ಕನ್ನಡ ಚಿತ್ರರಂಗದ ಜೇನುಗೂಡಿನ ಕುಟುಂಬ ಅಂದ್ರೆ ಡಾ.ರಾಜ್‌ಕುಮಾರ್ ಅವರ ದೊಡ್ಮನೆ ಫ್ಯಾಮಿಲಿ. ಈ ಕುಟುಂಬದ ಒಗ್ಗಟ್ಟು, ಪ್ರೀತಿ, ಸುಖ-ದುಖಃದಲ್ಲಿ ಎಲ್ಲರೂ ಒಂದಾಗಿ ಭಾಗಿಯಾಗುವ ರೀತಿ ಎಲ್ಲರಿಗೂ ಮಾದರಿ. ಜುಲೈ 8ರಂದು ಹುಟ್ಟುಹಬ್ಬ ಆಚರಿಸಿಕೊಂಡ ನಿರುಪಮಾ ಶಿವರಾಜ್‌ಕುಮಾರ್‌ಗೆ ಚಿಕ್ಕಪ್ಪ ರಾಘವೇಂದ್ರ ರಾಜ್‌ಕುಮಾರ್‌  ಶುಭಾಶಯಗಳು ತಿಳಿಸಿದ್ದಾರೆ. ಅತ್ಯಂತ ಭಾವುಕವಾಗಿ ಅಣ್ಣನ ಮಗಳಿಗೆ ರಾಘಣ್ಣ ವಿಶ್ ಮಾಡಿದ್ದು, ಈ ಸಂಬಂಧದ ಬಗ್ಗೆ ಅಭಿಮಾನ ಉಕ್ಕುವಂತೆ ಮಾಡಿದೆ.

ರಾಘಣ್ಣ ಪೋಸ್ಟ್:
ರಾಜ್‌ಕುಮಾರ್‌ ಮುದ್ದು ಮೊಮ್ಮಗಳು ನಿರುಪಮಾ ವೃತ್ತಿಯಲ್ಲಿ ವೈದ್ಯೆ. 'ಹ್ಯಾಪಿ ಬರ್ತಡೇ ಮುದ್ದು ಮಗಳೇ. ನನ್ನ ಎಲ್ಲಾ ಸುಖ ನಿನಗಿರಲಿ, ನಿನ್ನ ಎಲ್ಲಾ ದುಖಃಗಳು ನಗಗಿರಲಿ. ದೇವರ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತದೆ ನಿರುಪಮಾ' ಎಂದು ಹೇಳಿ, ಶುಭ ಕೋರಿದ್ದಾರೆ.

 

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಾಘವೇಂದ್ರ ರಾಜ್‌ಕುಮಾರ್, ತಮ್ಮ ವೃತ್ತಿ ಜೀವನದ ಅದ್ಭುತ ಕ್ಷಣಗಳ ಬಗ್ಗೆ, ಅಪ್ಪಾಜಿ ಸಿನಿಮಾ ಪೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಆಪಾರ ಮಾಹಿತಿ ನೀಡುತ್ತಲೇ ಇರುತ್ತಾರೆ. ಪ್ರತೀ ಗುರುವಾರವೂ ಗುರು ರಾಘವೇಂದ್ರ ಸ್ವಾಮಿ ಫೋಟೋ ಅಥವಾ ಹಾಡುಗಳನ್ನು ಶೇರ್ ಮಾಡುತ್ತಾರೆ. ಆ ಮೂಲಕ ಡಾ. ರಾಜ್ ಅಭಿನಯಿಸಿ, ಹಾಡಿರುವ 'ಹಾಲಲ್ಲಾದರೂ ಹಾಕು, ನಿರಲ್ಲಾದರೂ ಹಾಕು...' ಎಂಬ ಭಕ್ತ ಪ್ರಧಾನ ಗೀತೆಯನ್ನು ನೆನಪಿಸುತ್ತಾರೆ. 

Independence day ದಿನ ಹುಟ್ಟಿದ ರಾಜ್ ಪುತ್ರನಿಗೆ ರಾಘವೇಂದ್ರ ಎಂದು ಹೆಸರಿಡಲು ಕಾರಣ ಇಲ್ಲಿದೆ!

ನಟ ಸಾರ್ವಭೌಮ ಡಾ.ರಾಜ್‌ಕುಮಾರ್ 'ಗುರು ರಾಘವೇಂದ್ರ ವೈಭೋಗ' ಸಿನಿಮಾದಲ್ಲಿ ಅಭಿನಯಿಸುವಾಗಲೇ ಗುರುವಾದ ದಿನ ದ್ವಿತಿಯ ಪುತ್ರ ಜನಿಸಿದ ಕಾರಣ, ಮಗನಿಗೆ ರಾಘವೇಂದ್ರ ರಾಜ್‌ಕುಮಾರ್ ಎಂದೇ ನಾಮಕರಣ ಮಾಡಿದರಂತೆ. ಕೆಲವು ವರ್ಷಗಳ ಹಿಂದೆ ರಾಘವೇಂದ್ರ ರಾಜ್‌ಕುಮಾರ್ ಅನಾರೋಗ್ಯರಾಗಿದ್ದಾಗ ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆಗ ಅಣ್ಣ ಶಿವರಾಜ್‌ಕುಮಾರ್‌ ಎಲ್ಲಾ ಕೆಲಸಗಳನ್ನು ಬಿಟ್ಟು, ತಮ್ಮನ ಜೊತೆಯೇ ಅನೇಕ ದಿನಗಳ ಕಾಲ ಸಿಂಗಾಪುರದಲ್ಲಿ ಉಳಿದುಕೊಂಡು, ಚಿಕಿತ್ಸೆ ಕೊಡಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪುನೀತ್ ರಾಜ್‌ಕುಮಾರ್ ತಮ್ಮ ನಿವಾಸದ ಪಕ್ಕದಲ್ಲೇ ರಾಘವೇಂದ್ರ ಅವರು ವಾಸವಿರಲು ಮನೆ ಕಟ್ಟಿಸಿಕೊಟ್ಟಿದ್ದಾರಂತೆ! ಈ ವಿಚಾರದ ಬಗ್ಗೆ ರಾಘವೇಂದ್ರ ಅವರು ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದಲ್ಲಿ ಹೇಳಿದ್ದರು.