ಪವರ್ ಸ್ಟಾರ್ ಟ್ವಿಟ್ಟರ್ ಖಾತೆಯಿಂದ ಬ್ಲ್ಯೂ ಟಿಕ್ ತೆಗೆದುಹಾಕಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬ್ಲ್ಯೂ ಟಿಕ್ ಮರಳಿ ಕೊಡುವಂತೆ ಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಿದ್ದರು. ಇದೀಗ ಪುನೀತ್ ರಾಜ್ ಕುಮಾರ್ ಖಾತೆಗೆ ಬ್ಲ್ಯೂ ಟಿಕ್ ಮರಳಿ ಬಂದಿದೆ.

ಮೂರು ತಿಂಗಳು ಕಳೆದರೆ ಕರ್ನಾಕಟ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಹೊಂದಿ ಒಂದು ವರ್ಷ ಆಗಲಿದೆ. ಅಪ್ಪು ಇಲ್ಲದೇ ಅನೇಕ ತಿಂಗಳುಗಳೇ ಕಳೆದಿವೆ. ಆದರೂ ಪವರ್ ಸ್ಟಾರ್ ಅಭಿಮಾನಿಗಳ ಹೃದಯದಲ್ಲಿ ಇನ್ನು ಜೀವಂತ. ಅಕ್ಟೋಬರ್ 29ರಂದು ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿದರು. ಅಭಿಮಾನಿಗಳಿಗೆ ಇನ್ನು ಅಪ್ಪು ಅಗಲಿಕೆಯ ಸತ್ಯವನ್ನು ಅರಗಿಸಿಕೊಂಡಿಲ್ಲ. ಈ ನಡುವೆ ಟ್ವಿಟ್ಟರ್ ಸಂಸ್ಥೆ ಮತ್ತೊಂದು ಆಘಾತ ನೀಡಿತ್ತು. ಪವರ್ ಸ್ಟಾರ್ ಟ್ವಿಟ್ಟರ್ ಖಾತೆಯಲ್ಲಿದ್ದ ಬ್ಲ್ಯೂ ಟಿಕ್ ತೆಗೆದು ಹಾಕಿತ್ತು. ಬ್ಲ್ಯೂ ಟಿಕ್ ನೀಡುವುದು ವೆರಿಫೈಡ್‌ ಖಾತೆ ಅಥವಾ ಇದು ಆಯಾ ವ್ಯಕ್ತಿಯೇ ನಿರ್ವಹಣೆ ಮಾಡುತ್ತಿರುವ ಖಾತೆ ಎನ್ನುವ ಸಲುವಾಗಿ ಟ್ವಿಟರ್‌ ಬ್ಲ್ಯೂ ಟಿಕ್‌ ನೀಡುತ್ತದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಖಾತೆಗಳು ವೆರಿಫೈಡ್‌ ಆಗಿ ಬ್ಲ್ಯೂ ಟಿಕ್ ಪಡೆದಿರುತ್ತವೆ. ಬ್ಲ್ಯೂ ಟಿಕ್‌ ಖಾತೆಗಳ ಮೂಲಕ ಬರುವ ಸಂದೇಶಗಳು ಅಧಿಕೃತ ಎಂದೇ ನಂಬಲಾಗುತ್ತದೆ. ಹಾಗಾಗಿ ಬ್ಲ್ಯೂ ಟಿಕ್‌ ಎನ್ನುವುದು ಟ್ವಿಟರ್‌ ಸೇರಿದಂತೆ ಕೆಲವೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಮುಖವಾಗಿದೆ.

ಟ್ವಿಟರ್‌ನಲ್ಲಿ ಬ್ಲ್ಯೂ ಟಿಕ್‌ ತೆಗೆದು ಹಾಕಲು ಕಾರಣ, ಬ್ಲ್ಯೂ ಟಿಕ್‌ ಹೊಂದಿರುವ ಖಾತೆ ಬಹಳ ದಿನಗಳ ಕಾಲ ನಿಷ್ಕ್ರಿಯವಾಗಿದ್ದರೆ, ಅದು ತನ್ನ ಬ್ಲ್ಯೂ ಟಿಕ್‌ ಅನ್ನು ಕಳೆದುಕೊಳ್ಳುತ್ತದೆ. ಟ್ವೀಟ್‌ ಮಾಡದಿದ್ದರೆ, ಫ್ರೋಫೈಲ್‌ ಫೋಟೋ ಅಥವಾ ಬ್ಯಾನರ್‌ಗಳನ್ನಾದರೂ ಬದಲಿಸುತ್ತಿರಬೇಕು. ಇಲ್ಲದೇ ಇದ್ದಲ್ಲಿ ಇದು ನಿಷ್ಕ್ರಿಯ ಎಂದು ಟ್ವಿಟರ್‌ ನಿರ್ಧರಿಸಿ ಟಿಕ್‌ ಅನ್ನು ತೆಗೆದುಹಾಕಿತ್ತದೆ. ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಖಾತೆ ವಿಚಾರದಲ್ಲೂ ಹಾಗೆ ಆಗಿತ್ತು. 

ಪವರ್ ಸ್ಟಾರ್ ಟ್ವಿಟ್ಟರ್ ಖಾತೆಯಿಂದ ಬ್ಲ್ಯೂ ಟಿಕ್ ತೆಗೆದುಹಾಕಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬ್ಲ್ಯೂ ಟಿಕ್ ಮರಳಿ ಕೊಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಿದ್ದರು. ಇದೀಗ ಪುನೀತ್ ರಾಜ್ ಕುಮಾರ್ ಖಾತೆಗೆ ಬ್ಲ್ಯೂ ಟಿಕ್ ಮರಳಿ ಬಂದಿದೆ. ಅಪ್ಪು ಖಾತೆಯಲ್ಲಿರುವ ಬ್ಲ್ಯೂ ಟಿಕ್ ನೋಡಿ ಅಭಿಮಾನಿಗಳು ಫುಲ್ ಆಗಿದ್ದಾರೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

Scroll to load tweet…

ಅಪ್ಪು ಟ್ವಿಟ್ಟರ್ ಖಾತೆಯ ಸ್ಕ್ರೀನ್ ಶಾಟ್ ಶೇರ್ ಮಾಡಿ ಸಂತೋಷ್ ಆನಂದ್ ರಾಮ್ ಟ್ವಿಟ್ಟರ್ ಇಂಡಿಯಾಗೆ ಧನ್ಯವಾದ ತಿಳಿಸಿದ್ದಾರೆ. ' ಅಪ್ಪು ಅಣ್ಣ ಅಭಿಮಾನಿಗಳ ಹೃದಯದಲ್ಲಿದ್ದಾರೆ ಎನ್ನುವುದಕ್ಕೆ ಇದು ಒಂದು ಉದಾಹಾರಣೆಯಾಗಿದೆ. ಪವರ್‌ಫುಲ್ ಮ್ಯಾನ್‌ನ ಪವರ್‌ಫುಲ್ ಅಭಿಮಾನಿಗಳಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ. 

Gandhada Gudi Release Date: ಅಪ್ಪು ನಟನೆಯ ಕೊನೆಯ ಸಾಕ್ಷ್ಯಚಿತ್ರ ರಿಲೀಸ್ ಡೇಟ್ ಫಿಕ್ಸ್

ಅಂದಹಾಗೆ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ಭಜರಂಗಿ-2 ಸಿನಿಮಾ ವಿಚಾರಕ್ಕೆ ಟ್ವೀಟ್ ಮಾಡಿದ್ದರು. ಪುನೀತ್ ನಿದನಹೊಂದಿದ ಕೆಲವೆ ಗಂಟೆಗಳ ಮೊದಲು ಅಣ್ಣ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾಗೆ ವಿಶ್ ಮಾಡಿ ಟ್ವೀಟ್ ಮಾಡಿದ್ದರು. ಅದೇ ಕೊನೆಯ ಟ್ವೀಟ್. ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಬೇಕು, ಚಿತ್ರದ ಕುರಿತಾಗಿ, ವಿಶೇಷ ಸಂದರ್ಭಗಳ ಕುರಿತಾಗಿ ತಮ್ಮ ಸಂದೇಶವನ್ನು ಹೇಳಲು ಟ್ವಿಟರ್‌ಅನ್ನು ಬಳಸುತ್ತಿದ್ದರು.

ಇದೀಗ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲಾತಣದಲ್ಲಿ ಅಕ್ಟೀವ್ ಆಗಿದ್ದಾರೆ. ಪಿಆರ್‌ಕೆ ಸಂಸ್ಥೆಯ ಯಾವುದೇ ಮಾಹಿತಿ ಇದ್ದರು ಅವರೇ ಶೇರ್ ಮಾಡುತ್ತಾರೆ. ಅಪ್ಪು ಕೊನೆಯ ಸಿನಿಮಾ ಗಂಧದಗುಡಿ ರಿಲೀಸ್ ಗೆ ರೆಡಿಯಾಗಿದೆ. ಅಕ್ಟೋಬರ್ 28ರಂದು ಸಾಕ್ಷ್ಯಚಿತ್ರಿ ರಿಲೀಸ್ ಆಗುತ್ತಿದೆ. ಈ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.