ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಮಾಹಿತಿ ನೀಡಿದ್ದಾರೆ. 

ಪವರ್ ಸ್ಟಾರ್ ಪುನೀತ್ ನಟನೆಯ ಕೊನೆಯ ಸಿನಿಮಾ 'ಗಂಧದ ಗುಡಿ' ಪ್ರೀ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಅಪ್ಪು ಪರ್ವ ಹೆಸರಿನಲ್ಲಿ ಈ ಈವೆಂಟ್ ನಡೆಯುತ್ತಿದ್ದು ಸ್ಯಾಂಡಲ್ ವುಡ್ ಮತ್ತು ಪರಭಾಷೆಯ ಕಲಾವಿದರು ಭಾಗಿಯಾಗಲಿದ್ದಾರೆ. ಈಗಾಗಲೇ ರಾಜ್ ಕುಟುಂಬ ಅನೇಕ ಸಿನಿ ಗಣ್ಯರಿಗೆ ಆಹ್ವಾನ ನೀಡಿದ್ದು ಬಹುತೇಕ ಕಲಾವಿದರು ಅಪ್ಪು ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ಇದೀಗ ರಾಜ್ ಕುಟುಂಬ ಸುದ್ಧಿಗೋಷ್ಠಿ ನಡೆಸಿದ್ದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. 

ಅಕ್ಟೋಬರ್ 21 ರಂದು ಪುನೀತ ಪರ್ವ ಕಾರ್ಯಕ್ರಮ ನಡೆಯುತ್ತಿದೆ. ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ರಾಘವೇಂದ್ರ ರಾಜ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ವೇಳೆ ಗಂಧದಗುಡಿ ನಿರ್ದೇಶಕ ಅಮೋಘ ವರ್ಷ ಕೂಡ ಜೊತೆಯಲ್ಲಿದ್ದರು. 'ಈ ಕಾರ್ಯಕ್ರಮ ಅಪ್ಪು ಪತ್ನಿ ಅಶ್ವೀನಿ ಅವರ ಕೈ ಕೆಳಗೆ ನಡೆಯುತ್ತಿದೆ. ಅವರೇ ಇದರ ಮುಂದಾಳತ್ವ ವಹಿಸಿಕೊಂಡಿದ್ದಾರೆ.
ಪುನೀತ್ ಗಂಧದ ಗುಡಿಯನ್ನು ಬಹಳ ಪ್ರೀತಿಯಿಂದ ಮಾಡಿದ್ದಾರೆ. ದೇವರು ಈ ಸಿನಿಮಾ ಮುಗಿಸಿ ಹೋಗಲು ಅಪ್ಪುಗೆ ಅವಕಾಶ ಕೊಟ್ಟಿದ್ದಾನೆ' ಎಂದು ಹೇಳಿದರು. 

ಅಪ್ಪು ಅಭಿಮಾನದಲ್ಲಿ ಮಿಂದೇಳಲು ರೆಡಿಯಾಗಿ: ಪುನೀತ ಪರ್ವ ಕಾರ್ಯಕ್ರಮ ಹೇಗೆ ನಡೆಯುತ್ತೆ ಗೊತ್ತಾ?

'ಗಂಧದ ಗುಡಿ ಕಾರ್ಯಕ್ರಮ ಒಂದು ಸೆಲೆಬ್ರೇಷನ್. ಅವನು ಇದ್ದಿದ್ದರೆ ಎಷ್ಟು ಚೆನ್ನಾಗಿ ಮಾಡುತ್ತಿದ್ದನೋ ಅದಕ್ಕಿಂತ ಚೆನ್ನಾಗಿ ಮಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ಹಾಡು, ಡಾನ್ಸ್ ಎಲ್ಲವೂ ಇರುತ್ತೆ. ಯಶ್, ಸೂರ್ಯ, ಬಾಲಯ್ಯ, ರಾಣ ದಗ್ಗುಭಾಟಿ, ಸೇರಿದಂತೆ ಎಲ್ಲರೂ ಬರ್ತಾರೆ. ಕಾರ್ಯಕ್ರಮದಲ್ಲಿ ಎಲ್ಲಾ ಚಿತ್ರರಂಗದ ಗಣ್ಯರು ಇರುತ್ತಾರೆ. ಈ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತೆ. ಕಣ್ಣಿಗೆ ಹಬ್ಬದ ಹಾಗೆ ಇರುತ್ತೆ. ಇದನ್ನ ನಿಮಗಾಗೆ ಮಾಡುತ್ತಿದ್ದೇವೆ, ನಿಮಗೆ ತಲುಪಿಸೋದು ನಮ್ಮ ಧರ್ಮ. ಅಪ್ಪು ಯಾರೊಬ್ಬರ ಸ್ವತ್ತಲ್ಲ. ಇಡೀ ಕರ್ನಾಟಕದ ಸ್ವತ್ತು. ಇದನ್ನ ಎಲ್ಲರಿಗೂ ತಲುಪಿಸಬೇಕು. ಈ ಕಾರ್ಯಕ್ರಮದ ಓನರ್ ಶಿಪ್ ಎಲ್ಲರಿಗೂ ತಲುಪುತ್ತೆ' ಎಂದು ಹೇಳಿದರು. 

ಧೂಳೆಬ್ಬಿಸಿದ ಗಂಧದ ಗುಡಿ ಟ್ರೈಲರ್: ಕೋಟಿ ಜನರ ಮನ ಗೆದ್ದ ಅಪ್ಪು..!

ಅಭಿಮಾನಿಗಳಿಗೆ ವ್ಯವಸ್ಥೆ

ದೂರದಿಂದ ಬರುವ ಅಭಿಮಾನಿಗಳಿಗೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ. ನಿನ್ನೆಯಿಂದಲೇ ಅಭಿಮಾನಿಗಳು ಬರೋದಕ್ಕೆ ಶುರು ಮಾಡಿದ್ದಾರೆ. ಈ ಕಾರ್ಯಕ್ರಮ ನೋಡಿ ಇಡೀ ದೇಶ ಪ್ರಪಂಚ ಮಾತಾಡಬೇಕು ಆ ರೀತಿ ಮಾಡೋಣ. ಅಪ್ಪಾಜಿ ಬಗ್ಗೆ ಒಂದು ಪುಸ್ತಕ ಬರೆದ ಅಪ್ಪು. ಈಗ ಈ ಸಿನಿಮಾ ಮೂಲಕ ಜನರಿಗೆ ಅಪ್ಪು ಏನೋ ಹೇಳೋಕೆ ಹೊರಟಿದ್ದಾರೆ. ಎಷ್ಟು ಜನ ಬರ್ತಾರೆ ಅಂತ ಲೆಕ್ಕ ಹಾಕೋಕೆ ಆಗಲ್ಲ. ಎಷ್ಟೇ ಜನ ಬಂದ್ರು ಅವರಿಗೆ ಕಾರ್ಯಕ್ರಮ ತೋರಿಸೋ ಕೆಲಸ ನಮ್ಮದು ಅದಕ್ಕೆ ನಾವು ರೆಡಿಯಿದ್ದೇವೆ. ನಾವು ಏನೋ ಮಾಡುತ್ತೇವೆ ಅಂತ ಹೇಳಿಕೊಳ್ಳೊ ಕುಟುಂಬ ಅಲ್ಲ. ನೀವು ನೋಡಿ ಹೇಳಬೇಕು' ಎಂದರು.