ನಟ ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರವು 12 ಡಿಸೆಂಬರ್ 2025ರಂದು ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದೆ. ನಟ ದರ್ಶನ್ ಅವರು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೀಗ ‘ಡೆವಿಲ್ ಚೇರ್’ ವೈರಲ್ ಅಗುತ್ತಿದೆ.

ಡೆವಿಲ್ ಚೇರ್

'ಕನ್ನಡ ಕಲಾಭಿಮಾನಿಗಳೇ " ದಿ ಡೆವಿಲ್ " ಖುರ್ಚಿ (The Devil Chair) ನಿಮಗಾಗಿ ಒರಾಯನ್ ಮಾಲ್ Lake ಸೈಡಲ್ಲಿ ಇರಿಸಲಾಗಿದೆ. ಹೋಗಿ ಮಜ ಮಾಡಿ..' ಅನ್ನೋ ಮೆಸೇಜ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾದ ನಿರ್ಮಾಪಕರು ಪ್ರಕಾಶ್ ಮತ್ತು ಜಯಮ್ಮ. ಈ ಸಿನಿಮಾವನ್ನು ಶ್ರೀ ಜೈಮಾತಾ ಕಂಬೈನ್ಸ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿದೆ. ಇದೀಗ ಈ ಸಿನಿಮಾದ ಪ್ರಚಾರವನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತಿದ್ದು, ದರ್ಶನ್ ಅವರು ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಕುಳಿತಿದ್ದ ಚೇರ್‌ ಈಗ ಅದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಹೌದು, ನಟ ದರ್ಶನ್ (Darshan Thoogudeepa) ಅವರ ಗೈರುಹಾಜರಿಯಲ್ಲಿ ದಿ ಡೆವಿಲ್ ಸಿನಿಮಾದ ಪ್ರಮೋಶನ್ ಮಾಡಬೇಕಾದ ಅನಿವಾರ್ಯತೆ ಆ ಚಿತ್ರತಂಡಕ್ಕೆ ಎದುರಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಚಿತ್ರದ ಪ್ರಚಾರಕಾರ್ಯದ ಜವಾಬ್ದಾರ್ಇ ವಹಿಸಿಕೊಂಡಿದ್ದು, ಇದೀಗ ಅವರು ಅಭಿಮಾನಿಗಳನ್ನೇ ಈ ಪ್ರಚಾರಕಾರ್ಯಕ್ಕೆ ನೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ದರ್ಶನ್ ಅಭಿಮಾನಿಗಳ ಜೊತೆ ವಿಜಯಲಕ್ಮೀ ಸೇರಿದಂತೆ, ದಿನಕರ್ ತೂಗುದೀಪ, ದರ್ಶನ್ ಅಕ್ಕನ ಮಗ ಹಾಗೂ ಚಿತ್ರದ ನಿರ್ದೇಶಕರಾದ ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ಮೀಟಿಂಗ್ ಮಾಡಿದ್ದಾರೆ. ಈ ಚಿತ್ರದ ಪ್ರಚಾರವನ್ನು ಮಾಧ್ಯಮವನ್ನು ಬದಿಗಿಟ್ಟು ಫ್ಯಾನ್ಸ್ ಮೂಲಕವೇ ಮಾಡಿಸಲಾಗುತ್ತಿದೆ.

ಇದೀಗ, ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವ ದಿ ಡೆವಿಲ್ ಚಿತ್ರತಂಡವು 'ಡೆವಿಲ್ ಚೇರ್'ಅನ್ನು ಒರಾಯನ್ ಮಾಲ್‌ನಲ್ಲಿ ಇಟ್ಟು, ಅದನ್ನು ಫ್ಯಾನ್ಸ್ ಆಕರ್ಷಿಸಲು ಬಳಸಿಕೊಳ್ಳುತ್ತಿದೆ. ಈ ಮೊದಲು 2011ರಲ್ಲಿ ಕೂಡ ದರ್ಶನ್ ನಟನೆಯ 'ಸಾರಥಿ' ಚಿತ್ರದಲ್ಲಿ ಇದೇ ತಂತ್ರ ಅಳವಿಡಿಸಿಕೊಳ್ಳಲಾಗಿತ್ತು. ಆಗಲೂ ನಟ ದರ್ಶನ್ ಅವರು ಜೈಲು ಸೇರಿದ್ದರು. ಸಾರಥಿ ಚಿತ್ರದ ಪ್ರಮೋಶನ್‌ಗೆ ಆಗ 'ಚಾಮುಂಡೇಶ್ವರಿ' ವಿಗ್ರಹವನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಈಗ 'ಡೆವಿಲ್ ಚೇರ್' ಬಳಕೆ ಆಗಲಿದೆ.

ಒರಾಯನ್ ಮಾಲ್‌ನಲ್ಲಿ ಡೆವಿಲ್ ಚೇರ್

ಇನ್ನು ಈ ಬಗ್ಗೆ ಡೆವಿಲ್ (The Devil) ಚಿತ್ರದ ನಾಯಕಿ ರಚನಾ ರೈ ಅವರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ವಿಡಿಯೋ ಹರಿಬಿಟ್ಟು, ದರ್ಶನ್ ಅಭಿಮಾನಿಗಳನ್ನು ಹಾಗೂ ಕನ್ನಡ ಸಿನಿಮಾ ಪ್ರೇಕ್ಷಕರನ್ನು ತಲುಪುವ ಪ್ರಯತ್ನ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಚನಾ ರೈ 'ಹಾಯ್ .. ನಾನು ನಿಮ್ಮ ರಚನಾ ರೈ ಮಾತಾಡ್ತಿರೋದು.. ನಮ್ಮ ದರ್ಶನ್ ಸರ್ ಅವರು 'ಡೆವಿಲ್ ಸಿನಿಮಾದಲ್ಲಿ ಯೂಸ್ ಮಾಡಿರುವಂಥ ನಿಮಗೋಸ್ಕರ ಒರಾಯನ್ ಮಾಲ್‌ನಲ್ಲಿ ವೇಟ್ ಮಾಡ್ತಾ ಇದೆ, ನೀವು ಹೋಗಿ ಅದ್ರ ಜೊತೆ ಸೆಲ್ಫೀ ತಗೊಳ್ಳಿ, ಮಸ್ತ್ ಮಜಾ ಮಾಡಿ..' ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.

'ದಿ ಡೆವಿಲ್' ಚಿತ್ರವು 12 ಡಿಸೆಂಬರ್ 2025ರಂದು ಕರ್ನಾಟಕದಾದ್ಯಂತ ಬಿಡುಗಡೆ

ಅಂದಹಾಗೆ, ನಟ ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರವು 12 ಡಿಸೆಂಬರ್ 2025ರಂದು ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದೆ. ನಟ ದರ್ಶನ್ ಅವರು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ದರ್ಶನ್ ನಟನೆಯ ದಿ ಡೆವಿಲ್ ಚಿತ್ರದ ಯಶಸ್ಸು ಹಾಗೂ ದರ್ಶನ್ ಅವರು ಜೈಲಿಂದ ಬಿಡುಗಡೆಯಾಗುವ ಕಾಲಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅದಕ್ಕೆ ಕಾಲವೇ ಉತ್ತರ ಕೊಡಬೇಕು!

View post on Instagram