Asianet Suvarna News Asianet Suvarna News

Puneeth Rajkumar Death: ಆತ್ಮಹತ್ಯೆ ಮಾಡಿದ ಅಪ್ಪು ಅಭಿಮಾನಿ ಮನೆಗೆ ರಾಘವೇಂದ್ರ ರಾಜಕುಮಾರ್ ಭೇಟಿ

  • Puneeth Rajkumar Death: ಆತ್ಮಹತ್ಯೆ ಮಾಡಿಕೊಂಡಿದ್ದ ಅಪ್ಪು ಅಭಿಮಾನಿ ಮನೆಗೆ ರಾಘವೇಂದ್ರ ರಾಜ್‌ಕುಮಾರ್ ಭೇಟಿ
  • ತಮ್ಮನ ಅಭಿಮಾನಿ ಸಾವಿನಿಂದ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ ಹಿರಿಯ ನಟ
Raghavendra Rajkumar visits Puneeth Rajkumars fan house who commited suicide recently dpl
Author
Bangalore, First Published Nov 7, 2021, 6:13 PM IST
  • Facebook
  • Twitter
  • Whatsapp

ರಾಮನಗರ(ನ.07): ನಟ ಪುನೀತ್ ರಾಜಕುಮಾರ್(Puneeth Rajkumar) ಅಭಿಮಾನಿ ಆತ್ಮಹತ್ಯೆ ಹಿನ್ನೆಲೆ ಅಭಿಮಾನಿಯ ಕುಟುಂಬಕ್ಕೆ ನಟ ರಾಘವೇಂದ್ರ ರಾಜಕುಮಾರ್(Raghavendra Rajkumar) ಸಾಂತ್ವನ ಹೇಳಿದ್ದಾರೆ. ಪುನೀತ್ ಅಭಿಮಾನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಚನ್ನಪಟ್ಟಣದ ಎಲೆಕೇರೆಯಲ್ಲಿ ಘಟನೆ ನಡೆದಿತ್ತು. ರಾಮನಗರ(Ramanagara) ಜಿಲ್ಲೆಯ ಚನ್ನಪಟ್ಟಣದ ಬಡಾವಣೆಯಲ್ಲಿ ಕಳೆದ 4 ನೇ ತಾರೀಕಿನಂದು ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವೆಂಕಟೇಶ್ (25) ಆತ್ಮಹತ್ಯೆ ಮಾಡಿಕೊಂಡಿದ್ದ ಪುನೀತ್ ಅಭಿಮಾನಿ.

ಪುನೀತ್‌ ನಿಧನ : ಮತ್ತಿಬ್ಬರು ಆತ್ಮಹತ್ಯೆ - 11ಕ್ಕೇರಿದ ಸಾವಿನ ಸಂಖ್ಯೆ

ಕ್ಷೌರಿಕ ವೃತ್ತಿ ಮಾಡ್ತಿದ್ದ ವೆಂಕಟೇಶ್ ವೆಂಕಟೇಶ್ ಪ್ರೀತಿಯ ನಟನ ಅಗಲಿಕೆ ನೋವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪುನೀತ್ ನಿಧನದ ಬಳಿಕ ಸಂಪೂರ್ಣ ಖಿನ್ನತೆಗೆ ಒಳಗಾಗಿದ್ದ ಯುವಕ ಊಟ ಬಿಟ್ಟು ಕಂಗಾಲಾಗಿದ್ದರು.

ಇಂದು ಯುವಕನ ಮನೆಗೆ ರಾಘವೇಂದ್ರರಾಜಕುಮಾರ್ ಭೇಟಿ ನೀಡಿದ್ದು, ಅರ್ಧಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರ ಜೊತೆಗೆ ಮಾತುಕತೆ ನಡೆಸಿದ್ದಾರೆ. ನಿಮ್ಮ ಜೊತೆಗೆ ನಾವಿದ್ದೇವೆ ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದ್ದಾರೆ.

ನಟ ಪುನೀತ್‌ ರಾಜ್‌ಕುಮಾರ್‌ (puneeth rajkumar) ಅವರ ಅಗಲುವಿಕೆ ಸಹಿಸಲಾಗದೆ ಮಂಗಳವಾರ ರಾಜ್ಯದಲ್ಲಿ ಮತ್ತಿಬ್ಬರು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. 

ತುಮಕೂರು (Tumakuru) ಜಿಲ್ಲೆ ಹೆಬ್ಬೂರು ಹೋಬಳಿಯ ಕೋಡಿಪಾಳ್ಯ ಗ್ರಾಮದ ಭರತ್‌ (30) ಮತ್ತು ದಾವಣಗೆರೆ (Davanagere) ನಗರದ ವಿಜಯನಗರ (Vijayanagara) ಬಡಾವಣೆಯ ಸಾಯಿ ಮಂದಿರದ ಬಳಿಯ ವಾಸಿಯಾದ ಕುಮಾರ(25) ಆತ್ಮಹತ್ಯೆ (Suicide) ಮಾಡಿಕೊಂಡವರು. ಈ ಮೂಲಕ ಪುನೀತ್‌ ಸಾವಿನ ಸುದ್ದಿ ತಿಳಿದ ಬಳಿಕ ನಿಧನರಾದವರ ಸಂಖ್ಯೆ 11ಕ್ಕೆ ಏರಿಕೆ ಆಗಿದೆ.

'ಪುನೀತ್ (Puneeth Rajkumar) ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಒಬ್ಬರ ಹಿಂದೆ ಒಬ್ಬರು ಹೋದ್ರೆ ಭೂಮಿಯಲ್ಲಿ ಯಾರೂ ಇರುವುದಿಲ್ಲ. ನಮ್ಮ ನೋವನ್ನ ನಿಮ್ಮ ತಂದೆ ತಾಯಿಗೆ ಕೊಡಬೇಡಿ. ಪುನೀತ್‌ಗೆ ಈ ರೀತಿ ಅಗೌರವ ತೋರಿಸಬೇಡಿ. ಅವರು ದೇಹ ಬಿಟ್ಟು ಹೋಗಿದ್ದಾರೆ. ಅವರ ಕೆಲಸಗಳು, ಚಿತ್ರಗಳು ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ. ಅದನ್ನು ನಾವು ಪಾಲಿಸೋಣ. ನಾವು ಬಹಳಷ್ಟು ದುಃಖದಲ್ಲಿದ್ದೇವೆ, ನಮ್ಮ ದುಃಖವನ್ನು ಇನ್ನಷ್ಟು ಹೆಚ್ಚಿಸಬೇಡಿ, ಅಪ್ಪು ಇನ್ನಿಲ್ಲ ಎಂದು ನಾವೆಲ್ಲಾ ನೋವಿನಲ್ಲಿದ್ದೇವೆ. ಇದನ್ನು ನುಂಗಿಕೊಂಡು ಮುಂದೆ ಸಾಗೋಣ' ಎಂದು ರಾಘವೇಂದ್ರ ರಾಜ್‌ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ

 2020ರ ಸಾಲಿನಲ್ಲಿ ದೇಶದಲ್ಲಿ (India) ಪ್ರತಿನಿತ್ಯ 418 ಮಂದಿಯಂತೆ ಸರಾಸರಿ 1,53,052 ಮಂದಿ ಆತ್ಮಹತ್ಯೆಗೆ (Suicide) ಶರಣಾಗುತ್ತಿದ್ದಾರೆ ಎಂಬ ವಿಚಾರ ರಾಷ್ಟ್ರೀಯ ಅಪರಾಧ ದಾಖಲೆ( NCRB)ಗಳ ವಾರ್ಷಿಕ ವರದಿಯಿಂದ ತಿಳಿದು ಬಂದಿದೆ.

ಹೆಚ್ಚು ಆತ್ಮಹತ್ಯೆಗೆ ಶರಣಾಗುವ ರಾಜ್ಯಗಳ (States) ಪಟ್ಟಿಯಲ್ಲಿ 12,259 ಸಾವು ದಾಖಲಿಸಿರುವ ಕರ್ನಾಟಕ (karnataka) 5ನೇ ಸ್ಥಾನದಲ್ಲಿದೆ ಹಾಗೂ 19,909 ಆತ್ಮಹತ್ಯೆ ಕೇಸ್‌ನೊಂದಿಗೆ ನೆರೆಯ ಮಹಾರಾಷ್ಟ್ರ (Maharashtra) ಅಗ್ರ ಸ್ಥಾನದಲ್ಲಿದೆ.

ಉಳಿದಂತೆ ತಮಿಳುನಾಡು (Tamilnadu) 16,883, ಮಧ್ಯಪ್ರದೇಶ 14,578, ಪಶ್ಚಿಮ ಬಂಗಾಳದಲ್ಲಿ (West bengal) 13,103 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತನ್ಮೂಲಕ ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಸೂಸೈಡ್‌ಗಳ ಪೈಕಿ ಈ ಐದು ರಾಜ್ಯಗಳಲ್ಲೇ ಶೇ.50.1ರಷ್ಟುಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇನ್ನು ಶೇ.49.9ರಷ್ಟುಮಂದಿ 23 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ದೇಶದ ಶೇ.16.9ರಷ್ಟುಅಂದರೆ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾದವರ ಪ್ರಮಾಣ ಕೇವಲ 3.1ರಷ್ಟಿದೆ.

Follow Us:
Download App:
  • android
  • ios