ಅಗಸ್ಟ್ 24ರಂದು ಟೋಬಿ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋ ನಡೆಯಲಿದೆ. ಸೆಲೆಬ್ರಿಟಿಗಳ ಜೊತೆ ಸಿನಿಮಾ ನೋಡಲು ಇಲ್ಲಿದೆ ಅವಕಾಶ.....
ಆ.25ರಂದು ಬಿಡುಗಡೆಯಾಗುತ್ತಿರುವ ರಾಜ್ ಬಿ ಶೆಟ್ಟಿ ನಟನೆಯ, ಬಾಸಿಲ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಟೋಬಿ’ ಟಿಕೆಟ್ ಬುಕಿಂಗ್ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಾಳೆ(ಆ.24ರಂದು) ಪೇಯ್ಡ್ ಪ್ರೀಮಿಯರ್ ಶೋಗಳನ್ನೂ ಆಯೋಜನೆ ಮಾಡಲಾಗಿದ್ದು, ಪೇಯ್ಡ್ ಪ್ರೀಮಿಯರ್ ಶೋಗಳಿಗೆ ನಾಳೆ ಬೆಳಿಗ್ಗೆ ಬುಕಿಂಗ್ ಆರಂಭವಾಗಲಿದೆ.
ರಾಜ್ ಬಿ ಶೆಟ್ಟಿ ಮತ್ತು ತಂಡ ಒಂದು ತಿಂಗಳ ಕಾಲ ಕರ್ನಾಟಕದಾದ್ಯಂತ ಸುತ್ತಾಡಿ ಟೋಬಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದೆ. ಆದ್ದರಿಂದ ಎಲ್ಲಾ ಕಡೆ ಸಿನಿಮಾ ಪ್ರೇಕ್ಷಕರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಅವರೆಲ್ಲರಿಗೂ ಸಿನಿಮಾ ನೋಡುವ ಅವಕಾಶವನ್ನು ಒದಗಿಸಲು ಚಿತ್ರತಂಡ ಕಾರ್ಯನಿರ್ವಹಿಸುತ್ತಿದೆ.
ನಮ್ಮ ನಡುವೆ ಯಾವ ಸ್ಪರ್ಧೆನೂ ಇಲ್ಲ: ರಕ್ಷಿತ್ ಶೆಟ್ಟಿ- ರಾಜ್ ಬಿ ಶೆಟ್ಟಿ ಕ್ಲಾರಿಟಿ
‘175ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್‌ಗಳು ಮತ್ತು 60ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಜನ ಮತ್ತು ಥಿಯೇಟರ್‌ನವರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿದ್ದು, ಈ ಸಂಖ್ಯೆಗಳು ಇನ್ನೂ ಹೆಚ್ಚಾದರೆ ಅಚ್ಚರಿ ಇಲ್ಲ. ಜನ ನಿರೀಕ್ಷೆ ಇಟ್ಟಿದ್ದಾರೆ. ಆ ನಿರೀಕ್ಷೆ ಸುಳ್ಳಾಗಲ್ಲ ಎಂಬ ನಂಬಿಕೆ ನಮಗಿದೆ’ ಎಂದು ಚಿತ್ರತಂಡದ ಪ್ರಮುಖ ಬಾಲಕೃಷ್ಣ ಅರವಣಕರ್ ಮಾಹಿತಿ ನೀಡುತ್ತಾರೆ.
ಕರ್ನಾಟಕ ಹೊರತು ಪಡಿಸಿ ಹೈದರಾಬಾದ್, ಚೆನ್ನೈ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ಆ.25ರಂದೇ ಟೋಬಿ ರಿಲೀಸ್ ಆಗಲಿದೆ. ಎಲ್ಲಾ ಕಡೆಯೂ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗುತ್ತಿದೆ.
ಪುನೀತ್ ಅಭಿಮಾನಿಗಳಲ್ಲಿ ನಾನು ದೊಡ್ಡ ಅಭಿಮಾನಿ: ರಾಜ್ ಬಿ. ಶೆಟ್ಟಿ
ಚಿತ್ರತಂಡ ಈಗಾಗಲೇ ಉತ್ತರ ಕರ್ನಾಟಕ ಭಾಗದ ಪ್ರವಾಸವನ್ನು ಮುಗಿಸಿಕೊಂಡು ಬಂದಿದೆ. ‘ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ ಹೀಗೆ ನಾವು ಹೋದಕಡೆಗಳಲ್ಲೆಲ್ಲಾ ಜನರು ಅಪಾರವಾದ ಪ್ರೀತಿ ತೋರಿಸಿದ್ದಾರೆ. ನಾವು ಅವರಿಗೆ ನಮ್ಮ ಸಿನಿಮಾ ಮೂಲಕವೇ ಪ್ರೀತಿಯನ್ನುನೀಡುತ್ತೇವೆ’ ಎಂದು ಬಾಲಕೃಷ್ಣ ಅರಣಕರ್ ತಿಳಿಸಿದ್ದಾರೆ.
