2026 ರಲ್ಲಿ ಥಿಯೇಟರಲ್ಲಿ ಧೂಳೆಬ್ಬಿಸಲು ರೆಡಿಯಾಗಿರುವ ಕನ್ನಡ ಸಿನಿಮಾಗಳು
Most anticipated movies of 2026: ಈ ವರ್ಷ ಕನ್ನಡ ಚಿತ್ರರಂಗಕ್ಕೆ ಅಷ್ಟೊಂದು ಉತ್ತಮ ವರ್ಷವಾಗಿರಲಿಲ್ಲ. ಆದರೆ ಮುಂದಿನ ವರ್ಷ ಬಿಡುಗಡೆಯಾಗಲಿರುವ ಸಿನಿಮಾಗಳು ಭಾರಿ ನಿರೀಕ್ಷೆ ಹುಟ್ಟಿಸಿವೆ. ಇಲ್ಲಿವೆ ನೋಡಿ 2026 ರಲ್ಲಿ ಥಿಯೇಟರ್ ನಲ್ಲಿ ಧೂಳೆಬ್ಬಿಸಲಿರುವ ಸಿನಿಮಾಗಳು.

ಟಾಕ್ಸಿಕ್
2026ರ ಬಹು ನಿರೀಕ್ಷಿತ ಸಿನಿಮಾ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ. ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಕಿಯಾರ ಅಡ್ವಾನಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಶಿ ಸೇರಿ ಹಲವರು ನಟಿಸಿದ್ದಾರೆ.
ಕೆಡಿ : ದಿ ಡೆವಿಲ್
ಪ್ರೇಮ್ ನಿರ್ದೇಶನ ಮಾಡಿರುವ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಧ್ರುವ ಸರ್ಜಾ , ಸಂಜಯ್ ದತ್ , ಶಿಲ್ಪಾ ಶೆಟ್ಟಿ , ವಿ. ರವಿಚಂದ್ರನ್ , ರಮೇಶ್ ಅರವಿಂದ್ , ರೀಷ್ಮಾ ನಾಣಯ್ಯ , ಜಿಶು ಸೇನ್‌ಗುಪ್ತಾ ಮತ್ತು ನೋರಾ ಫತೇಹಿ ನಟಿಸಿದ್ದಾರೆ .
ಪಿನಾಕ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಧನಂಜಯ ನಿರ್ದೇಶನದ ಹೊಸ ಕನ್ನಡ ಸಿನಿಮಾ, ಇದನ್ನು People Media Factory ನಿರ್ಮಾಣ ಮಾಡುತ್ತಿದೆ. ಈ ಚಿತ್ರದಲ್ಲಿ ನಯನ ಸಾರಿಕಾ, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ
ಸಿಟಿ ಲೈಟ್ಸ್
ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ಸಿಟಿ ಲೈಟ್ಸ್ ಸಿನಿಮಾದಲ್ಲಿ ವಿನಯ್ ರಾಜಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ, ನಾಯಕಿಯಾಗಿ ವಿಜಯ್ ಎರಡನೇ ಪುತ್ರಿ ಮೊನಿಷಾ ನಟಿಸುತಿದ್ದಾರೆ.
ಉತ್ತರಕಾಂಡ
ಉತ್ತರಕಾಂಡ ರೋಹಿತ್ ಪದಕಿ ರಚಿಸಿ ನಿರ್ದೇಶಿಸಿದ ಆಕ್ಷನ್ ಡ್ರಾಮಾ ಸಿನಿಮಾ ಇದಾಗಿದೆ. ಧನಂಜಯ ಮತ್ತು ಐಶ್ವರ್ಯ ರಾಜೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಶಿವ ರಾಜ್‌ಕುಮಾರ್, ಭಾವನಾ ಮೆನನ್, ವಿಜಯ್ ಬಾಬು, ಯೋಗರಾಜ್ ಭಟ್, ರಂಗಾಯಣ ರಘು, ಚೈತ್ರ ಜೆ. ಆಚಾರ್, ಉಮಾಶ್ರೀ, ದಿಗಂತ್ ಮತ್ತು ಗೋಪಾಲ್ ಕೃಷ್ಣ ದೇಶಪಾಂಡೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ
ಜಿಂಗೋ
ಡಾಲಿ ಧನಂಜಯ ನಟಿಸಿರುವ ಮತ್ತು ನಿರ್ದೇಶಕ ಶಶಾಂಕ್ ಸೊಗ್ಗಾಲ್ ನಿರ್ದೇಶಿಸುತ್ತಿರುವ ಒಂದು ಸಿನಿಮಾ ಇದಾಗಿದೆ. ಚಿತ್ರದಲ್ಲಿ ಧನಂಜಯ್ ನಟಿಸುತ್ತಿರುವುದರಿಂದ ಸಿನಿಮಾ ಕುರಿತು ಕುತೂಹಲ ಹೆಚ್ಚಾಗಿದೆ.
ಉಗ್ರಾಯುಧಮ್
ಶ್ರೀಮುರಳಿ ನಟಿಸಿರುವ, ಪುನೀತ್ ರುದ್ರನಾಗ್ ನಿರ್ದೇಶಿಸುತ್ತಿರುವ, ಸುಮಾರು 700 ವರ್ಷಗಳ ಹಿಂದಿನ ಕಾಲಘಟ್ಟದ ಪಿರಿಯಾಡಿಕ್ ಡ್ರಾಮಾ ಕಥಾಹಂದರ ಹೊಂದಿರುವ ಕನ್ನಡದ ಬಹು ನಿರೀಕ್ಷಿತ ಚಿತ್ರವಾಗಿದೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಸಿನಿಮಾಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ.
666 ಆಪರೇಶನ್ ಡೈಮಂಡ್ ಥಿಯೇಟರ್
ಇದು ಕ್ರೈಮ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಡಾ. ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಮತ್ತು ಪ್ರಿಯಾಂಕಾ ಮೋಹನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ, ಹೇಮಂತ್ ಎಂ. ರಾವ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು 1970-80ರ ದಶಕದ ಡಾ. ರಾಜ್‌ಕುಮಾರ್ ಅವರ ಬಾಂಡ್-ಸ್ಪೈ ಚಿತ್ರಗಳ ಸ್ಟೈಲ್ ನಲ್ಲಿ ಮೂಡಿ ಬರಲಿದ್ದು ಅದಕ್ಕಾಗಿ ವಿಂಟೇಜ್ ಲುಕ್ ಅನುಭವ ನೀಡಲು ಹಳೆಯ ಕ್ಯಾಮೆರಾ ಲೆನ್ಸ್‌ಗಳನ್ನು ಬಳಸಲಾಗಿದೆ
ಗ್ರಾಮಾಯಣ
ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಸಿನಿಮಾ, ಇದನ್ನು ದೇವನೂರು ಚಂದ್ರು ನಿರ್ದೇಶಿಸಿದ್ದಾರೆ. ಇದು ಹಳ್ಳಿಯ ಹಿನ್ನೆಲೆಯ ಕಥೆಯನ್ನು ಹೊಂದಿದ್ದು, ಲ್ಯಾಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನ್ಮೆಂಟ್ಸ್ ನಿರ್ಮಿಸಿವೆ. ಈ ಚಿತ್ರದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
ದೈಜಿ
ದೈಜಿ ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ರಮೇಶ್ ಅರವಿಂದ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿರುವ ಈ ಸಿನಿಮಾ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.
ಲ್ಯಾಂಡ್ ಲಾರ್ಡ್
ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಲ್ಯಾಂಡ್ ಲಾರ್ಡ್’ ಸಿನಿಮಾ ಈಗಾಗಲೇ ಜನರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ಜಗದೀಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ.
ಮ್ಯಾಂಗೋ ಪಚ್ಚ
ಕಿಚ್ಚ ಸುದೀಪ ಅಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾವನ್ನು ವಿವೇಕ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

