ಡಿ‌.12 ಕ್ಕೆ ಸಿದ್ದೇಶ್ವರ ಚಿತ್ರಮಂದಿರದಲ್ಲಿ ದರ್ಶನ್ ಫ್ಯಾನ್ಸ್ ಗಳಿಗೆ ಪಂಕ್ತಿ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಮೂರುದಿನಗಳ ಕಾಲ ಡೆವಿಲ್ ಜಾತ್ರೆಗೆ ದರ್ಶನ್ ಫ್ಯಾನ್ಸ್ ಗಳು ಮುಂದಾಗಿದ್ದಾರೆ. ಈ ಸಿನಿಮಾ ಬಗ್ಗೆ ಸಹಜವಾಗಿಯೇ ಸಿಕ್ಕಾಪಟ್ಟೆ ಕ್ರೇಜ್ ಹಾಗೂ ನಿರೀಕ್ಷೆ ಸೃಷ್ಟಿಯಾಗಿದೆ. ಈ ಸ್ಟೋರಿ ನೋಡಿ..

ಚಾಮುಂಡೇಶ್ವರಿ ಉತ್ಸವಕ್ಕೆ ಸಜ್ಜಾದ ದರ್ಶನ್ ಫ್ಯಾನ್ಸ್‌!

ನಟ ದರ್ಶನ್ ತೂಗುದೀಪ (Darshan Thoogudeepa) ಅಭಿನಯದ 'ದಿ ಡೆವಿಲ್' ಗೆಲುವಿಗೆ ನಾಡದೇವತೆ ಮೊರೆಹೋಗಿದ್ದಾರೆ ದರ್ಶನ್ ಫ್ಯಾನ್ಸ್. ಡಿ.11ಕ್ಕೆ ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ನಟ ದರ್ಶನ್ ಅವರು ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ತಮ್ಮದೇ ಅಭಿನಯದ ಚಿತ್ರದ ಪ್ರಚಾರಕ್ಕೆ ದರ್ಶನ್ ಅವರಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ, ಡೆವಿಲ್ ಸಿನಿಮಾ ಪ್ರಚಾರದ ಜವಾಬ್ದಾರಿಯನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ವಹಿಸಿಕೊಂಡಿದ್ದಾರೆ.

ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಿರ್ದೇಶನ, ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾದ ಪ್ರಚಾರಕಾರ್ಯವನ್ನು ನಟ ದರ್ಶನ್ ಅಭಿಮಾನಿಗಳೇ ವಹಿಸಿಕೊಂಡಿದ್ದಾರೆ. ಮಾಧ್ಯಮದವರನ್ನು ದೂರವಿಟ್ಟು, ಅಭಿಮಾನಿಗಳ ಪ್ರಚಾರವನ್ನೆ ನಂಬಿಕೊಂಡಿದೆ ಡೆವಿಲ್ ಸಿನಿಮಾ. ಈ ಮೊದಲು ಕ್ರಾಂತಿ ಸಿನಿಮಾಗೆ ಕೂಡ ಇದೇರೀತಿಯಲ್ಲಿ ಮಾಧ್ಯಮದವರನ್ನು ದೂರವಿಟ್ಟು ಪ್ರಮೋಶನ್ ಮಾಡಲಾಗಿತ್ತು. ಆದರೆ ಆಗ ಸ್ವತಃ ನಟ ದರ್ಶನ್ ಕೂಡ ಪ್ರಚಾರಕಾರ್ಯದಲ್ಲಿ ಭಾಗಿಯಾಗಿದ್ರು. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ.

ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ, ದರ್ಶನ್ ಸಹೋದರ ದಿನಕರ್ ತೂಗುದೀಪ, ಡೆವಿಲ್ ನಿರ್ದೇಶಕ ಪ್ರಕಾಶ್ ವೀರ್, ದರ್ಶನ್ ಅಕ್ಕನ ಮಗ ಸೇರಿದಂತೆ ಆಪ್ತಬಳಗ ಮೀಟಿಂಗ್ ಮಾಡಿ ಚರ್ಚಿಸಿ, ಅಭಿಮಾನಿಗಳ ಮೂಲಕ ಪ್ರಚಾರಕಾರ್ಯಕ್ಕೆ ಚಾಲನೆ ನೀಡಿದೆ. ಮುಂದಿನ ತಿಂಗಳು 11ಕ್ಕೆ ಅಂದರೆ 11 ಡಿಸೆಂಬರ್ 2025ರಂದು ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾ ತೆರೆಕಾಣಲಿದೆ. ಇದೀಗ, ದರ್ಶನ್ ಫ್ಯಾನ್ಸ್ ಬಳಗವು ಸಿನಿಮಾ ಪ್ರಚಾರಕ್ಕೆ ಪೂರಕವಾಗಿ ಚಾಮುಂಡೇಶ್ವರಿ ಉತ್ಸವಕ್ಕೆ ಸಜ್ಜಾಗುತ್ತಿದ್ದಾರೆ.

ಡೆವಿಲ್ ರಿಲೀಸ್ ಗೂ ಮೊದಲು ಏನೆಲ್ಲಾ ಇದೆ?

ಹೌದು, ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪನೆಗೆ ಪ್ಲಾನ್ ಮಾಡಲಾಗಿದೆ. ಡಿ.10 ರಂದು ಸಿದ್ದೇಶ್ವರ ಚಿತ್ರಮಂದಿರದಲ್ಲಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. ಡಿ.11 ಕ್ಕೆ ಐದು ಶೋಗಳಲ್ಲಿ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆ ಕೂಡ ಮಾಡಲಾಗುವುದು.

ಸಿಕ್ಕಾಪಟ್ಟೆ ಕ್ರೇಜ್ ಹಾಗೂ ನಿರೀಕ್ಷೆ!

ಡಿ‌.12 ಕ್ಕೆ ಸಿದ್ದೇಶ್ವರ ಚಿತ್ರಮಂದಿರದಲ್ಲಿ ದರ್ಶನ್ ಫ್ಯಾನ್ಸ್ ಗಳಿಗೆ ಪಂಕ್ತಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮೂರುದಿನಗಳ ಕಾಲ ಡೆವಿಲ್ ಜಾತ್ರೆಗೆ ದರ್ಶನ್ ಫ್ಯಾನ್ಸ್ ಗಳು ಮುಂದಾಗಿದ್ದಾರೆ. ಈ ಸಿನಿಮಾ ಬಗ್ಗೆ ಸಹಜವಾಗಿಯೇ ಸಿಕ್ಕಾಪಟ್ಟೆ ಕ್ರೇಜ್ ಹಾಗೂ ನಿರೀಕ್ಷೆ ಸೃಷ್ಟಿಯಾಗಿದೆ. ಈ ಸಿನಿಮಾ ಪ್ರಚಾರದಲ್ಲಿ, ಬಿಡುಗಡೆಯಲ್ಲಿ ಕಂಡುಬರುತ್ತಿರುವ ಏಕೈಕ ಕೊರತೆ ಎಂದರೆ ಅದು ನಟ ದರ್ಶನ್ ಅವರ ಗೈರು ಹಾಜರಿ. ಸಿನಿಮಾ ರಿಲೀಸ್‌ಗೆ ಇನ್ನೂ ಸಾಕಷ್ಟು ಸಮಯವಿದೆ. ಅಷ್ಟರಲ್ಲಿ ಸಾಕಷ್ಟು ಬದಲಾವಣೆಗಳು ಆಗಬಹುದು. ಇದು ಸದ್ಯದ ಸಮಾಚಾರ.