ಎರಡು ಹಾಡುಗಳನ್ನು ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಿಕೊಂಡು ಬರಲು ಚಿತ್ರತಂಡ ಪ್ಲ್ಯಾನ್‌ ಹಾಕಿಕೊಂಡಿದೆ.

ನಿಜನಾ..! ಪವರ್‌ಸ್ಟಾರ್ ಪುನೀತ್ ಇದ್ನೆಲ್ಲಾ ಮಾಡ್ತಾರಾ?

ರಾಜ್ಯದ ವಿವಿಧ ಕಡೆಗಳಲ್ಲೆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌, ಈಗ ಸಾಂಗ್‌ ಶೂಟ್‌ಗೆ ಆಸ್ಟ್ರಿಯಾ ಮತ್ತು ಸ್ಲೋವೆನಿಯಾದತ್ತ ಮುಖ ಮಾಡಿರುವುದಕ್ಕೂ ಕಾರಣವಿದೆ. ಆಸ್ಟ್ರಿಯ ಹಾಗೂ ಸ್ಲೋವೆನಿಯಾ ಜಗತ್ತಿನ ಸುಂದರ ದೇಶಗಳಲ್ಲಿ ಒಂದಾದ ದೇಶಗಳು.

ಚಿತ್ರ ವಿಮರ್ಶೆ: ಮಾಯಾಬಜಾರ್‌

ಇಲ್ಲಿನ ಕಣಿವೆಗಳು, ಸರೋವರಗಳು, ಪರ್ವತ ಪ್ರದೇಶದ ತಾಣಗಳು ಕಣ್ಮನ ಸೆಳೆಯುತ್ತವೆ. ಪ್ರಭಾಸ್‌ ಅಭಿನಯದ ತೆಲುಗು ಚಿತ್ರ‘ ಸಾಹೋ’ ಸೇರಿ ಕೆಲವೇ ಕೆಲವು ಭಾರತೀಯ ಭಾಷೆಯ ಚಿತ್ರಗಳಿಗೆ ಅಲ್ಲಿ ಚಿತ್ರೀಕರಣ ಆಗಿದೆ. ಕನ್ನಡಕ್ಕಂತೂ ಇದು ಅಪರೂಪ. ಹಾಗಾಗಿ ಅಲ್ಲಿನ ಸುಂದರ ತಾಣಗಳು ತಮ್ಮ ಚಿತ್ರದ ಮೂಲಕ ಕನ್ನಡ ಸಿನಿರಸಿಕರಿಗೆ ತೆರೆ ಮೇಲೆ ತೋರಿಸಲು ಹೊರಟಿದ್ದಾರೆ ಸಂತೋಷ್‌ ಆನಂದ್‌ರಾಮ್‌.