Asianet Suvarna News Asianet Suvarna News

What's Up Dude?: ರಾಯನ್ ರಾಜ್‌ ಸರ್ಜಾ ಹೊಸ ವಿಡಿಯೋ ವೈರಲ್!

11 ತಿಂಗಳು ಪೂರೈಸಿದ ಸರ್ಜಾ ಕುಡಿ. ಬರ್ತಡೇ ಸ್ಪೆಷಲ್ ವಿಡಿಯೋ ಹಂಚಿಕೊಂಡ ಮೇಘನಾ.

Raayan Raj Sarja completes 11 months Meghana Raj shares special video vcs
Author
Bangalore, First Published Sep 24, 2021, 2:43 PM IST
  • Facebook
  • Twitter
  • Whatsapp

ಚಿರಂಜೀವಿ ಸರ್ಜಾ (Chiranjeevi Sarja) ಮತ್ತು ಮೇಘನಾ ರಾಜ್‌ ಮುದ್ದಿನ ಮಗ ರಾಯನ್ ರಾಜ್ ಸರ್ಜಾ ಸೆಪ್ಟೆಂಬರ್ 22ಕ್ಕೆ 11 ತಿಂಗಳು ಪೂರೈಸಿದ್ದಾನೆ.  ರಾಯನ್‌ ಪುಟ್ಟ ವಯಸ್ಸಿಗೆ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಕಿಡ್ (celebrity kid) ಆಗಿ ಗುರುತಿಸಿಕೊಂಡಿದ್ದಾನೆ. ರಾಯನ್ ಹೆಸರಿನಲ್ಲಿ ಈಗಾಗಲೆ ಸಾಕಷ್ಟು ಫ್ಯಾನ್ ಪೇಜ್‌ (Fan Page)ಗಳಿದ್ದು ಪ್ರತಿ ತಿಂಗಳು ಹುಟ್ಟಿದ ದಿನಾಂಕಕ್ಕೆ ಸ್ಪೆಷಲ್ ಆಗಿ ಶುಭಾಶಯಗಳನ್ನು ತಿಳಿಸುತ್ತಾರೆ. ರಾಯನ್‌ಗೆ ಇಷ್ಟೊಂದು ಪ್ರೀತಿ ತೋರಿಸುವ ಜನರಿಗಾಗಿ ಮೇಘನಾ (Meghana Raj) ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. 

ಮೇಘನಾ ರಾಜ್ ಪುತ್ರನಿಗೆ ಹೆಸರು ಸೂಚಿಸಿದ್ದು ಯಾರು?

'ಆಗಲೇ 11 ತಿಂಗಳು ಆಯ್ತಾ? ತುಂಬಾ ಬೇಗ ಬೆಳೆಯುತ್ತಿರುವ ರಾಯನ್. ನನ್ನ ಪ್ರೀತಿಯ ಅಭಿಮಾನಿಗಳು ಪ್ರತಿ ತಿಂಗಳನ್ನೂ ನಮ್ಮೊಟ್ಟಿಗೆ ಸ್ಪೆಷಲ್ ಆಗಿ ಆಚರಿಸುತ್ತಾರೆ. ಈ ವಿಡಿಯೋ ಮೂಲಕ ರಾಯನ್ (Rayan Raj) ನಿಮಗೆ ಧನ್ಯವಾದಗಳನ್ನು ತಿಳಿಸಲು ಇಷ್ಟ ಪಡುತ್ತಾನೆ. ಅವನ ಸ್ನೇಹಿತ ಗೂಸ್‌ ಆ್ಯಂಡ್ ಗಾಸ್, ' ಎಂದು ಮೇಘನಾ ಬರೆದುಕೊಂಡಿದ್ದಾರೆ. ಹಳದಿ ಬಣ್ಣದ ಟೀ ಶರ್ಟ್‌ ಹಾಗೂ ನೀಲಿ ಬಣ್ಣದ ಡೈಪರ್‌ನಲ್ಲಿ ಕಾಣಿಸಿಕೊಂಡಿರುವ ರಾಯನ್ ಗೂಸ್ ಆ್ಯಂಡ್ ಗೀಸ್ (Goose and Geese) ಅಂದ್ರೆ ಅವನ ಸ್ನೇಹಿತ ಕೋಟಿ ಗೊಂಬೆ ಜೊತೆ ಆಟವಾಡುತ್ತಿದ್ದಾರೆ. ರಾಯನ್ ಟೀ ಶರ್ಟ್‌ ಮೇಲಿರುವ 'What's up Dude?' ವಾಕ್ಯ ನೋಡಿ ಅಭಿಮಾನಿಗಳು (Fans) ಅದೇ ಸಾಲುಗಳನ್ನು ಕಾಮೆಂಟ್‌ ಮಾಡಿ ರಾಯನ್ ಈಗಲೇ ನೀನು ತುಂಬಾ ಸ್ಟೈಲಿಷ್ ಎಂದು ಕಾಮೆಂಟ್ ಮಾಡಿದ್ದಾರೆ. 

Raayan Raj Sarja completes 11 months Meghana Raj shares special video vcs

ನಿರ್ದೇಶಕ ಪನ್ನಗಾಭರಣ (Pannagabharana),  ಕೆಎಂ ಚೈತನ್ಯಾ, ನಟ ಮಾಹಿ ಸೇರಿದಂತೆ ಸಿನಿಮಾ ಸೆಲೆಬ್ರಿಟಿಗಳು (Cine Celebrities) ಸಹ ಕಾಮೆಂಟ್ ಮಾಡಿದ್ದಾರೆ. ಪದೇ ಪದೇ ರಾಯನ್ ವಿಡಿಯೋ ನೋಡಬೇಕು ಎನಿಸುತ್ತಿದೆ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ರಾಯನ್‌ಗೆ ಎರಡು ಸಂಪ್ರದಾಯದಲ್ಲಿ ನಾಮಕರಣ ಮಾಡಲಾಗಿತ್ತು. ಜರ್ಚ್‌ನಲ್ಲಿ ಕ್ರಿಸ್ಶಿಯನ್  ಸಂಪ್ರದಾಯದ ಪ್ರಕಾರ ಹಾಗೂ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ಹಿಂದು ಸಂಪ್ರದಾಯದ ಪ್ರಕಾರ ನಾಮಕರಣ ನಡೆಯಿತು. ರಾಯನ್ ಎರಡು ಸಮಯದಲ್ಲೂ ಸಖತ್ ಸ್ಟೈಲಿಶ್ ಅಗಿ ಕಾಣಿಸಿಕೊಂಡಿದ್ದ. ಕೆಲವು ದಿನಗಳ ಕಾಲ ಎಲ್ಲಿ ನೋಡಿದ್ದರೂ, ರಾಯನ್ ಫೋಟೋ ಹಾಗೂ ವಿಡಿಯೋಗಳೇ ಸೋಷಿಯಲ್ ಮೀಡಿಯಾವನ್ನು (Social Media) ಆಳುತ್ತಿತ್ತು. 

ಹಿಂದು- ಕ್ರೈಸ್ತ ಧರ್ಮದಂತೆ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ ಮೇಘನಾ ರಾಜ್!

ಧರ್ಮಗಳ ಮೇಲೆ ಕೆಲವರು ಕಾಮೆಂಟ್ ಮಾಡಿದ್ದಕ್ಕೆ ಮೇಘನಾ ನಾಮಕರಣ ವಿಡಿಯೋ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. 'ನಮ್ಮ ರಾಯನ್ ರಾಜ್ ಸರ್ಜಾ. ತಾಯಿ ಆಗಿ ನಾನು ನನ್ನ ಮಗನಿಗೆ ಯಾವುದು ಬೆಸ್ಟ್ ಎನ್ನುವುದರ ಕಡೆ ಮಾತ್ರ ನನ್ನ ಆದ್ಯತೆ ಇರುತ್ತದೆ. ಅವನ ಪೋಷಕರು ಎಂಜಾಯ್ ಮಾಡಿದ ಹಾಗೆ ಯಾಕೆ ಎರಡು ಬೆಸ್ಟ್ ವರ್ಲ್ಡ್‌ ಅವನಿಗೆ ಇರಬಾರದು? ಯಾವುದೇ ಜಾತಿ, ಧರ್ಮ ಇಲ್ಲದೇ ಜನರು ಅವನಿಗೋಸ್ಕರ ಪ್ರಾರ್ಥಿಸಿದ್ದಾರೆ. ನಮ್ಮ ಕುಟುಂಬಕ್ಕೆ ಒಳೆಯದಾಗಲಿ, ಎಂದು ಶುಭ ಹಾರೈಸಿದ್ದಾರೆ. ನಾವು ಮೇಲಿರುವ ಭಗವಂತನನ್ನು ಎಲ್ಲವೂ ಒಳ್ಳೇಯದಾಗಲೆಂದು ಪ್ರಾರ್ಥಿಸುತ್ತೇವೆ. ನನಗೂ ಎರಡೂ ಸಂಪ್ರದಾಯಗಳಲ್ಲಿ ಮಗನ ನಾಮಕರಣ (Naming Ceremony) ಮಾಡುವುದು ಮುಖ್ಯವಾಗಿತ್ತು. ಏಕೆಂದರೆ ಅವನ ತಂದೆ, ನಮ್ಮ ಕಿಂಗ್  ನಂಬಿದ್ದು Humanity matters above everything ಎಂದು. ರಾಯನ್ ಪದ ಸಂಸ್ಕೃತವಾದರೂ ಅದು ಎಲ್ಲಾ ಧರ್ಮಕ್ಕೂ ಸೇರಿದ್ದು. ಇದನ್ನು ವಿವಿಧ ರೀತಿಯಲ್ಲಿ ಕರೆಯುತ್ತಾರೆ, ಬರೆಯುತ್ತಾರೆ ಆದರೆ ಕೊಡುವ ಅರ್ಥ ಒಂದೇ. ನಮ್ಮ ಪ್ರೈಡ್, ನಮ್ಮ ಪ್ರಿನ್ಸ್ ನಮ್ಮ ರಾಯನ್ ರಾಜ್ ಸರ್ಜಾ. ಮಗನೇ ನೀನು ನಿನ್ನ ತಂದೆಯಂತೆ  ಬದುಕಬೇಕು. ಪ್ರತಿಯೊಬ್ಬರನ್ನೂ ಗೌರವಿಸು, ಅವರು ಮಾಡುವ ಕೆಲಸಕ್ಕೆ ಬೆಲೆ ಕೊಟ್ಟರೂ, ಯಾವ ಬ್ಯಾಗ್ರೌಂಡ್‌ ಕೂಡ ಅವರು ಮ್ಯಾಟರ್ ಆಗಲಿಲ್ಲ. He is a giver..ನಿನ್ನ ಬಗ್ಗೆ ಅಪ್ಪನಿಗೆ ಹೆಮ್ಮ ಇದೆ. ಈಗ ನೀನು ರೂಲ್ ಮಾಡುವ ಸಮಯ. ಅಮ್ಮ ಅಮ್ಮ ಲವ್ಸ್‌ ಯು,' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ.

"

Follow Us:
Download App:
  • android
  • ios