ಅಮ್ಮನ ಸಾವಿನ ಸೂಚನೆ ಸುದೀಪ್‌ಗೆ ಮೊದಲೇ ಸಿಕ್ಕಿತ್ತಾ? ಬದುಕಿಸಲು ಹರಕೆ ಹೊತ್ತಿದ್ರಾ?

ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ಹಲವು ದಿನಗಳ ಹಿಂದೆಯೇ ಅನಾರೋಗ್ಯಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ತಾಯಿಯವರ ಸ್ಥಿತಿ ಗಂಭೀರ ಎನ್ನಲಾಗುತ್ತಿತ್ತು ಎಂದು ಈಗ ಅವರ ಆಪ್ತರು ಹೇಳುತ್ತಿದ್ದಾರೆ. ಸುದೀಪ್ ಅಮ್ಮ ಸರೋಜಾ ಸಂಜೀವ್..

Kichcha Sudeep tried lot to save her from deathe by exvoto srb

ಇತ್ತೀಚೆಗಷ್ಟೆ ಬಿಗ್​ಬಾಸ್ ವೇದಿಕೆ ಮೇಲೆ ಸುದೀಪ್ ಅವರು ಅವರ ತಾಯಿಯನ್ನು ನೆನಪಿಸಿಕೊಂಡಿದ್ದರು. ಈ ಸೀಸನ್​ನ ಮೊದಲ ವೀಕೆಂಡ್ ಪಂಚಾಯಿತಿಗೆ ಬಂದಿದ್ದ ಸುದೀಪ್ ಶೇರವಾನಿ ಹಾಕಿಕೊಂಡು ಬರಿಗಾಲಲ್ಲಿ ವೇದಿಕೆಗೆ ಹತ್ತಿದ್ದರು. ನವರಾತ್ರಿ ಇದ್ದ ಕಾರಣ ತಾವು ಹೀಗೆ ಡ್ರೆಸ್ ಮಾಡಿಕೊಂಡು ಬಂದಿದ್ದಾಗಿ ಹೇಳಿದ ಸುದೀಪ್, ಕ್ಯಾಮೆರಾ ನೋಡಿಕೊಂಡು 'ಅಮ್ಮ ನೋಡಿ, ಬರಿಗಾಲಲ್ಲಿ ಬಂದಿದ್ದೀನಿ, ಹಬ್ಬಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಂಡಿದ್ದೀನಿ' ಎಂದಿದ್ದರು.

ನಟ ಕಿಚ್ಚ ಸುದೀಪ್ ಆಗಲೇ ಯಾಕೆ ಹಾಗೆ ಹೇಳಿದ್ದರು? ಸುದೀಪ್ ಅವರಿಗೆ ಆಗಲೇ ಸೂಚನೆ ಸಿಕ್ಕಿತ್ತಾ? ಅಥವಾ ಅವರ ತಾಯಿಗೆ ಆಗಲೇ ಅನಾರೋಗ್ಯ ಕಾಡುತ್ತಿತ್ತಾ? ಹೀಗೆಲ್ಲಾ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಬಹುಶ, ಸುದೀಪ್ ಅವರ ಅಮ್ಮ ಸರೋಜಾ ಆಗಲೇ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಅಮ್ಮ-ಅಪ್ಪನನ್ನು ತುಂಬಾ ಇಷ್ಟಪಡುವ ಸುದೀಪ್ ಅವರು ತಮ್ಮ ತಾಯಿ ಹುಶಾರಾಗಲೀ ಎಂದು ಹರಕೆ ಹೊತ್ತು ಹಾಗೆ ಬರಿಗಾಲಲ್ಲಿ ಬಂದಿದ್ದಿರಬಹುದು ಎಂದು ಅನೇಕರು ಹೇಳುತ್ತಿದ್ದಾರೆ. 

ರಶ್ಮಿಕಾ-ಸುದೀಪ್ ಹುಶಾರ್, ಸೋಷಿಯಲ್ ಮೀಡಿಯಾದಲ್ಲಿ ಜೋರಾಯ್ತು ಫ್ಯಾನ್ಸ್ ಕೂಗು!

ಇನ್ನೂ ಹಲವರು, ಬಹುಶಃ ನವರಾತ್ರಿ ಆದ್ದರಿಂದ ದೇವಿಗೆ ಅಮ್ಮ ಎಂದು ಸಂಬೋಧಿಸಿ, ಹರಕೆ ಹೊತ್ತು ಶೇರ್ವಾನಿ ತೊಟ್ಟು ಬರಿಗಾಲಲ್ಲಿ ಬಂದಿರಬಹುದು ಎನ್ನುತ್ತಿದ್ದಾರೆ. ವಿಷಯ ಏನೇ ಆಗಿರಲಿ, ನಟ ಸುದೀಪ್ ಬಾಯಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಅಮ್ಮನ ಬಗ್ಗೆ ಮಾತು ಆ ರೀತಿಯಲ್ಲಿ ಮಾತು ಬಂದಿದೆ. ಕ್ಯಾಮೆರಾ ನೋಡಿಕೊಂಡು 'ಅಮ್ಮ ನೋಡಿ, ಬರಿಗಾಲಲ್ಲಿ ಬಂದಿದ್ದೀನಿ, ಹಬ್ಬಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಂಡಿದ್ದೀನಿ' ಎಂದಿದ್ದರು. ಈಗ ಸುದೀಪ್ ಅಮ್ಮನನ್ನು ಕಳೆದುಕೊಂಡಿದ್ದಾರೆ. 

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ಹಲವು ದಿನಗಳ ಹಿಂದೆಯೇ ಅನಾರೋಗ್ಯಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ತಾಯಿಯವರ ಸ್ಥಿತಿ ಗಂಭೀರ ಎನ್ನಲಾಗುತ್ತಿತ್ತು ಎಂದು ಈಗ ಅವರ ಆಪ್ತರು ಹೇಳುತ್ತಿದ್ದಾರೆ. ಸುದೀಪ್ ಅಮ್ಮ ಸರೋಜಾ ಸಂಜೀವ್ ಅವರು ಜಯನಗರ 4ನೇ ಬ್ಲಾಕ್‌ನಲ್ಲಿರುವ  ಅಫೋಲೋ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. 

ಸುದೀಪ್ ಬಳಿಕ 'ಬಿಗ್ ಬಾಸ್ ಕನ್ನಡ-12' ಹೋಸ್ಟ್ ಯಾರು? ಕೇಳಿ ಬಂದ ಹೆಸರು ಇದು ನೋಡ್ರೀ..!

ಸದ್ಯ ನಟ ಕಿಚ್ಚ ಸುದೀಪ್ ಅವರು 'ಬಿಗ್ ಬಾಸ್ ಕನ್ನಡ ಸೀಸನ್-11' ಶೋ ನಡೆಸಿಕೊಡುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಗ್ ಬಾಸ್ ಕನ್ನಡದ ಹೋಸ್ಟ್ ಆಗಿ ನಟ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಳೆದ ಹತ್ತೂ ಸೀಸನ್‌ಗಳನ್ನು ಸಹ ನಟ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ಗಮನಾರ್ಹ ಅಂಶ. ಇದೀಗ ಸುದೀಪ್ ಹನ್ನೊಂದನೇ ಸೀಸನ್ ನಡೆಸಿಕೊಡುತ್ತಿದ್ದು, ಇದೇ ತಮ್ಮ ಕೊನೆಯ ಬಿಗ್ ಬಾಸ್ ಶೋ ಎಂದು ಅದೇ ವೇದಿಕೆಯಲ್ಲಿ ಘೋಷಿಸಿದ್ದಾರೆ.  
 

Latest Videos
Follow Us:
Download App:
  • android
  • ios