ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ ‘ರಾಜತಂತ್ರ’ ಟೀಸರ್‌ಅನ್ನು ಪುನೀತ್‌ ರಿಲೀಸ್‌ ಮಾಡಿದರು. ಆರೋಗ್ಯ ಸಮಸ್ಯೆಯ ನಡುವೆಯೂ ಉತ್ಸಾಹದಲ್ಲಿ ಸಿನಿಮಾ ಮಾಡುತ್ತಿರುವ ಅಣ್ಣ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಚಿತ್ರತಂಡವನ್ನು ಹುರಿದುಂಬಿಸುವ ರೀತಿಯಲ್ಲಿ ಪುನೀತ್‌ ಮಾತನಾಡಿದರು. ‘ಕೊರೋನಾದಂಥಾ ಕಠಿಣ ಪರಿಸ್ಥಿತಿಯಲ್ಲೂ ಉತ್ಸಾಹದಿಂದ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೀರಿ. ನಿಮ್ಮ ಶ್ರಮಕ್ಕೆ ಉತ್ತಮ ಫಲ ಸಿಗಲಿ, ಥಿಯೇಟರ್‌ನಲ್ಲಿ ಈ ಚಿತ್ರ ಉತ್ತಮ ಪ್ರದರ್ಶನ ಕಾಣಲಿ. ಜೊತೆಗೆ ಹೆಚ್ಚುಚ್ಚು ಸಿನಿಮಾಗಳು ಥಿಯೇಟರ್‌ಗೆ ಬರುವಂತಾಗಲಿ’ ಎಂದು ಅವರು ಶುಭ ಹಾರೈಸಿದರು.

ನಿವೃತ್ತ ಕ್ಯಾಪ್ಟನ್‌ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ 

ಈ ಚಿತ್ರದಲ್ಲಿ ನಿವೃತ್ತ ಆರ್ಮಿ ಆಫೀಸರ್‌ ಕ್ಯಾ. ರಾಜಾರಾಮ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ‘ಇದನ್ನೆಲ್ಲ ಯಾವುದೋ ಶಕ್ತಿ ನನ್ನಿಂದ ಮಾಡಿಸಿದೆ. ಇಂಥದ್ದೊಂದು ಪಾತ್ರ ಈ ಹಿಂದೆ ಮಾಡಿರಲಿಲ್ಲ. ಇದರಲ್ಲೊಂದು ಫೈಟ್‌ ಸಹ ಮಾಡಿದ್ದೀನಿ. ಅಭಿಮಾನಿಗಳ ಪ್ರೀತಿ, ವಿಶ್ವಾಸಗಳೇ ನನ್ನನ್ನು ಬೆಳೆಸುತ್ತಿವೆ’ ಎಂದರು.

ನಿರ್ದೇಶಕ ಪಿವಿಆರ್‌ ಸ್ವಾಮಿ ಮಾತನಾಡಿ,‘ಈ ಕತೆ ಕೇಳಿದ ತಕ್ಷಣ ಇದಕ್ಕೆ ರಾಘವೇಂದ್ರ ರಾಜ್‌ಕುಮಾರ್‌ ಅವರೇ ಸೂಕ್ತ ಅನಿಸಿತು. ಅವರನ್ನಿಟ್ಟು ಮುಂದೆ ಇನ್ನೊಂದು ಸಿನಿಮಾ ಮಾಡಲಿದ್ದೇವೆ. ಆ ಬಗ್ಗೆ ಮುಂದೆ ವಿವರವಾಗಿ ಹೇಳುವೆ. ಈ ಸಿನಿಮಾವನ್ನು ಬೆಂಬಲಿಸಿ’ ಎಂದು ಕೋರಿದರು.

ರಾಘವೇಂದ್ರ ರಾಜ್‌ಕುಮಾರ್‌ 25ನೇ ಸಿನಿಮಾ; ಗಣೇಶ ಹಬ್ಬಕ್ಕೆ 'ಆಡಿಸಿದಾತ' ಟ್ರೈಲರ್! 

ವಿಶ್ವಂ ಡಿಜಿಟಲ… ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್‌, ವಿಜಯ ಭಾಸ್ಕರ್‌ ಹರಪನಹಳ್ಳಿ ಹಾಗೂ ಪಿ.ಆರ್‌.ಶ್ರೀಧರ್‌ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಜನವರಿ 1ರಂದು ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.