ವರ ಜತೆಗೆ ತೆಲುಗಿನ ಪೂರ್ಣ ಚಿತ್ರದ ಮತ್ತೊಬ್ಬ ನಾಯಕಿ ಎನ್ನಲಾಗಿತ್ತು. ಆದರೆ, ಈಗ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರ ಪಾತ್ರದ ಗುಟ್ಟು ಬಯಲಾಗಿದೆ. ಅವರು 100 ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರಿಗೆ ತಂಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್

ಕನ್ನಡ ಚಿತ್ರಗಳಲ್ಲಿ ಅಣ್ಣ-ತಂಗಿ ಪಾತ್ರಗಳು ಸೂಪರ್‌ ಹಿಟ್‌ ಆಗಿವೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ನಟ ಶಿವರಾಜ್‌ ಕುಮಾರ್‌ ಹಾಗೂ ರಾಧಿಕಾ ಅವರು. ಅವರ ಅಣ್ಣ ತಂಗಿ ಕಾಂಬಿನೇಷನ್‌ ಎವರ್‌ ಗ್ರೀನ್‌. ಹಾಗೆ ನನಗೆ ಅಣ್ಣ ತಂಗೀ ಪಾತ್ರಗಳನ್ನು ತೆರೆ ಮೇಲೆ ಇದುವರೆಗೂ ಆಪ್ತವಾಗಿ ತೋರಿಸುವುಕ್ಕೆ ಆಗಿರಲಿಲ್ಲ. ಆ ಒಂದು ಕೊರತೆಯನ್ನು 100 ಸಿನಿಮಾ ನೀಗಿಸಿದೆ ಎನ್ನಬಹುದು. ಈ ಚಿತ್ರದಲ್ಲಿ ನಾನು ಅಣ್ಣ, ರಚಿತಾ ರಾಮ್‌ ಅವರು ತಂಗಿ ಆಗಿರುತ್ತಾರೆ. ಅಣ್ಣನಾಗಿ ಅವರ ಸಂಕಷ್ಟಕ್ಕೆ ಹೇಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಮತ್ತು ರಚಿತಾ ರಾಮ್‌ ಪಾತ್ರ ಯಾವ ಕಷ್ಟಕ್ಕೆ ಸಿಲುಕುತ್ತದೆ ಎಂಬುದು ಚಿತ್ರದ ಮತ್ತೊಂದು ತಿರುವು. ಅಣ್ಣ- ತಂಗಿ ಪಾತ್ರದಲ್ಲಿ ನಮ್ಮನ್ನು ನೋಡುವ ಪ್ರೇಕ್ಷಕರಿಗೆ ಒಂದು ಥ್ರಿಲ್‌ ಅಂತೂ ಸಿಗುತ್ತದೆ. ತುಂಬಾ ತರಲೆ ಮಾಡುವ, ಸದಾ ಮೊಬೈಲ್‌ ಬಳಸುವ ಮತ್ತು ತುಂಬಾ ಆಕ್ಟಿವ್‌ ಆಗಿರುವ ತಂಗಿ ಪಾತ್ರ ರಚಿತಾ ರಾಮ್‌ ಅವರದ್ದು. ಅವರ ಈ ಜೀವನ ಶೈಲಿಯೇ ಹೇಗೆ ಕಷ್ಟಕ್ಕೆ ದೂಡುತ್ತದೆ ಎಂಬುದನ್ನು ನೀವು ಸಿನಿಮಾದಲ್ಲಿ ನೋಡಬಹುದು. ಇದು ರಮೇಶ್‌ ಅರವಿಂದ್‌ ಅವರು ಹೇಳುವ ವಿವರಣೆಗಳು.

ರಮೇಶ್ ಹೇಳುವ ಸೋಷಲ್ ಕ್ರೈಮ್ ಕಥೆ: ನೂರು ಮಾತು,100 ದಿನ ಭರವಸೆ!

ಈ ಹಿಂದೆ ಪುಷ್ಪಕ ವಿಮಾನ ಚಿತ್ರದಲ್ಲಿ ರಚಿತಾ ರಾಮ್‌ ಅವರು ರಮೇಶ್‌ ಅರವಿಂದ್‌ ಅವರಿಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ನೆನಪಿದೆ. ಈಗ ತಂಗಿಯಾಗಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಾಣದ ಈ ಚಿತ್ರಕ್ಕೆ ಶೂಟಿಂಗ್‌ ಮುಗಿದಿದೆ.