡುಕಿದ್ದರೂ ಕೂಡ ಇಂತಹ ಹುಡುಗ ಸಿಗುತ್ತಿರಲಿಲ್ಲ' ಅಂತ. ನಾನು ಹೇಗೆ ಅನ್ನೋದು ಅಮ್ಮ ಅಪ್ಪಗೆ ಗೊತ್ತಿತ್ತು, ರಾಮ್‌ಕುಮಾರ್‌ ನನಗೆ ಅಜೆಸ್ಟ್‌ ಮಾಡಿಕೊಳ್ಳುತ್ತಿದ್ದಾರೆ ಅಂತ. ರಾಮ್‌ಕುಮಾರ್‌ಗೆ ತುಂಬಾ ತಾಳ್ಮೆ ಇದೆ' ಎಂದು ಪೂರ್ಣಿಮಾ ಹೇಳಿದ್ದಾರೆ. ಈ ಹಿಂದೆ ಪುತ್ರಿ ಧನ್ಯಾ ರಾಮ್‌ಕುಮಾರ್ ಮತ್ತು ಪುತ್ರಿ ಧಿರೇನ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಲೂ ತಾತ ಡಾ.ರಾಜ್‌ಕುಮಾರ್, ಅಜ್ಜಿ ಡಾ.ಪಾರ್ವತಮ್ಮ ರಾಜ್‌ಕುಮಾರ್ ಮತ್ತು ತಂದೆ ತಾಯಿ ರಾಮ್‌ಕುಮಾರ್ ಹಾಗೂ ಪೂರ್ಣಿಮಾ ಬಗ್ಗೆ ಮಾತನಾಡಿದ್ದಾರೆ. 

ರಾಮ್‌ಕುಮಾರ್ ಸರ್‌ ತಂದೆ ಪಾತ್ರಕ್ಕಾದರೂ ಕಮ್‌ಬ್ಯಾಕ್ ಮಾಡಲೇಬೇಕು; ನೆಟ್ಟಿಗರಿಂದ ಶುರುವಾಯ್ತು ಡಿಮ್ಯಾಂಡ್!

Latest Videos
Follow Us:
Download App:
  • android
  • ios