ಪ್ರಕೃತಿ ಮಡಿಲಲ್ಲಿರೋ ಊರಿನ ಮೂಲಕ ಟೀಸರ್ ಸ್ಟಾರ್ಟ್ ಆಗುತ್ತೆ.. ಆನಂತರ ಸಾವು ನೋವು ಮಾಟ ಮಂತ್ರದ ಕತೆ ಹೇಳ್ತಿರೋ ರೀತಿ ಭಾಸವಾಗುತ್ತೆ.. ಅಲ್ಲಿಗೆ ರಾಜ್ ಇವಿಲ್ ಐ ಮೂಲಕ ಪಾತ್ರದ ಪರಿಚಯ ಮಾಡ್ತಾರೆ.. ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. 

ಫೆಬ್ರುವರಿ 6ಕ್ಕೆ 'ರಕ್ಕಸಪುರದೋಳ್' ರಿಲೀಸ್

ಸೂಪರ್ ಹಿಟ್ ದಾಖಲಿಸಿರುವ ಸು ಫ್ರಮ್ ಸೋ ಮತ್ತು 45 ಸಿನಿಮಾ ಯಶಸ್ಸಿನಲ್ಲಿರುವ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್‌ಲಾರ್ಡ್ ಇನ್ನೆನೂ ಮುಂದಿನ ಜನವರಿಗೆ ಬಿಡುಗಡೆಯಾಗ್ತಿದೆ..

2026ಕ್ಕೆ ರಾಜ್ ಬಿ ಶೆಟ್ಟಿ ಡಬಲ್ ಧಮಾಕ! ಸಾಹಸ ನಿರ್ದೇಶಕ ರವಿವರ್ಮಾ ನಿರ್ಮಾಣದ ಚೊಚ್ಚಲ ಚಿತ್ರ

ರವಿಸಾರಂಗ ನಿರ್ದೇಶನದ ಚೊಚ್ಚಲ ಸಿನಿಮಾ

ಹೌದು.. ಇದೀಗ ರಾಜ್ ನಟನೆಯ ಬಹುನಿರೀಕ್ಷಿತಾ ರಕ್ಕಸಪುರದೊಳ್ ಚಿತ್ರದ ಟೀಲರ್ ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದೆ..

ಜೋಗಿ ಪ್ರೇಮ್ ಅಪ್ಪಟ ಶಿಷ್ಯಾ ಬಹಕಾಲಗ ಆಪ್ತ ಸಾಕಷ್ಟು ಕಾಲ ಕೆಲಸ ಮಾಡಿರುವ ರವಿ ಸಾರಂಗ ಆಕ್ಷನ್ ಕಟ್ ಹೇಳ್ತಿದ್ದಾರೆ.. ಕೊಳ್ಳೇಗಾಲವನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಸ್ಟೋರಿ ಆಗಿದ್ರು,ಇದು ಒಳಗಿನ ದೈತ್ಯನ ಬಗ್ಗೆ ಒಂದು ಕಥೆ ಯಾಗಿದೆ.. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳಿರತ್ಕೆ.. ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟದ್ದು, ಆ ಕತ್ತಲೆಯೇ ರಕ್ಕಸ ಮುಖ್ಯ ಪಾತ್ರವು ತನ್ನ ಆಂತರಿಕ ಹೋರಾಟಗಳನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಈ ಚಿತ್ರವು ಹೇಳುತ್ತದೆ..

ಟೀಸರ್ ನಲ್ಲಿ ರಕ್ಷಕ v/s ರಾಕ್ಷಸನಾಗಿ ಕಂಡ ರಾಜ್ ಬಿ ಶೆಟ್ಟಿ

ಅಂದಹಾಗೆ.. ಪ್ರಕೃತಿ ಮಡಿಲಲ್ಲಿರೋ ಊರಿನ ಮೂಲಕ ಟೀಸರ್ ಸ್ಟಾರ್ಟ್ ಆಗುತ್ತೆ.. ಆನಂತರ ಸಾವು ನೋವು ಮಾಟ ಮಂತ್ರದ ಕತೆ ಹೇಳ್ತಿರೋ ರೀತಿ ಭಾಸವಾಗುತ್ತೆ.. ಅಲ್ಲಿಗೆ ರಾಜ್ ಇವಿಲ್ ಐ ಮೂಲಕ ಪಾತ್ರದ ಪರಿಚಯ ಮಾಡ್ತಾರೆ.. ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಆದರೆ, ಸಾಮಾನ್ಯವಾಗಿ ಚಿತ್ರಗಳಲ್ಲಿ ಕಂಡುಬರುವ ರೀತಿಯ ಪಾತ್ರವಿರೋದಿಲ್ಲ.

ಇನ್ನು.. ಮೊದಲು ಬರೋ ಪಾತ್ರವಲ್ಲ ತನ್ನೊಳಗಿನ ದೈತ್ಯನನ್ನು ಎದುರಿಸಿದಾಗ, ಮುಂದೆ ಏನಾಗುತ್ತದೆ ಎಂಬುದು ಕಥೆ. ಇದು ವಾಸ್ತವಿಕ ಪಾತ್ರವಾಗಿದ್ದು, ಅದರ ಪ್ರಯಾಣವು ನೋವು, ಹುಡುಕಾಟ ಮತ್ತು ನಿರಾಳತೆಯ ಕ್ಷಣಗಳೊಂದಿಗೆ ಕಥಾವಸ್ತು ಹೊಂದಿದೆ.. ಒಟ್ಟಾರೆ.. ರಕ್ಕಸಪುರದೊಳ್ ಬಿಡುಗಡೆಗೆ ರೆಡಿಯಾಗಿದ್ದು ಬಹುನಿರೀಕ್ಷಿತ ಚಿತ್ರ 2026 ಫೆಬ್ರವರಿ 6ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದೆ..