Asianet Suvarna News Asianet Suvarna News

ರಶ್ಮಿಕಾ-ರಕ್ಷಿತ್ ಮ್ಯಾಟರ್ ಬಗ್ಗೆ ಪ್ರಮೋದ್ ಶೆಟ್ಟಿ ಏನಂದ್ರು? ಅವ್ರು ಯಾರನ್ನ ಫಾಲೋ ಮಾಡ್ತಿದಾರಂತೆ..?

ಕನ್ನಡ ನಾಡಿಗೆ ವಾಪಸ್ ಬರ್ಲೇಬೇಕು ಅಲ್ವಾ? ಎಂದಿದ್ದಾರೆ ನಟ ಪ್ರಮೋದ್ ಶೆಟ್ಟಿ. ಅಂದಹಾಗೆ, ಸದ್ಯ 'ಲಾಫಿಂಗ್ ಬುದ್ಧ' ಚಿತ್ರದ ಮೂಲಕ ನಟ ಪ್ರಮೋದ್ ಶೆಟ್ಟಿಯವರು ಹೀರೋ ಆಗಿ ಮೊದಲ ಬಾರಿಗೆ ನಟಿಸಿದ್ದಾರೆ. ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. 

Pramod shetty talks on Rakshit Shetty and Rashmika Mandanna Engagement and marriage matter srb
Author
First Published Sep 9, 2024, 9:37 AM IST | Last Updated Sep 9, 2024, 11:41 AM IST

ಸದ್ಯ 'ಲಾಫಿಂಗ್ ಬುದ್ಧ' ಚಿತ್ರದ ಸಕ್ಸಸ್‌ ಎಂಜಾಯ್ ಮಾಡುತ್ತಿರುವ ನಟ ಪ್ರಮೋದ್ ಶೆಟ್ಟಿಯವರು (Pramod Shetty) ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಅದೇನು ಹೇಳಿದಾರೆ ನೋಡಿ..'ಸರ್, ಗಿಡ ಬೆಳೆಸೋ ತನಕ ಮಾತ್ರ ನಮ್ ಕೆಲಸ.. ಬೆಳೆದ್ಮೇಲೆ ಅದು ಅದ್ರ ಕೆಲಸ ಅಲ್ವಾ? ರೆಂಬೆ ಹಿಂಗ್ ಹೋಗ್ಬೇಕಾ ಹಂಗೆ ಹೋಗ್ಬೇಕಾ ಅಂತ ನಾನು ಕಟ್ ಮಾಡಿ ಮುರಿದು ಎಲ್ಲಾ ಹಾಗೇ ಹೀಗೆ ಅಂತೆಲ್ಲಾ ಮಾಡೋಕೆ ಆಗಲ್ಲ.. ಗಿಡ ಬೆಳೆಸೊದು ನಮ್ ಕೆಲಸ, ಬೆಳೆದ್ಮೇಲೆ ಅದು ಹೆಂಗ್ ಬೇಕಾದ್ರೂ ತಿರುಗಿಕೊಳ್ಳುತ್ತೆ.. ಶೀ ಈಸ್ ಬ್ರಲಿಯಂಟ್ ಆಕ್ಟ್ರೆಸ್, ನಾವು ಕಿರಿಕ್ ಪಾರ್ಟಿ ಮಾಡಿದಾಗ್ಲೇ ಅವ್ರ ಫಸ್ಟ್ ಸಿನಿಮಾ ಆದ್ರೂ ಶೀ ಹಾಸ್ ಗಿವನ್ ಹರ್ ದಿ ಬೆಸ್ಟ್ .. 

ಅದಾದ್ಮೇಲೆ ರಕ್ಷಿತ್ ಜೊತೆ ಮದುವೆ ಆಗ್ಬೇಕಾಗಿತ್ತು.. ಎಂಗೇಜ್ಮೆಂಟ್ ಆಗಿತ್ತು, ಕಟ್ ಆಯ್ತು ಅನ್ನೋದು, ಯಾವ್ದೋ ಒಂದು ಹುಡುಗಿ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಅವ್ನು ರಕ್ಷಿತ್ ಇಲ್ಲೀವರೆಗೂ ಅದ್ರ ಬಗ್ಗೆ ಕಾಮೆಂಟ್ ಮಾಡಿಲ್ಲ.. ಅವ್ನ ಎಂಗೇಜ್‌ಮೆಂಟ್ ಬ್ರೇಕ್ ಆಗಿರೋದ್ರ ಬಗ್ಗೆ ಅವ್ನೇ ಕಾಮೆಂಟ್ ಮಾಡಿಲ್ಲ.. ಅವ್ನ ಫ್ರೆಂಡ್ಸ್‌ ಅಗಿ ನಾವೂ ಕೂಡ ಅದನ್ನೇ ಫಾಲೋ ಮಾಡ್ತೀವಿ.. ನಾವೂ ಕೂಡ ಅದನ್ನೇ ಫಾಲೋ ಮಾಡ್ತೀವಿ.. ಸೋ, ಅದ್ರ ಬಗ್ಗೆ ನಾನೇ ಏನೂ ಹೇಳಲ್ಲ.. 

ಪವಿತ್ರಾ ಗೌಡ ಹಳೆಯ ವಿಡಿಯೋ ಯಾಕಿಷ್ಟು ವೈರಲ್ ಆಗ್ತಿದೆ? ಅಂಥದ್ದು ಏನಿದೆ ಅದ್ರಲ್ಲಿ ನೋಡಿ..!

ಇನ್ನು ಅವ್ರು, ಅಂದ್ರೆ ರಶ್ಮಿಕಾ ಮಂದಣ್ಣ ಕೆಲವು ಕಡೆ ಹೇಳೋದು ತಪ್ಪು.. ಅದೇನು ಅಂದ್ರೆ, ನಂಗೆ ಕನ್ನಡ ಗೊತ್ತಿಲ್ಲ, ನಂಗೆ ಕನ್ನಡ ಬರಲ್ಲ, ಅವೆಲ್ಲಾ ತೀರಾ ಒಂಥರ.. ಅದಕ್ಕೆಲ್ಲಾ ನಾವು ಏನ್ ಹೇಳ್ಬಹುದು? ಅದು, ಮಾಡಿದ್ದುಣ್ಣೋ ಮಾರಾಯ ಆಗುತ್ತೆ ಅಷ್ಟೇ... ಅದ್ರ ಬಗ್ಗೆ ನಾನೇನೂ ಹೇಳೋಕಾಗಲ್ಲ.. ಇರೋದೇ ಕರ್ನಾಟಕದಲ್ಲಿ ಅಲ್ವಾ? ಅದೆಷ್ಟೇ ಕನ್ನಡ ಬರಲ್ಲ ಅಂದ್ರೂ ಇರೋದು ಕರ್ನಾಟಕದಲ್ಲೇ ಅಲ್ವಾ? ಅದೇ ಮಡಿಕೇರಿಗೆ ವಾಪಸ್ ಬರ್ಬೇಕು ಅಲ್ವಾ? 

ಹೈದ್ರಾಬಾದ್‌ನಲ್ಲಿ, ಮುಂಬೈನಲ್ಲಿ ಅಥವಾ ಡೆಲ್ಲಿನಲ್ಲಿ ದುಬೈನಲ್ಲೋ ಮನೆ ಮಾಡ್ಬಹುದು ಅಷ್ಟೇ.. ಆದ್ರೆ, ಸ್ವಂತ ಊರು ಅಂತ ಇರೋದು ಇಲ್ಲೇ ಕರ್ನಾಟಕದಲ್ಲಿ ಅಲ್ವಾ? ಮಡಿಕೇರಿಗೆ, ಕನ್ನಡ ನಾಡಿಗೆ ವಾಪಸ್ ಬರ್ಲೇಬೇಕು ಅಲ್ವಾ? ಎಂದಿದ್ದಾರೆ ನಟ ಪ್ರಮೋದ್ ಶೆಟ್ಟಿ. ಅಂದಹಾಗೆ, ಸದ್ಯ 'ಲಾಫಿಂಗ್ ಬುದ್ಧ' ಚಿತ್ರದ ಮೂಲಕ ನಟ ಪ್ರಮೋದ್ ಶೆಟ್ಟಿಯವರು ಹೀರೋ ಆಗಿ ಮೊದಲ ಬಾರಿಗೆ ನಟಿಸಿದ್ದಾರೆ. ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. 

'ಬಿಲ್ಲ ರಂಗ ಭಾಷ'ದಲ್ಲಿ ಸುದೀಪ್ ಪಾತ್ರ ಏಂಥದ್ದು? ನಿರ್ದೇಶಕ ಅನೂಪ್ ಭಂಡಾರಿ ಬಿಚ್ಚಿಟ್ಟ ಸೀಕ್ರೆಟ್ ನೋಡಿ!

ಲಾಫಿಂಗ್ ಬುದ್ದ ಚಿತ್ರವು ನಕ್ಕುನಗಿಸುವ ಕಾಮಿಡಿ ಪಂಚ್ ಡೈಲಾಗ್ ಬೇಸ್ಡ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಜೊತೆ ನಟ ದಿಗಂತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪ್ರಮೋಶನ್ ಹಾಗೂ ರಿಲೀಸ್ ವೇಳೆಯೇ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ನಟ ಪ್ರಮೋದ್ ಶೆಟ್ಟಿ ಅವರಿಗೆ ಪ್ರಶ್ನೆ ಕೇಳಲಾಗಿದ್ದು, ಅವರಿಂದ ಈ ಉತ್ತರ ಬಂದಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆಯಂತೂ ಹೇಳಲೇ ಬೇಕಿಲ್ಲ. ಅವರು ಯಾರು ಏನೆಂದರೂ ಅದನ್ನು ಕೇಳಿಸಿಕೊಳ್ಳಲಾಗದಷ್ಟು ಎತ್ತರಕ್ಕೆ ಬೆಳೆದಿದ್ದಾರೆ. 

 

 

Latest Videos
Follow Us:
Download App:
  • android
  • ios