ರಾಘವೇಂದ್ರ ರಾಜ್‌ಕುಮಾರ್ ಅಭಿನಯಿಸಿರುವ ಸಿನಿಮಾಗಳ ಪಟ್ಟಿ ಕಡಿಮೆಯಾದರೂ ತಮ್ಮ ಪ್ರತಿಯೊಂದೂ ಸಿನಿಮಾ ವೀಕ್ಷಕರ ಮನಸ್ಸಿನಲ್ಲಿ ವಿಭಿನ್ನ ಛಾಪು ಮೂಡಿಸುತ್ತವೆ.  ಗಣೇಶ ಹಬ್ಬ, ಅಣ್ಣಮ್ಮ ಪೂಜೆ ಹಾಗೂ ಜಾತ್ರೆಗಳಲ್ಲಿ ರಾಘಣ್ಣನ ಹಾಡು ತಪ್ಪದೇ ಹೇಳಿರುತ್ತಾರೆ. ಅಂಥ ಪ್ರಭಾವ ಬೀರುವ ಪಾತ್ರಗಳಲ್ಲಿ ಮಿಂಚಿರುವ ರಾಘವೇಂದ್ರ ರಾಜ್‌ಕುಮಾರ್‌ ಇದೀಗ 25ನೇ ಸಿನಿಮಾಗೆ ಸಹಿ ಮಾಡಿದ್ದಾರೆ.

'ನನ್ನ ಸುಖ ನಿನಗಿರಲಿ, ನಿನ್ನ ದುಖಃ ನನಗಿರಲಿ; ಶಿವಣ್ಣ ಪುತ್ರಿಗೆ ರಾಘವೇಂದ್ರ ರಾಜ್‌ಕುಮಾರ್‌ ಭಾವುಕ ಮಾತು! 

ರಾಘವೇಂದ್ರ ರಾಜ್‌ಕುಮಾರ್‌ 25ನೇ ಚಿತ್ರಕ್ಕೆ 'ಆಡಿಸಿದಾತ' ಎಂದು ಶೀರ್ಷಿಕೆ ಇದ್ದು, ಶ್ರೀಮತಿ ಲಕ್ಷ್ಮಿ ಎಸ್‌ ಎ ಗೋವಿಂದ್‌ರಾಜು ಹಾಗೂ ನಾಗರಾಜ್‌ ವಿ ಅವರು ಸಹಕಾರದೊಂದಿಗೆ ದುರ್ಗ ಹುಲಿ ಸಿನಿ ಕ್ರಿಯೇಷನ್ಸ್‌ನಲ್ಲಿ ನಿರ್ಮಾಣವಾಗುತ್ತಿದೆ.  ಫಣೀಶ್‌ ಭಾರದ್ವಾಜ್‌ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದ ಟ್ರೈಲರ್‌ನನ್ನು ಇದೇ ಗೌರಿ ಗಣೇಶ್ ಹಬ್ಬದಂದು ಬಿಡುಗಡೆ ಮಾಡಲಾಗುತ್ತಿದೆ. ಆನಂದ್ ಇಳಯರಾಜ ಛಾಯಾಗ್ರಹಣ, ಹರೀಶ್‌ ಕೊಮ್ಮಿ ಸಂಕಲನ ಹಾಗೂ ಬಾಲ ನೃತ್ಯ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರ ಟೈಟಲ್‌ ಮೂಲಕವೇ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್  ಅಭಿನಯಿಸುತ್ತಿದ್ದಾರೆ.  ಖ್ಯಾತ ನಿರ್ದೇಶಕ ದೊರೆ ಭಗವಾನ್, ಗುರುದತ್, ಬಾಲರಾಜ್, ಸುಶ್ಮಿತ  ದಾಮೋದರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.