Asianet Suvarna News Asianet Suvarna News

ಡಾ. ರಾಜ್ ಕುಮಾರ್ ಸಿನಿಮಾ ಕಥೆ ಕೇಳಿದ ತಕ್ಷಣ ಮಾಡುತ್ತಿದ್ದ ಮೊದಲ ಕೆಲಸವೇನೆಂದು ಬಹಿರಂಗ ಪಡಿಸಿದ ರಾಘಣ್ಣ

ಡಾ. ರಾಜ್ ಕುಮಾರ್ ಸಿನಿಮಾ ಕಥೆ ಕೇಳಿದ ತಕ್ಷಣ ಮಾಡುತ್ತಿದ್ದ ಮೊದಲ ಕೆಲಸವೇನೆಂದು ರಾಘವೇಂದ್ರ ರಾಜ್ ಕುಮಾರ್ ಬಹಿರಂಗ ಪಡಿಸಿದ್ದಾರೆ.  

Raghavendra rajkumar reveals how Dr Rajkumar selected the script sgk
Author
First Published Apr 22, 2023, 12:15 PM IST

ಡಾ.ರಾಜ್ ಕುಮಾರ್ ನಟಿಸಿದ ಬಹುತೇಕ ಸಿನಿಮಾಗಳು ಸಿನಿ ಪ್ರೇಕ್ಷಕರ ಹೃದಯ ಗೆದ್ದಿವೆ. 200ಕ್ಕೂ ಸಿನಿಮಾಗಳಲ್ಲಿ ನಟಿಸಿರುವ ಅಣ್ಣಾವ್ರು ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಡಾ.ರಾಜ್ ಕುಮಾರ್ ಮಾಡಿದ ಬಹುತೇಕ ಪಾತ್ರಗಳು ಇಂದಿಗೂ ಅಭಿಮಾನಿಗಳನ್ನುಕಾಡುವಂತ ಪಾತ್ರಗಳಾಗಿವೆ. ಅಷ್ಟು ಅದ್ಭುತ ಪಾತ್ರಗಳ ಮೂಲಕ ಅಭಿಮಾನಿ ದೇವರುಗಳ ಮುಂದೆ ಬಂದಿದ್ದಾರೆ. ರಾಜ್ ಕುಮಾರ್ ಇಷ್ಟು ಉತ್ತಮ ಪಾತ್ರಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು, ಕಥೆ ಹೇಗೆ ಕೇಳುತ್ತಿದ್ದರು ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಡಾ.ರಾಜ್ ಕುಮಾರ್ ಹೇಗೆ ಕೇಳುತ್ತಿದ್ದರು, ಹೇಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎನ್ನುವ ಇಂಟ್ರಸ್ಟಿಂಗ್ ವಿಚಾರವನ್ನು ರಾಘವೇಂದ್ರ ರಾಜ್ ಕುಮಾರ್ ಬಹಿರಂಗ ಪಡಿಸಿದ್ದಾರೆ. 

ಇತ್ತೀಚೆಗಷ್ಟೆ ರಾಘಣ್ಣ ಮತ್ತು ನವರಸನಾಯಕ ಜಗ್ಗೇಶ್ ಇಬ್ಬರೂ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಅಧಿಕೃತ ಯೂಟ್ಯೂಬ್ ವಾಹಿನಿಯಲ್ಲಿ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಜಗ್ಗೇಶ್ ಸದ್ಯ ರಾಘವೇಂದ್ರ ಸ್ಟೋರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಜಗ್ಗೇಶ್ ಮತ್ತು ರಾಘಣ್ಣ ಇಬ್ಬರೂ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ರಾಘವೇಂದ್ರ ಸ್ಟೋರ್ ಸಿನಿಮಾ ಬಗ್ಗೆ ಮಾತನಾಡುತ್ತಾ ಡಾ.ರಾಜ್ ಕುಮಾರ್ ಬಗ್ಗೆಯೂ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ರಾಘಣ್ಣ. 

ಡಾ.ರಾಜ್ ಕುಮಾರ್ ಕಥೆ ಕೇಳುವ ಮೊದಲು ಮಾಡುತ್ತಿದ್ದ ಕೆಲಸ ಮತ್ತು ಕಥೆ ಕೇಳದ ಬಳಿಕ ಏನು ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಮೊದಲು ಈ ಸಿನಿಮಾ ನಾನು ಯಾಕೆ ಮಾಡಬೇಕು ಎಂದು ಕೇಳುತ್ತಿದ್ದರು ಎಂದು ರಾಘಣ್ಣ ಅಪ್ಪಾಜಿಯ ಕಥೆ ಆಯ್ಕೆ ಬಗ್ಗೆ ಹೇಳಿದ್ದಾರೆ.  

'ಎಲ್ಲರಿಗೂ ನಮ್ಮ ತಾಯಿ ಕಂಬೈನ್ಸ್ ನಲ್ಲಿ ಅಪ್ಪಾಜಿಗೆ ಒಳ್ಳೆ ಸಿನಿಮಾಗಳು ಬರುತ್ತೆ, ಹೇಗಯ್ಯ, ಒಳ್ಳೆದೆಲ್ಲಾ ಅವರಿಗೆನೇ ಬರುತ್ತೆ, ಹೇಗೆ ಕಥೆ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಇದೆ. ನಾನು ನೋಡಿದ ಹಾಗೆ ನಂಜುಂಡ ಕಲ್ಯಾಣದಿಂದ, ಓಂ, ಜನುಮದ ಜೋಡಿ, ಜೀವನ ಚೈತ್ರ ಕೊನೆಗೆ ತನ್ನ ತಮ್ಮನ ಅರಸು ಚಿತ್ರದ ವರೆಗೂ ನೋಡಿದ್ದೀನಿ' ಎಂದು ಮಾತು ಮುಂದುವರೆಸಿದ ರಾಘವೇಂದ್ರ ರಾಜ್ ಕುಮಾರ್ ಒಂದು ಕಥೆಗೆ ಅಪ್ಪಾಜಿ ಹೇಗೆ ಕುಳಿತುಕೊಳ್ಳುತ್ತಿದ್ರು ಎಂದು ವಿವರಿಸಿದರು. 

'ಒಂದು ಕಥೆಗೆ ಅಪ್ಪಾಜಿ ಹೇಗೆ ಕುಳಿತುಕೊಳ್ಳುತ್ತಿದ್ರು ಎಂದರೆ ನಮ್ಮ ತಂದೆಗೆ ಕಥೆ ಕೇಳಬೇಕಾದರೆ ಉದಯ್ ಶಂಕರ್ ಬರುತ್ತಿದ್ರು, ನಮ್ಮ ಚಿಕ್ಕಪ್ಪ ಕೂಡ ಜೊತೆಯಲ್ಲೇ ಇರೋರು. ಈ ಸಿನಿಮಾನ ನಾನು ಯಾಕೆ ಮಾಡಬೇಕು ಎಂದು ಮೂರು ಕಾರಣ ಕೊಡಿ ಎಂದು ಮೊದಲು ಕೇಳುತ್ತಿದ್ದರು, ಇದು ಯಾವಾಗಲೂ ಕೇಳುತ್ತಿದ್ದ ಪ್ರಶ್ನೆ. ಕಥೆ ಎಲ್ಲಾ ಕೇಳಿದ ಮೇಲೆ ಈ ಸಿನಿಮಾನಾ ಜನ ಯಾಕೆ ನೋಡಬೇಕು 4 ಕಾರಣ ಕೊಡಿ ಎಂದು ಕೇಳೋರು. ಇದೆರಡು ಇದ್ರೆ ಮಾಡೋಣ ಇಲ್ಲ ಅಂದರೆ ಬಿಡಿ ಎಂದು ಹೇಳ್ತಾ ಇದ್ರು' ಎಂದು ರಾಘಣ್ಣ ವಿವರಿಸಿದ್ದಾರೆ. 

ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಸೆಟ್‌ನಲ್ಲಿ ನಾನ್‌ವೆಜ್ ಇಲ್ಲವೇ ಇಲ್ಲ; ಮಡಿವಂತಿಕೆ ಮಾಡಿದ್ದು ಯಾಕೆಂದು ಹೇಳಿದ ರವಿಶಂಕರ್

'ಅಷ್ಟೆಯಲ್ಲ ಸಿನಿಮಾನಾ ಅಭಿಮಾನಿಗಳು ಮನೆಗೆ ತೆಗೆದುಕೊಂಡು ಹೋಗಬೇಕು. ಮನೆಗೆ ಹೋಗಿ ಮಲಗಿದಾಗಲೂ ಅದು ಕಾಡಬೇಕು ಎಂದು ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದುರು' ಎಂದು ಹೇಳಿದ್ದಾರೆ.  ಇದೇ ವೇಳೆ ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ ಸಿನಿಮಾ ಯಾಕೆ ನೋಡಬೇಕು ಎಂದು ರಾಘಣ್ಣ ಪ್ರಶ್ನೆ ಮಾಡಿದರು.  

ರಾಘವೇಂದ್ರ ಸ್ಟೋರ್ಸ್‌ನಲ್ಲಿ ವ್ಯಾಪಾರಕ್ಕೆ ನಿಂತ ನಟಿ ಶ್ವೇತಾ ಶ್ರೀವಾಸ್ತವ್ ಫೋಟೋ ವೈರಲ್?

ರಾಘಣ್ಣ ಪ್ರಶ್ನೆಗೆ ಉತ್ತರಿಸಿದ ಜಗ್ಗೇಶ್ ಈ ಸಿನಿಮಾದಲ್ಲಿ ಇಬ್ಬರೂ ಸಾಧಕರ ಜೊತೆ ಕೆಲಸ ಮಾಡುವ ಯೋಗ. ಒಂದು ಹೊಂಬಾಳೆ ಪಿಲ್ಮ್ಸ್ ಬ್ಯಾನರ್ ಮತ್ತೊಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಎಂದು ಹೇಳಿದರು. ಮತ್ತೊಂದು ನಾನು ನಗಿಸುವ ಸಿನಿಮಾ ಮಾಡೋದನ್ನು ಮಾತ್ರ ಜನ ನೋಡುತ್ತಾರೆ. ಮೂರನೆಯದು ಆತ್ಮತೃಪ್ತಿ, ಒಳ್ಳೆಯ ಸಿನಿಮಾದಲ್ಲಿ ಮಾಡಿದ್ದೀನಿ ಎನ್ನುವ ಖುಷಿ. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ ಎಂದು ಹೇಳಿದರು. ಜನ ಯಾಕೆ ಬಂದು ನೋಡಬೇಕು ಎಂದು ವಿವರಿಸಿದ ಜಗ್ಗೇಶ್, ನಗಿಸುವ ಅವಕಾಶ ಸಿಕ್ಕಾಗ ನಾನು ಅದ್ಭುತವಾಗಿ ನಗಿಸಿದ್ದೀನಿ. ಹಾಗಾಗಿ ಜನ ಬರ್ತಾರೆ ನೋಡುತ್ತಾರೆ ಎಂದು ಜಗ್ಗೇಶ್ ಹೇಳಿದರು. 

Follow Us:
Download App:
  • android
  • ios