ಸುದೀಪ್ ತಾಯಿ ನನ್ನ ತಾಯಿ ಇದ್ದಂಗೆ, ಸುದೀಪ್ ಸಂತೈಸಿದ ರಾಘವೇಂದ್ರ ರಾಜ್‌ಕುಮಾರ್
ಸುದೀಪ್ ನಿವಾಸಕ್ಕೆ ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಬಂದಿದೆ. ಸುದೀಪ್ ಅಮ್ಮನ ಅಂತಿಮ ದರ್ಶನಕ್ಕೆ ಬಂದಿರುವ ನಟ ರಾಘವೇಂದ್ರ ರಾಜ್‌ಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ...
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಮಾತೃ ವಿಯೋಗ ಕಾಡಿದ್ದು ಗೊತ್ತೇ ಇದೆ. ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಸಂಜೀವ್ ಅವರು ನಿಧನರಾಗಿದ್ದು ಗೊತ್ತೇ ಇದೆ. ಇದೀಗ ಸುದೀಪ್ ನಿವಾಸಕ್ಕೆ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಕುಟುಂಬ ಬಂದಿದೆ. ಸುದೀಪ್ ಅಮ್ಮನ ಅಂತಿಮ ದರ್ಶನಕ್ಕೆ ಬಂದಿರುವ ನಟ ರಾಘವೇಂದ್ರ ರಾಜ್‌ಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ರಾಘವೇಂದ್ರ ರಾಜಕುಮಾರ್ 'ಸುದೀಪ್ ತಾಯಿ ನನ್ನ ತಾಯಿ ಇದ್ದಂಗೆ. ತುಂಬಾ ಹಿರಿಯ ಸ್ನೇಹಿತರು, ನಮ್ಮ ಕುಟುಂಬಕ್ಕೆ ಆತ್ಮೀಯರು.
ಆಗಾಗ ನಮ್ಮ ಮನೆಗೆ ಬಂದು ಹೋಗ್ತಿದ್ರು. ನಾವು ಅವರ ಆಶೀರ್ವಾದ ಪಡೀತಿದ್ವಿ. ಸುದೀಪ್‌ನ ನೆನಸಿಕೊಂಡ್ರೆ ಬೇಜಾರಾಗುತ್ತೆ. ತಾಯಿನ ಕಳೆದುಕೊಂಡ ಜೀವನ ಹೇಗಿರುತ್ತೆ ಅಂತಾ ನಾನು ಅನಭವಿಸಿದೀನಿ. ಸುದೀಪ್‌ಗೆ ಈ ನೋವು ತಡೆದುಕೊಳ್ಳುವ ಶಕ್ತಿ ದೇವರು ಕೊಡಲಿ' ಎಂದಿದ್ದಾರೆ.
ಮುಗಿಲು ಮುಟ್ಟಿದ ಕಿಚ್ಚನ ಆಕ್ರಂದನ, ಅಮ್ಮನ ಪಾದ ಹಿಡಿದು ಕಣ್ಣೀರಾದ ನಟ ಸುದೀಪ್
ನಟ ದುನಿಯಾ ವಿಜಯ್ ಸೇರಿದಂತೆ, ಸುದೀಪ್ ಅಮ್ಮನ ಅಂತಿಮ ದರ್ಶನಕ್ಕೆ ಬೊಮ್ಮನಳ್ಳಿ ಶಾಸಕ ಸತೀಶ್ ರೆಡ್ಡಿ ಹಾಗೂ ಮಾಜಿ ಕಾರ್ಪೋರೇಟರ್ ಮೋಹನ್ ರಾಜ್ ಸಹ ಆಗಮಿಸಿದ್ದಾರೆ. ಚಿತ್ರರಂಗ ಹಾಗೂ ಕಿರುತೆರೆಉ ಬಹಳಷ್ಟು ಕಲಾವಿದರು ಈಗಾಗಲೇ ಆಗಮಿಸಿ, ಸುದೀಪ್ ಅಮ್ಮ ಸರೋಜಾರ ಪಾರ\ರ್ಥಿವ ಶರೀರದ ಅಂತಮ ದರ್ಶನ ಪಡೆದಿದ್ದಾರೆ.
ಈಗಾಗಲೇ ನಟ ಸುದೀಪ್ ನಿವಾಸದ ಬಳಿ ಅವರ ಕುಟುಂಬಸ್ಥರು, ಆಪ್ತರು ಸೇರಿದಂತೆ, ಚಿತ್ರರಂಗದು ಹಲವು ಗಣ್ಣರು ಹಾಜರಾಗಿದ್ದಾರೆ. ನಟ ಸುದೀಪ್ ಅಮ್ಮನ ಪಾದ ಸ್ಪರ್ಶ ಮಾಡಿ ಕಣ್ಣೀರು ಹಾಕುತ್ತಿರುವುದನ್ನು ಕಂಡು ಅಲ್ಲಿದ್ದವರ ಕಣ್ಣುಗಳು ಒದ್ದೆಯಾಗುತ್ತಿವೆ. ಸುದೀಪ್ ನಿವಾಸದ ಬಳಿ, ಬ್ಯಾರಿಕೇಡ್ ಹಾಗೂ ಟೆಂಟ್ ಹಾಕಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ನಡೆಯುವ ಅಂತ್ಯ ಸಂಸ್ಕಾರಕ್ಕೆ ಕೂಡ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಪೋಷಕರು ಎಂದರೆ ನಟ ಕಿಚ್ಚ ಸುದೀಪ್ ಅವರಿಗೆ ಪಂಚಪ್ರಾಣ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿ. ಕಾರಣ, ಸುದೀಪ್ ಅವರು ಹಲವಾರು ವೇದಿಕೆಗಳಲ್ಲಿ ತಮ್ಮ ಅಪ್ಪ-ಅಮ್ಮನ ಬಗ್ಗೆ ಒಳ್ಳೆಯ ಮಾತು ಹೇಳಿದ್ದಾರೆ. ಜೊತೆಗೆ, ಹಲವು ಬಾರಿ ಸಂದರ್ಶನಗಳಲ್ಲಿ, 'ಪ್ರತಿಯೊಬ್ಬರೂ ಅವರ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದ್ದಾರೆ. ಇದೀಗ ಟನ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿತ್ತು ಎನ್ನಲಾಗಿದೆ.
ಅಮ್ಮನ ಸಾವಿನ ಸೂಚನೆ ಸುದೀಪ್‌ಗೆ ಮೊದಲೇ ಸಿಕ್ಕಿತ್ತಾ? ಬದುಕಿಸಲು ಹರಕೆ ಹೊತ್ತಿದ್ರಾ?
ಸದ್ಯ ನಟ ಕಿಚ್ಚ ಸುದೀಪ್ ಅವರು 'ಬಿಗ್ ಬಾಸ್ ಕನ್ನಡ ಸೀಸನ್-11' ಶೋ ನಡೆಸಿಕೊಡುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಗ್ ಬಾಸ್ ಕನ್ನಡದ ಹೋಸ್ಟ್ ಆಗಿ ನಟ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಳೆದ ಹತ್ತೂ ಸೀಸನ್‌ಗಳನ್ನು ಸಹ ನಟ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ಗಮನಾರ್ಹ ಅಂಶ. ಇದೀಗ ಸುದೀಪ್ ಹನ್ನೊಂದನೇ ಸೀಸನ್ ನಡೆಸಿಕೊಡುತ್ತಿದ್ದು, ಇದೇ ತಮ್ಮ ಕೊನೆಯ ಬಿಗ್ ಬಾಸ್ ಶೋ ಎಂದು ಅದೇ ವೇದಿಕೆಯಲ್ಲಿ ಘೋಷಿಸಿದ್ದಾರೆ.