ಬೆಂಗಳೂರು (ಏ. 18): ರಾಧಿಕಾ-ಯಶ್ ರದ್ದು ಮೇಡ್ ಫಾರ್ ಈಚ್ ಅದರ್ ಎನ್ನುವ ಜೋಡಿ. ಸಾಕಷ್ಟು ಜನ ಲವರ್ಸ್ ಗಳಿಗೆ ಇವರು ಸ್ಫೂರ್ತಿಯಾಗಿದ್ದಾರೆ. 

ರಾಧಿಕಾ ಅತ್ತೆ-ಮಾವರ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಅತ್ತೆ, ಮಾವ, ಪತಿ ಜೊತೆಗಿರುವ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿ ’ಐ ಆ್ಯಮ್ ಬ್ಲಸೆಡ್ ವಿತ್ ದೆಮ್’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನನಗಾಗಿ ಸ್ಪೆಷಲ್ ಗಿಫ್ಟ್ ನೀಡಿದ ಅವರಿಗೆ ಸ್ಪೆಷಲ್ ಥ್ಯಾಂಕ್ಸ್ ಎಂದಿದ್ದಾರೆ. 

 

ಅತ್ತೆ, ಮಾವನ ವೆಡ್ಡಿಂಗ್ ಆ್ಯನಿವರ್ಸರಿ ಸೆಲಬ್ರೇಶನ್ ಫೋಟೋ ಹಾಕಿ, ಹ್ಯಾಪಿ ವೆಡ್ಡಿಂಗ್ ಆ್ಯನಿವರ್ಸರಿ ಮೈ ಡಿಯರ್ ಅತ್ತೆ, ಡಾರ್ಲಿಂಗ್ ಮಾವ. ನನಗೆ ನೀವು ಕೊಟ್ಟ ಸ್ಪೆಷಲ್ ಗಿಫ್ಟ್ ಗೆ ಥ್ಯಾಂಕ್ಸ್ ಹೇಳದೇ ಇರಲು ಸಾಧ್ಯವಿಲ್ಲ. ನಿಮ್ಮ ಮಗ ನನ್ನ ಜಗತ್ತು. ಅವರೇ ನನಗೆ ಸ್ಪೆಷಲ್ ಗಿಫ್ಟ್ ಎಂದಿದ್ದಾರೆ.