ಐರಾ- ಯಥರ್ವ್, ಯಶ್-ನಂದಿನಿ; ರಾಖಿ ಹಬ್ಬದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್!
ರಾಕಿಂಗ್ ಸ್ಟಾರ್ ನಿವಾಸದಲ್ಲಿ ರಾಖಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸೆಲೆಬ್ರಿಟಿ ಕಿಡ್‌ಗಳಿಬ್ಬರೂ ಒಂದೇ ಡಿಸೈನರ್ ಉಡುಪಿನಲ್ಲಿ ಕಾಣಿಸಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.

ಯಾವುದೇ ಹಬ್ಬ ಆಗಿರಲಿ, ನಟಿ ರಾಧಿಕಾ ಪಂಡಿತ್ ಅದ್ಧೂರಿಯಾಗಿ ಆಚರಿಸುತ್ತಾರೆ. ಅದರಲ್ಲೂ ಪುಟ್ಟ ಕಂದಮ್ಮಗಳ ಎಂಟ್ರಿ ಆದ ಮೇಲಿಂದ ಎಲ್ಲ ಹಬ್ಬಗಳಲ್ಲಿಯೂ ಅವರದ್ದೇ ಹವಾ!
ಸೆಲೆಬ್ರಿಟಿ ಕಿಡ್ ಐರಾ ಮತ್ತು ಯಥರ್ವ್ ಹೊಸ ಮನೆಯಲ್ಲಿ ರಕ್ಷಾ ಬಂಧನ ಆಚರಿಸಿದ್ದಾರೆ. ಒಂದೇ ರೀತಿಯ ಉಡುಪು ಧರಿಸಿರುವ ಅವರು ನೆಟ್ಟಿಗರ ಗಮನ ಸೆಳೆದಿದ್ದಾರೆ.
ಪರ್ಪಲ್ ಬಣ್ಣದ ಫ್ಲೋರಲ್ ಲೆಹೆಂಗಾದಲ್ಲಿ ಐರಾ ಮಿಂಚುತ್ತಿದ್ದರೆ, ಬಿಳಿ ಪ್ಯಾಂಟ್ ಹಾಗೂ ಜುಬ್ಬಾದಲ್ಲಿ ಯಥರ್ವ್ ಕಾಣಿಸಿಕೊಂಡಿದ್ದಾನೆ.
ಇಬ್ಬರೂ ಸ್ವೀಟ್ಸ್ ಮುಂದೆ ನಿಂತು ಸಂಭ್ರಮಿಸುತ್ತಿರುವುದು ಹಾಗೂ ಡಿಫರೆಂಟ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ.
ಯಶ್ ಸಹೋದರಿ ನಂದಿನಿ ಕೂಡ ಹೊಸ ನಿವಾಸಕ್ಕೆ ತೆರಳಿ, ಅಣ್ಣನಿಗೆ ರಾಖಿ ಕಟ್ಟಿದ್ದಾರೆ. ಯಶ್ ಕೆಜಿಎಫ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ರಾಧಿಕಾ ಸಹೋದರ ಗೌರವ್ ವಿದೇಶದಲ್ಲಿ ನೆಲೆಸಿರುವ ಕಾರಣ ರಾಧಿಕಾ ಹಳೆ ಫೋಟೋವೊಂದನ್ನು ಶೇರ್ ಮಾಡಿ, ರಕ್ಷಾ ಬಂಧನಕ್ಕೆ ಸಹೋದರಿಗೆ ಶುಭ ಹಾರೈಸಿದ್ದಾರೆ.
'ಪರಿಶುದ್ಧವಾದ ಪ್ರೀತಿ ಇರುವ ಸ್ಪೆಷಲ್ ಬಾಂಡ್ ಇದು. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು,' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.