ರಚಿತಾ ರಾಮ್‌ಗೆ 'ಲೇಡಿ ಸೂಪರ್ ಸ್ಟಾರ್' ಎಂದ ನಟ; ಈ ಬಿರುದು ಬೇಡ ನಾನು ಬುಲ್ ಬುಲ್ ಆಗೇ ಇರ್ತೀನಿ ಎಂದ ನಟಿ!
ರಚಿತಾ ರಾಮ್ ಇನ್ನು ಮುಂದೆ ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್. ಅಲ್ಲಿ ನಯನತಾರಾ ಇಲ್ಲಿ ನಮ್ಮ ಡಿಂಪಲ್ ಕ್ವೀನ್ ಎಂದ ನೆಟ್ಟಿಗರು....
ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸತತ 10 ವರ್ಷಗಳಿಂದ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಚಿತಾ ರಾಮ್‌ಗೆ ಲೇಡಿ ಸೂಪರ್ ಸ್ಟಾರ್ ಎನ್ನುವ ಟೈಟಲ್‌ನ ಅಯೋಗ್ಯ-2 ಚಿತ್ರತಂಡ ನೀಡಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನಡೆದಿದೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್‌ನಿಂದ ಚಿತ್ರದ ಮೊದಲ ಕ್ಲಾಪ್ ಹೊಡೆಯಲಾಗಿದೆ. ಪೂಜೆ ನಡೆದ ನಂತರ ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದ ಚಿತ್ರತಂಡ ಸಿನಿಮಾ ಬಗ್ಗೆ ಹಂಚಿಕೊಂಡಿದ್ದಾರೆ. ಈ ವೇಳೆ ನಟ ನೀನಾಸಂ ಸತೀಶ್ ರಚಿತಾ ಹೊಸ ಟೈಟಲ್ ಅನೌನ್ಸ್ ಮಾಡಿದ್ದಾರೆ.
ಲೇಡಿ ಸೂಪರ್ ಸ್ಟಾರ್:
'ರಚಿತಾ ರಾಮ್ ಮತ್ತು ನನ್ನ ನಡುವೆ ಬಹಳ ಖುಷಿಯಿಂದ ಜಗಳ ಆಗುತ್ತದೆ. ಇಬ್ಬರು ಬಹಳ ಪ್ರೀತಿಯಿಂದ ಕೆಲಸ ಮಾಡುತ್ತೀವಿ. ಇದು ನಮ್ಮಿಬ್ಬರ ಮೂರನೇ ಸಿನಿಮಾ ಅಂದ್ರೆ ಯೋಚನೆ ಮಾಡಿ ಜನರು ಈ ಪೇರ್‌ನ ಎಷ್ಟು ಇಷ್ಟ ಪಟ್ಟಿದ್ದಾರೆ ಅಂತ. ಅವತ್ತಿನಿಂದ ಇವತ್ತಿನವರೆಗೂ ರಚಿತಾ ರಾಮ್ ಅದನ್ನು ಕಾಪಾಡಿಕೊಂಡು ಬಂದಿದ್ದಾರೆ. ಲೇಡಿ ಸೂಪರ್ ಸ್ಟಾರ್ ಅಂತ ಹೆಸರಿಟ್ಟಾಗ ನಾನು ನಿರ್ದೇಶಕ ಮಹೇಶ್‌ಗೆ ಒಂದು ಮಾತು ಹೇಳಿದೆ...ಖಂಡಿತವಾಗಿಯೂ ಲೇಡಿ ಸೂಪರ್ ಸ್ಟಾರ್ ಅಂತ ಇಡಿ ಯಾಕೆ ಗಂಡು ಮಕ್ಕಳಿಗೆ ಆ ಸೂಪರ್ ಸ್ಟಾರ್ ಈ ಸೂಪರ್ ಸ್ಟಾರ್ ಅಂತ ಇಡುತ್ತೀವಿ ಹೆಣ್ಣುಮಕ್ಕಳಿಗೂ ಕೊಡಲಿ ಬಿಡಿ ಎಂದೆ. ರಚಿತಾ ರಾಮ್ ಅವರ 10 ವರ್ಷದ ಜರ್ನಿಗೆ ಈ ಹೆಸರು ಅವರಿಗೆ ಸೇರಬೇಕು ನಮ್ಮ ಚಿತ್ರದ ಮೂಲಕ ಅವರಗೆ ಮುಂದುವರೆಯಲಿ' ಎಂದು ನೀನಾಸಂ ಸತೀಶ್ ಮಾತನಾಡಿದ್ದಾರೆ.
'ನಮ್ಮ ಸೀನಿಯರ್ ಆಗಿ ನಿಮಗೆ ಥ್ಯಾಂಕ್ಸ್. ಲೇಡಿ ಸೂಪರ್ ಸ್ಟಾರ್ ಟೈಟಲ್‌ನ ಭಾರ ಸಖತ್ ಇದೆ. ನಿಜ ಹೇಳುತ್ತೀನಿ...ಲೇಡಿ ಸೂಪರ್ ಸ್ಟಾರ್, ಸೂಪರ್ ಸ್ಟಾರ್ ಅಥವಾ ಸ್ಟಾರ್ ಏನೋ ಗೊತ್ತಿಲ್ಲ. ನನ್ನ ಅಭಿಮಾನಿಗಳಿಗೆ ನಾನು ಸದಾ ಬುಲ್ ಬುಲ್ ಆಗಿರುತ್ತೀನಿ ..ನನಗೆ ಬುಲ್ ಬುಲ್ ಎಂದೇ ಕೊಡಿ' ಎಂದು ಎದ್ದು ನಿಂತು ಗೌರವದಿಂದ ರಚಿತಾ ರಾಮ್ ಹೇಳಿದ್ದಾರೆ.
ಗೆಳೆಯ ಗೆಳೆಯ ಎನ್ನುತ್ತಿದ್ದ ಮಂಜುಗೆ 'ಇದೆಲ್ಲ ನನ್ನ ಹತ್ರ ಇಟ್ಕೋಬೇಡ' ಎಂದು ಖಡಕ್ ವಾರ್ನಿಂಗ್ ಕೊಟ್ಟ ಗೌತಮಿ!