ಮಕ್ಕಳ ಆಟಗಳು, ಪೋಷಕ ಕಲಾವಿದರ ಓಡಾಟಗಳದ್ದೇ ಅಲ್ಲಿ ಹವಾ. ಇದೆಲ್ಲವನ್ನೂ ಛಾಯಾಗ್ರಹಕ ಸತ್ಯ ಹೆಗಡೆ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುತ್ತಿದ್ದರು. ನಿರ್ಮಾಪಕ ರಮೇಶ್ ರೆಡ್ಡಿ ನಂಗ್ಲಿ ಅವರು ಎಲ್ಲ ಕೆಲಸಗಳು ಸರಾಗವಾಗಿ ನಡೆಯುತ್ತಿವೆಯೇ ಎನ್ನುವಂತೆ ಅವರು ಅತ್ತಿತ್ತ ಓಡಾಡುತ್ತಿದ್ದರು.

ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್‌ ಟೀಸರ್‌ ಸೂಪರ್‌ಹಿಟ್‌

ಹೀಗೆ ‘100’ ಚಿತ್ರದ ಶೂಟಿಂಗ್‌ಸೆಟ್ ಫುಲ್ ಕ್ರೌಡೆಡ್ ಆಗಿತ್ತು. ಚಿತ್ರೀಕರಣದ ನಡುವೆಯೇ ಚಿತ್ರತಂಡ ಮಾತಿಗೆ ಹಾಜರಾಯಿತು. ಮೊದಲಿಗೆ ರಮೇಶ್ ಅರವಿಂದ್ ಅವರ ಮಾತು. ‘ಬೆಂಕಿ, ಅಧಿಕಾರ, ಚಾಕು ಮತ್ತು ಸೋಷಿಯಲ್ ಮೀಡಿಯಾ ಯಾರ ಕೈಯಲ್ಲಿರಬೇಕು, ಹೇಗೆ ಬಳಸಬೇಕು, ಅದರಲ್ಲೂ ಸೋಷಿಯಲ್ ಮಾಧ್ಯಮವನ್ನು ದುರುಪಯೋಗ ಮಾಡಿಕೊಂಡರೆ ಏನಾಗುತ್ತದೆ, ಹಾಗೆ ಮಿಸ್ ಯೂಸ್ ಮಾಡಿಕೊಳ್ಳುವವನನ್ನು ಸಂಹಾರ ಮಾಡುವುದಕ್ಕೆ ಹೊರಟರೆ ಒಂದು ಕತೆ ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳಬಹುದು ಎಂಬುದೇ ಈ ಚಿತ್ರದ ಕತೆ’ ಎನ್ನುತ್ತಾ ತಮ್ಮ ಇಡೀ ಚಿತ್ರತಂಡವನ್ನು ಪರಿಚಯಿಸಿದರು.

ಶಿವಾಜಿ ಸುರತ್ಕಲ್‌ ಪೂರ್ತಿ ಡಿಫರೆಂಟು: ರಮೇಶ್‌

ರಮೇಶ್ ಅರವಿಂದ್ ಅವರ ಪರಿಚಯಿಸಿದಂತೆ ರಚಿತಾ ರಾಮ್ ಲವಲವಿಕೆಯ ನಟಿ. ತೆಲುಗಿನ ಪೂರ್ಣ ಪರ್ಫೆಕ್ಟ್ ತಾರೆ. ರವಿ ಬಸ್ರೂರು ಅವರು ಅಮೇಜಿಂಗ್ ಟ್ಯಾಲೆಂಟ್ ಇರೋ ಸಂಗೀತ ನಿರ್ದೇಶಕ, ರಮೇಶ್ ರೆಡ್ಡಿ ಅವರು ಪ್ಯಾಷನೇಟ್ ನಿರ್ಮಾಪಕ. ಗೌರವ್, ಶಿಲ್ಪಾ ಶೆಟ್ಟಿ, ಮಾಲತಿ ಸುಧೀರ್, ವಿಶ್ವ ಉಳಿದ ಮುಖ್ಯ ಪಾತ್ರಧಾರಿಗಳು. ಜಂಬೆ ಅಸೋಸಿಯೇಟ್, ಮೋಹನ್ ಕಲಾ ನಿರ್ದೇಶನ. ಇವಿಷ್ಟು ವಿವರಣೆಗಳ ಜತೆಯಲ್ಲಿ ಉಳಿದವರು ಮಾತಿಗೆ ನಿಂತರು. ‘ಒಳ್ಳೆಯ ಸಿನಿಮಾ. ಒಳ್ಳೆಯ ಪಾತ್ರ. ರಮೇಶ್ ಅವರು ಸಿನಿಮಾಗಳಲ್ಲಿ ಕೆಲಸ ಮಾಡಬೇಕು ಎನ್ನುವ ಕನಸು ಈ ಚಿತ್ರದ ಮೂಲಕ ಈಡೇರಿದೆ. ಅವರ ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದವರು ನಾವು. ಈಗ ಅವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ತುಂಬಾ ಪಾಸಿಟಿವ್ ಚಿಂತನೆಯ ನಿರ್ದೇಶಕರು. ನಿರ್ಮಾಪಕರು ಬಗ್ಗೆ ಹೇಳುವ ಅಗತ್ಯವೇ ಇಲ್ಲ.

ಸಿನಿಮಾ ಒಪ್ಪಿಕೊಳ್ಳುತ್ತಿರುವುದು ಸಂಖ್ಯೆಗೋಸ್ಕರ ಅಲ್ಲ: ರಚಿತಾ

ಇಂಥ ನಿರ್ಮಾಪಕರು ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಗೆಲ್ಲಬೇಕು’ ಎಂದರು ರಚಿತಾ ರಾಮ್. ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಇದು ಮೂರನೇ ಸಿನಿಮಾ. ಈ ಹಿಂದೆ ‘ಉಪ್ಪು ಹುಳಿ ಖಾರ’ ಹಾಗೂ ‘ಪಡ್ಡೆಹುಲಿ’ ಈಗ ಸೂರಜ್ ಬ್ಯಾನರ್‌ನಲ್ಲಿ ‘100’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶೂಟಿಂಗ್ ಮುಕ್ತಾಯವಾಗುತ್ತಿದೆ. ನನ್ನ ನಿರೀಕ್ಷೆಯಂತೆ ಸಿನಿಮಾ ಬಂದಿದೆ. ಇದೇ ಚಿತ್ರವನ್ನು ಹಿಂದಿನಲ್ಲೂ ನಾನೇ ನಿರ್ಮಾಣ ಮಾಡುತ್ತಿದ್ದೇನೆ. ಅದ್ಭುತ ತಂಡದ ಅದ್ಭುತ ಸಿನಿಮಾ ಮಾಡುತ್ತಿರುವ ಖುಷಿ ನನ್ನದು’ ಎಂದು ರಮೇಶ್ ರೆಡ್ಡಿ ಹೇಳಿಕೊಂಡರು.

ಡಿಂಪಲ್ ಕ್ವೀನ್ ಸಿಂಪಲ್ ಲೈಫ್; ಮೈಸೂರಲ್ಲಿ ದೋಸೆ ಔತಣ!

ನೃತ್ಯ ನಿರ್ದೇಶಕ ಧನು ಅವರು ರಮೇಶ್ ರೆಡ್ಡಿ ನಂಗ್ಲಿ ಅವರು ತಮ್ಮ ಗಾಡ್‌ಫಾದರ್ ಎಂದು ಹೇಳಿಕೊಂಡರು. ಇವರು ನೃತ್ಯ ನಿರ್ದೇಶಕರಾಗಿದ್ದೇ ಇವರ ನಿರ್ಮಾಣದ ಚಿತ್ರದಿಂದ. ಚಿತ್ರಕ್ಕೆ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕನೂ ಪ್ರತಿ ದಿನ ಖುಷಿಯಿಂದ ಮನೆಗೆ ಹೋಗುತ್ತಾನೆ ಎಂದರೆ ಅದಕ್ಕೆ ಕಾರಣ ರಮೇಶ್ ರೆಡ್ಡಿ ನಂಗ್ಲಿ ಅವರಲ್ಲಿರುವ ಒಳ್ಳೆಯತನ ಎಂದು ಇಡೀ ಚಿತ್ರತಂಡ ಹೇಳಿಕೊಂಡಿತು. ಚಿತ್ರದ ಹೆಸರು ‘100’. ಸಿನಿಮಾ ಕೂಡ ಶತ ದಿನೋತ್ಸವ ಕಾಣಲಿ ಎನ್ನುವುದರೊಂದಿಗೆ ಎಲ್ಲರು ಮಾತು ಮುಗಿಸಿದರು.