Asianet Suvarna News Asianet Suvarna News

Raghavendra Rajkumar: ನನಗೆ ಮೂರು ಹೆಣ್ಣುಮಕ್ಕಳು, ತಮ್ಮನ ಹೆಂಡತಿಯೂ ಒಬ್ಬ ಮಗಳು!

ರಾಜಿ ಸಿನಿಮಾ ಮುಹೂರ್ತದ ವೇಳೆ ಭಾವುಕರಾದ ರಾಘವೇಂದ್ರ ರಾಜ್‌ಕುಮಾರ್‌. ನನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದ ನಟ.... 

Puneeth Rajkumar wife Ashwini and daughters are my three daughters says Raghavendra Rajkumar vcs
Author
Bangalore, First Published Dec 11, 2021, 2:22 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ (Sandalwood) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿದ ಕೆಲವು ದಿನಗಳ ನಂತರ ಪತ್ನಿ ಅಶ್ವಿನಿ (Ashwini) ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಸಂಸ್ಥೆ (PRK Productions) ತಮ್ಮ ಸಿನಿಮಾ ಕೆಲಸಗಳನ್ನು ಶುರು ಮಾಡಲಿದೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಮೂಲಕ ಅನೌನ್ಸ್ ಮಾಡಿದ್ದರು. ಅಪ್ಪು ಕನಸಿನ ಚಿತ್ರ ಗಂಧದ ಗುಡಿ (Gandhada Gudi) ಟೈಟಲ್‌ ಅನ್ನು ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ (Youtube Channel) ಬಿಡುಗಡೆ ಮಾಡಿದ್ದರು. ಇದೀಗ ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ಕೂಡ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. 

ಹೌದು! ರಾಘಣ್ಣ ನಟನೆಯ ರಾಜಿ (Raaji) ಸಿನಿಮಾ ಮುಹೂರ್ತವನ್ನು ಕಂಠೀರವ ಸ್ಟುಡಿಯೋದಲ್ಲಿ (Kanteerava Studio) ನಡೆದಿದೆ. ನಟ ಶ್ರೀಮುರಳಿ (SriMurali) ಈ ಕಾರ್ಯಕ್ರಮಕ್ಕೆ ಕ್ಲಾಪ್ ಮಾಡಿದ್ದರು ಮತ್ತು ನಟಿ ಹರ್ಷಿಕಾ ಪೂಣ್ಣಚ್ಚ (Harshika Poonacha) ಕ್ಯಾಮೆರಾ ಚಾಲನೆ ಮಾಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಾಘಣ್ಣ ಅಪ್ಪು ನೆನೆದು ಭಾವುಕರಾಗಿದ್ದಾರೆ. 

ಪವರ್‌ ಹೋದ್ಮೇಲೆ ಬಲ್ಬ್ ಏನ್ ಮಾಡೋಕೆ ಆಗುತ್ತೆ; ವೇದಿಕೆ ಮೇಲೆ ಭಾವುಕರಾದ ರಾಘಣ್ಣ!

'ನನ್ನ ತಮ್ಮನ ನಿಧನದ ನಂತರ ನಾನು ಅಭಿನಯಿಸುತ್ತಿರುವ ಮೊದಲು ಸಿನಿಮಾ ಇದು. ಅವನು ಇದ್ದಿದ್ದರೆ ಅವನೇ ಬಂದು ಕ್ಲಾಪ್ ಮಾಡಬೇಕಿತ್ತು. ಆದರೆ ವಿಧಿಬರಹವೇ ಬೇರೆ. ಹೆಣ್ಣು ಮಗಳೊಬ್ಬಳು ನಿರ್ದೇಶನ ಮಾಡುತ್ತಿರುವುದು ಖುಷಿಯ ವಿಚಾರ. ಗಂಡ- ಹೆಂಡತಿ ನಡುವಿನ ಸುಂದರ ಒಪ್ಪಂದವೇ ಈ ರಾಜಿ ಸಿನಿಮಾ. ರಾ ಅಂದ್ರೆ ರಾಘವೇಂದ್ರ ಜಿ ಅಂದ್ರ ಜೀವಿತಾ ಎಂದು. ನನ್ನ ಪಾತ್ರ ಚೆನ್ನಾಗಿದೆ. ಈ ಸಿನಿಮಾದಿಂದ ನನಗೆ ಒಳ್ಳಯ ಹೆಸರು ಅಥವಾ ಪ್ರಶಸ್ತಿ (Award) ಬಂದರೆ ನನ್ನ ಮೂವರು ಹೆಣ್ಣು ಮಕ್ಕಳಿಗೆ ಅರ್ಪಿಸುತ್ತೇನೆ. ಆ ಮೂವರು ಯಾರೆಂದರೆ ನನ್ನ ತಮ್ಮನ ಹೆಂಡತಿ ಅಶ್ವಿನಿ, ಅವರ ಮಕ್ಕಳಾದ ಧೃತಿ (Druthi) ಮತ್ತು ವಂದಿತಾ (Vanditha). ಇನ್ನು ಮುಂದೆ ಅವರೇ ನನ್ನ ಹೆಣ್ಣು ಮಕ್ಕಳು,' ಎಂದು ಭಾವುಕರಾದರು. 

Puneeth Rajkumar wife Ashwini and daughters are my three daughters says Raghavendra Rajkumar vcs

ಪ್ರಿಯಾ ಎಸ್ ಬಾಬು (Priya S Babu) ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಬಸವರಾಜ್‌ ಎಸ್‌ ಮೈಸೂರು (Basavaraj S Mysore) ನಿರ್ಮಾಣ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರ ಮಡದಿ ಪಾತ್ರದಲ್ಲಿ ನಿರ್ದೇಶಕಿ ಪ್ರಿಯಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ. 

ದೇವರ ಕೋಣೆಯಲ್ಲಿ ಅಣ್ಣಾವ್ರು, ಅಪ್ಪು ಫೋಟೋ; ಅಭಿಮಾನಿಗಳಿಗೆ ಸಾಷ್ಟಾಂಗ ನಮಸ್ಕಾರ ಎಂದು ರಾಘಣ್ಣ

'ಸಹ ಕಲಾವಿದೆಯಾಗಿ ನನ್ನ ವೃತ್ತಿ ಜೀವನ ಆರಂಭವಾಗಿದ್ದು, ಇದೇ ಕಂಠೀರವ ಸ್ಟುಡಿಯೋದಲ್ಲಿ. ಇಂದು ನಾನು ನಿರ್ದೇಶಿಸುತ್ತಿರುವ ಮೊದಲ ಚಿತ್ರದ ಮುಹೂರ್ತ ನಡೆಯುತ್ತಿರುವುದು ಇದೇ ಸ್ಟುಡಿಯೋದಲ್ಲಿ. ಗಂಡ ಹೆಂಡತಿಯ ನಡುವಿನ ಸುಂದರ ಒಪ್ಪಂದದ ಈ ಕಥೆ ಬಗ್ಗೆ ರಾಘಣ್ಣನವರು ಬಳಿ ಹೇಳಿದಾಗ, ಮೆಚ್ಚುಗೆ ಸೂಚಿಸಿ ನಟಿಸಲು ಒಪ್ಪಿದ್ದಾರೆ. ಈ ಚಿತ್ರ ಆರಂಭವಾಗಲು ಮುಖ್ಯ ಕಾರಣ ನನ್ನ ಚಿತ್ರದ ಛಾಯಾಗ್ರಹಕ ಪಿವಿಆರ್ ಸ್ವಾಮಿ (PRK Swamy). ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಯಾರು ನಿರೀಕ್ಷಿಸದ ಕಥೆ ನಮ್ಮ ಈ ಚಿತ್ರದಲ್ಲಿದೆ. ಹೀಗಾಗಿ ನಿಮ್ಮೆಲ್ಲರ ಪ್ರೋತ್ಸಾಹವಿರಲಿ,' ಎಂದು ಪ್ರಿಯಾ ಮಾತನಾಡಿದ್ದಾರೆ. 

ವಸುಮತಿ ಉಡುಪಿ ಅವರ ಕಥೆ ಆಧರಿಸಿ ಸಿನಿಮಾ ಮಾಡಲಾಗುತ್ತಿದ್ದು, ಖ್ಯಾತ ಕವಿ ಎಚ್‌ಎಸ್‌ ವೆಂಕಟೇಶಮೂರ್ತಿ ಅವರು 5 ಕವನಗಳನ್ನು ಚಿತ್ರಕ್ಕಾಗಿ ಬರೆದಿದ್ದಾರೆ. ಅದಕ್ಕೆ ಉಪಾಸನ ಮೋಹನ್ ಸಂಗೀತ ನೀಡಲಿದ್ದಾರೆ. ಸಂಕಲನ ನಾಗೇಶ್ ಮಾಡುತ್ತಿದ್ದಾರೆ.

Follow Us:
Download App:
  • android
  • ios