Asianet Suvarna News Asianet Suvarna News

ಪುನೀತ್‌ ನಿಧನ : ಮತ್ತಿಬ್ಬರು ಆತ್ಮಹತ್ಯೆ - 11ಕ್ಕೇರಿದ ಸಾವಿನ ಸಂಖ್ಯೆ

  • ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಗಲುವಿಕೆ ಸಹಿಸಲಾಗದೆ ಮಂಗಳವಾರ ರಾಜ್ಯದಲ್ಲಿ ಮತ್ತಿಬ್ಬರು ಆತ್ಮಹತ್ಯೆ
  • ತುಮಕೂರು  ಭರತ್‌(30) ಮತ್ತು ದಾವಣಗೆರೆ ನಗರದ ವಿಜಯನಗರ ಬಡಾವಣೆಯ ಸಾಯಿ ಮಂದಿರದ ಬಳಿಯ ವಾಸಿಯಾದ ಕುಮಾರ(25) ಆತ್ಮಹತ್ಯೆ 
another 2 Fans of Actor Puneeth rajkumar commits Suicide snr
Author
Bengaluru, First Published Nov 3, 2021, 9:05 AM IST

ಬೆಂಗಳೂರು (ನ.03): ನಟ ಪುನೀತ್‌ ರಾಜ್‌ಕುಮಾರ್‌ (puneeth rajkumar) ಅವರ ಅಗಲುವಿಕೆ ಸಹಿಸಲಾಗದೆ ಮಂಗಳವಾರ ರಾಜ್ಯದಲ್ಲಿ ಮತ್ತಿಬ್ಬರು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. 

ತುಮಕೂರು (Tumakuru) ಜಿಲ್ಲೆ ಹೆಬ್ಬೂರು ಹೋಬಳಿಯ ಕೋಡಿಪಾಳ್ಯ ಗ್ರಾಮದ ಭರತ್‌ (30) ಮತ್ತು ದಾವಣಗೆರೆ (Davanagere) ನಗರದ ವಿಜಯನಗರ (Vijayanagara) ಬಡಾವಣೆಯ ಸಾಯಿ ಮಂದಿರದ ಬಳಿಯ ವಾಸಿಯಾದ ಕುಮಾರ(25) ಆತ್ಮಹತ್ಯೆ (Suicide) ಮಾಡಿಕೊಂಡವರು. ಈ ಮೂಲಕ ಪುನೀತ್‌ ಸಾವಿನ ಸುದ್ದಿ ತಿಳಿದ ಬಳಿಕ ನಿಧನರಾದವರ ಸಂಖ್ಯೆ 11ಕ್ಕೆ ಏರಿಕೆ ಆಗಿದೆ.

ಬೆಳಗಾವಿ: ಪುನೀತ್‌ ರಾಜಕುಮಾರ್‌ ನಿಧನ, ಮನನೊಂದು ಮೂವರ ಸಾವು

ಭರತ್‌ ‘ನಾನು ಪುನೀತ್‌ ಅಭಿಮಾನಿ. ಅವರು ಹೋದ ಜಾಗಕ್ಕೆ ನಾನು ಹೋಗುತ್ತೇನೆ’ ಎಂದು ಪತ್ರ ಬರೆದಿಟ್ಟು, ಪುನೀತ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕುಟುಂಬಸ್ಥರು ಮೃತನ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇನ್ನು ಪುನೀತ್‌ ನಿಧನದ ಬಳಿಕ ತೀವ್ರ ಖಿನ್ನತೆಗೆ ಒಳಗಾಗಿದ್ದ ಕುಮಾರ ಮಂಗಳವಾರ ರಾತ್ರಿ ಏಕಾಏಕಿ ನೇಣಿಗೆ ಕೊರಳೊಡ್ಡಿ ಸಾವಿಗೆ ಶರಣಾಗಿದ್ದಾನೆ.

ಅಭಿಮಾನಿ ಆತ್ಮಹತ್ಯೆ ಬಳಿಕ ಕಣ್ಣು ದಾನ

 

ಆನೇಕಲ್ (ನ. 01)  ಪುನೀತ್ ರಾಜ್ ಕುಮಾರ್  (Puneeth Rajkumar) ಅಗಲಿಕೆಯ ನೋವನ್ನು ಅನಿವಾರ್ಯವಾಗಿ (Sandalwood) ಸಹಿಸಿಕೊಳ್ಳಬೇಕಾಗಿದೆ. ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶಿವರಾಜ್ ಕುಮಾರ್(Shiva Rajkumar) ಮನವಿ ಮಾಡಿಕೊಂಡಿದ್ದಾರೆ.

ಕಣ್ಣು ದಾನ ಮಾಡಲು ಅಪ್ಪು ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬನ್ನೇರುಘಟ್ಟ ಸಮೀಪದ ಶ್ಯಾನುಭೋಗನ ಹಳ್ಳಿಯಲ್ಲಿ ರಾಜೇಂದ್ರ(40) ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಕಣ್ಣು ನಾಲ್ಕು ಮಂದಿಗೆ ಹೊಸ ಜಗತ್ತನ್ನು ನೋಡುವ ಅವಕಾಶ ಮಾಡಿಕೊಟ್ಟಿದೆ. ನಾರಾಯಣ ನೇತ್ರಾಲಯವು(Narayana Nethralaya) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪುನೀತ್‌ ಅವರ ಕಣ್ಣುಗಳಿಂದ ನಾಲ್ಕು ಮಂದಿಗೆ ದೃಷ್ಟಿ ನೀಡಿದೆ.

Puneeth Rajkumar Death: ಅಣ್ಣಾವ್ರಂತೆ ನೇತ್ರದಾನ ಮಾಡಿದ ಅಪ್ಪು

ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ.ಭುಜಂಗಶೆಟ್ಟಿ, ಪುನೀತ್‌ ಅವರ ದಾನ ಮಾಡಿದ ಕಣ್ಣುಗಳನ್ನು ಅಳವಡಿಸಲು ಮೂರ್ನಾಲ್ಕು ಮಂದಿಗೆ ಬರಲು ಸೂಚಿಸಿದ್ದೇವೆ. ಕಣ್ಣುಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಒಂದೇ ಕಣ್ಣನ್ನು ಇಬ್ಬರಿಗೆ ಅಳವಡಿಕೆ ಮಾಡಬಹುದಾದ ಅತ್ಯಾಧುನಿಕ ತಂತ್ರಜ್ಞಾನ ಬಂದಿದೆ. ಇದರ ಸಹಕಾರದಿಂದ ಕಣ್ಣಿನ ಮುಂಭಾಗ ಹಾನಿಗೊಳಗಾದವರಿಗೆ ಮುಂಭಾಗ ಹಾಗೂ ಹಿಂಭಾಗ ಹಾನಿಗೊಳಗಾದವರಿಗೆ ಹಿಂಭಾಗ ಅಳವಡಿಕೆ ಮಾಡಲು ಚಿಂತನೆ ನಡೆಸಿದ್ದೇವೆ. ಈ ಮೂಲಕ ಮೂರ್ನಾಲ್ಕು ಮಂದಿಗೆ ದೃಷ್ಟಿ ನೀಡಲು ಯೋಚಿಸಿದ್ದೇವೆ ಎಂದು ತಿಳಿಸಿದ್ದರು

ಪುನೀತ್‌ ತಂದೆ ಹಾಗೂ ತಾಯಿಯ ಹಾದಿಯಲ್ಲಿ ಸಾಗಿ ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅಭಿಮಾನಿಗಳು ಹಾಗೂ ಕನ್ನಡಿಗರನ್ನು ದೇವರಂತೆ ಪೂಜಿಸುವ ಡಾ. ರಾಜ್‌ ಕುಟುಂಬದ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಡಾ.ರಾಜ್‌ ಕುಟುಂಬದ ಕುಡಿ ಇನ್ನಿಲ್ಲ ಎಂದು ಯಾರಿಗೂ ಈಗಲೂ ಉಹಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಪತ್ನಿ ಅಶ್ವಿನಿ ಮತ್ತು ಮಕ್ಕಳಿಗೆ ಧೈರ್ಯ ತುಂಬಲು  ರಾಜಕೀಯ ಗಣ್ಯರು ಮತ್ತು ಸಿನಿಮಾ ತಾರೆಯರು ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಅಪ್ಪು ನಿವಾಸದ ಬಳಿ ರಾಘಣ್ಣ ಕುಟುಂಬ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಮನೆ ಬಳಿ ಸೇರಿದಂತೆ ಭದ್ರತೆ ನಿಯೋಜಿಸಲಾಗಿದೆ. 

ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ

 

 2020ರ ಸಾಲಿನಲ್ಲಿ ದೇಶದಲ್ಲಿ (India) ಪ್ರತಿನಿತ್ಯ 418 ಮಂದಿಯಂತೆ ಸರಾಸರಿ 1,53,052 ಮಂದಿ ಆತ್ಮಹತ್ಯೆಗೆ (Suicide) ಶರಣಾಗುತ್ತಿದ್ದಾರೆ ಎಂಬ ವಿಚಾರ ರಾಷ್ಟ್ರೀಯ ಅಪರಾಧ ದಾಖಲೆ( NCRB)ಗಳ ವಾರ್ಷಿಕ ವರದಿಯಿಂದ ತಿಳಿದು ಬಂದಿದೆ.

ಹೆಚ್ಚು ಆತ್ಮಹತ್ಯೆಗೆ ಶರಣಾಗುವ ರಾಜ್ಯಗಳ (States) ಪಟ್ಟಿಯಲ್ಲಿ 12,259 ಸಾವು ದಾಖಲಿಸಿರುವ ಕರ್ನಾಟಕ (karnataka) 5ನೇ ಸ್ಥಾನದಲ್ಲಿದೆ ಹಾಗೂ 19,909 ಆತ್ಮಹತ್ಯೆ ಕೇಸ್‌ನೊಂದಿಗೆ ನೆರೆಯ ಮಹಾರಾಷ್ಟ್ರ (Maharashtra) ಅಗ್ರ ಸ್ಥಾನದಲ್ಲಿದೆ.

ಉಳಿದಂತೆ ತಮಿಳುನಾಡು (Tamilnadu) 16,883, ಮಧ್ಯಪ್ರದೇಶ 14,578, ಪಶ್ಚಿಮ ಬಂಗಾಳದಲ್ಲಿ (West bengal) 13,103 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತನ್ಮೂಲಕ ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಸೂಸೈಡ್‌ಗಳ ಪೈಕಿ ಈ ಐದು ರಾಜ್ಯಗಳಲ್ಲೇ ಶೇ.50.1ರಷ್ಟುಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇನ್ನು ಶೇ.49.9ರಷ್ಟುಮಂದಿ 23 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ದೇಶದ ಶೇ.16.9ರಷ್ಟುಅಂದರೆ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾದವರ ಪ್ರಮಾಣ ಕೇವಲ 3.1ರಷ್ಟಿದೆ.

Follow Us:
Download App:
  • android
  • ios