Asianet Suvarna News Asianet Suvarna News

ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಕನ್ನಡದ ಸ್ವೀಟಿ, ಅಂತೂ ಇಂತೂ ಬಾಯ್ಬಿಟ್ರು ರಾಧಿಕಾ ಕುಮಾರಸ್ವಾಮಿ!

ನಮ್ ಮನಸ್ಸು ಚೆನ್ನಾಗಿ ಇದ್ರೆ ಮುಖ, ದೇಹ ಕೂಡ ಚೆನ್ನಾಗಿಯೇ ಇರುತ್ತೆ.. ಟೆನ್ಷನ್ ಜಾಸ್ತಿ ತಗೊಳ್ಳಲ್ಲ.. ನಾವೇನೂ ದೇವ್ರಲ್ಲ, ನಮಗೂ ಪಿಂಪಲ್ಸ್‌ ಬರುತ್ತೆ, ಜಾಸ್ತಿ ತಿಂದ್ರೆ ದಪ್ಪ ಆಗ್ತೀವಿ, ಆದ್ರೆ ನಾನು ನನ್ನ ಸೌಂದರ್ಯ..

Radhika Kumaraswamy talks about her beauty secret and suggested some tips srb
Author
First Published Sep 9, 2024, 2:08 PM IST | Last Updated Sep 9, 2024, 3:08 PM IST

ಪ್ರಶ್ನೆಯೊಂದಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಉತ್ತರಿಸಿದ್ದಾರೆ. 'ನಾನು ಮಂಗಳೂರಿನವಳು. ಬಾಯ್ಡ್‌ ರೈಸ್ ತಿಂತೀನಿ. ಫಿಶ್, ಫಿಶ್ ಕರಿ ಹೀಗೆ ದಿನಾ ತಿನ್ನೋದು ಅದೇ ಇರುತ್ತೆ.. ಏನಾದ್ರೂ ವೃತ, ಪೂಜೆ ಇದ್ದಾಗ ಮಾತ್ರ ನಾವು ವೆಜ್ ತಿಂತೀವಿ, ಮಿಕ್ಕೆಲ್ಲ ದಿನಗಳು ನಾನ್‌ವೆಜ್, ಅಂದ್ರೆ ಫಿಶ್. ಮತ್ತೆ, ಕೊಬ್ಬರಿ ಎಣ್ಣೆ. ಕುಕ್ಕಿಂಗ್‌ಗೆ, ಮಸಾಜ್, ಹೇರ್ ಹಾಗೂ ಇಡೀ ದೇಹಕ್ಕೆ ನಾನು ಯೂಸ್ ಮಾಡೋದು ಕೊಬ್ಬರಿ ಎಣ್ಣೆನೇ.. ನಾನು ಮೇಕಪ್ ರಿಮೂವ್ ಮಾಡೋದು ಕೂಡ ತೆಂಗಿನ ಎಣ್ಣೆ ಉಪಯೋಗಿಸಿಯೇ. 

ನಮ್ ಮನಸ್ಸು ಚೆನ್ನಾಗಿ ಇದ್ರೆ ಮುಖ, ದೇಹ ಕೂಡ ಚೆನ್ನಾಗಿಯೇ ಇರುತ್ತೆ.. ಟೆನ್ಷನ್ ಜಾಸ್ತಿ ತಗೊಳ್ಳಲ್ಲ.. ನಾವೇನೂ ದೇವ್ರಲ್ಲ, ನಮಗೂ ಪಿಂಪಲ್ಸ್‌ ಬರುತ್ತೆ, ಜಾಸ್ತಿ ತಿಂದ್ರೆ ದಪ್ಪ ಆಗ್ತೀವಿ, ಆದ್ರೆ ನಾನು ನನ್ನ ಸೌಂದರ್ಯ ಕಾಪಾಡಿಕೊಳ್ಳೋಕೆ ಸ್ವಲ್ಪ ಟೈಮ್ ಕೊಡ್ತೀನಿ.. ನಾನು ಯೋಗ ಮಾಡೋಕೆ ಶುರು ಮಾಡದೀನಿ. ಯಾವಾಗ್ಲೂ ತಪ್ಪದೇ ಡಾನ್ಸ್ ಮಾಡ್ತೀನಿ.. ಬೇರೆ ವ್ಯಾಯಾಮ ಸ್ವಲ್ಪ ಕಮ್ಮಿನೇ ಮಾಡೋದು. ಆದ್ರೆ, ಯಾವತ್ತೂ ಸುಮ್ನೆ ಕೂತಿರಲ್ಲ. 

ಆರಾಮ್ ಅರವಿಂದ ಸ್ವಾಮಿಯಾದವ್ರು ಯಾರು? ಅನೀಶ್-ಅಭಿಷೇಕ್ ಮಿಂಚೋದು ಗ್ಯಾರಂಟಿ ಅಂತಿದಾರೆ!

ಪ್ರತಿಯೊಬ್ಬರಲ್ಲೂ ಸೌಂದರ್ಯ ಇದ್ದೇ ಇರುತ್ತೆ.. ಆದ್ರೆ, ಅದನ್ನು ಕಾಪಾಡಿಕೊಳ್ಳೋಕೆ ನಾವು ಸ್ವಲ್ಪ ಸಮಯ ಕೊಡ್ಬೇಕು. ತಿನ್ನೋದು, ವ್ಯಾಯಾಮ, ಹೀಗೆ ಕೆಲವೊಂದನ್ನು ಸರಿಯಾಗಿ ಪಾಲಿಸ್ಬೇಕು. ಜೊತೆಗೆ, ಯಾವುದಕ್ಕೂ ಹೆಚ್ಚು ತಲೆ ಕೆಡಿಸ್ಕೋಬಾರದು. ಪ್ರತಿಯೊಬ್ಬರ ಜೀವನದಲ್ಲೂ ಆತಂಕ ಇದ್ದೇ ಇರುತ್ತೆ. ಆದ್ರೆ, ಅದನ್ನು ಎಷ್ಟು ಮನಸ್ಸಿಗೆ, ದೇಹಕ್ಕೆ ತಗೋಬೇಕೋ ಅಷ್ಟೇ ತಗೋಬೇಕು. ಮಿಕ್ಕಿದ್ದನ್ನು ಹಾಗೇ ಬಿಟ್ಬಿಡ್ಬೇಕು. ಕೆಲವೊಂದು ವಿಷ್ಯಕ್ಕೆ ನಾವು ಏನೂ ಮಾಡೋಕೆ ಆಗಲ್ಲ..' 

ಹೀಗೆ ತಮ್ಮ ಸೌಂದರ್ಯದ ಗುಟ್ಟು ಬಿಟ್ಟುಕೊಟ್ಟಿದ್ದಾರೆ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ. ಕರಾವಳಿಯ ಈ ಚೆಲುವೆ 'ನಿನಗಾಗಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಮಾಡಿದ್ದಾರೆ. 'ನೀಲ ಮೇಘ ಶ್ಯಾಮ' ನಟಿಸಿದ ಮೊದಲ ಚಿತ್ರವಾದರೂ, ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದು ನಿನಗಾಗಿ ಸಿನಿಮಾ. ಇದೀಗ ಅಕ್ಟೋಬರ್‌ನಲ್ಲಿ 'ಭೈರಾದೇವಿ' ಸಿನಿಮಾ ಮೂಲಕ ಮತ್ತೆ ಸಿನಿಪ್ರೇಮಿಗಳಿಗೆ ದರ್ಶನ ನೀಡಲಿದ್ದಾರೆ ರಾಧಿಕಾ. 

ರಶ್ಮಿಕಾ-ರಕ್ಷಿತ್ ಮ್ಯಾಟರ್ ಬಗ್ಗೆ ಪ್ರಮೋದ್ ಶೆಟ್ಟಿ ಏನಂದ್ರು? ಅವ್ರು ಯಾರನ್ನ ಫಾಲೋ ಮಾಡ್ತಿದಾರಂತೆ..?

ಒಟ್ಟಿನಲ್ಲಿ, ಎಲ್ಲರ ಕಣ್ಣೂ ಅವರ ಸೌಂದರ್ಯದ ಮೇಲೆ ಎಂಬುದು ಅವರಿಗೆ ಗೊತ್ತಿದೆಯೋ ಇಲ್ಲವೋ! ಆದರೆ, ಅವರನ್ನು ನೋಡಿದವರು ಮೊದಲು ಹೇಳುವುದೇ ನಟಿ ರಾಧಿಕಾರ ಅಪಾರ ಚೆಲುವಿನ ಬಗ್ಗೆಯೇ ಎಂಬುದು ಗುಟ್ಟಾಗಿಯೇನೂ ಉಳಿದಿರುವ ಸಂಗತಿಯಲ್ಲ. ಇದೀಗ ಅವರು ಇಲ್ಲಿ ತಮ್ಮ ಸೌಂದರ್ಯದ ಗುಟ್ಟು ಅನಾವರಣ ಮಾಡಿದ್ದಾರೆ. ನಿಮ್ಮಿಂದ ಸಾಧ್ಯವಾದರೆ, ನೀವೂ ಫಾಲೋ ಮಾಡಿ, ಅವರಂತೆ 'ಅತಿಲೋಕ ಸುಂದರಿ' ಆಗಬಹುದು.  

Latest Videos
Follow Us:
Download App:
  • android
  • ios