ಸದ್ದಿಲ್ಲದೇ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮುದ್ದು ಮಗನಿಗೆ ನಾಮಕರಣ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ ವಿಡಿಯೋ ಇದು
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಜೂನಿಯರ್ Yಗೆ ಹೆಸರಿಟ್ಟಿದ್ದಾರೆ. ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿ ಚರ್ಚಿಸುತ್ತಿದ್ದು, ಇದೀಗ ಸ್ಪೆಷಲ್ ನೇಮ್ ರಿವೀಲ್ ಆಗಿದೆ.
ಜೂನಿಯರ್ ರಾಕಿಂಗ್ ಸ್ಟಾರ್‌ಗೆ 'ಯಥರ್ವ್ ಯಶ್` ಎಂದು ನಾಮಕರಣ ಮಾಡಲಾಗಿದೆ. ಈ ಪೋಸ್ಟ್ ಜೊತೆ ಮಗನ ಹೆಸರಿನ ಅರ್ಥವನ್ನೂ ಯಶ್ ತಿಳಿಸಿದ್ದು, ಯಥರ್ವ್ ಎಂದರೆ 'ನಮ್ಮನ್ನು ಪೂರ್ಣಗೊಳಿಸುವಾತ' ಎಂದು ಬರೆದಿದ್ದಾರೆ.
ಹಾಸನದ ತಮ್ಮ ತೋಟದ ಮನೆಯಲ್ಲೇ ಪರಿಸರದ ಮಧ್ಯೆ ನಾಮಕರಣ ಕಾರ್ಯಕ್ರಮ ನಡೆಸಿದ್ದು, ಮನೆ ಮಂದಿ ಮಾತ್ರ ನಾಮಕರಣದಲ್ಲಿ ಭಾಗಿಯಾಗಿದ್ದಾರೆ.
"
ಈ ಹಿಂದಿಯೂ ಬೇಬಿ ಐರಾ ಹೆಸರು ತುಂಬಾನೇ ಕುತೂಹಲ ಹುಟ್ಟಿಸಿತ್ತು. ಬೆಂಗಳೂರಿನ ತಾಜ್ ಹೊಟೇಲ್‌ನಲ್ಲಿ ಐರಾ ನಾಮಕರಣ ನಡೆದಿತ್ತು ಹಾಗೂ ಒಂದು ವರ್ಷದ ಬರ್ತಡೇಯನ್ನು ಫನ್ ವರ್ಲ್ಡ್‌ನಲ್ಲಿ ಅದ್ಧೂರಿಯಾಗಿ ಆಚರಿಸಲಾಗಿತ್ತು. ರವಿ ಬಸ್ರೂರ್ ಸಂಯೋಜಿಸಿದ್ದ ಹಾಡಿನೊಂದಿಗೆ ವಿಡಿಯೋ ಶೇರ್ ಮಾಡಲಾಗಿತ್ತು.

ಇನ್ನು ಜೂನಿಯರ್‌ಗೆ ಏನೆಲ್ಲಾ ವಿಶೇಷತೆ ಇರುತ್ತದೆ ಎಂದು ಕುತೂಹಲವಿತ್ತು. ಇಂದು ಜೂನಿಯರ್ ವಿಡಿಯೋ ನೋಡಿ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
