ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಪುಟ್ಟ ಬಾಲಕನ ವಿಡಿಯೋ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕನ ವಿಡಿಯೋ ಶೇರ್ ಮಾಡಿದ ನಟ, ಬಾಲಕನ ಪ್ರೀತಿಯನ್ನು ಮೆಚ್ಚಿ ವಂದನೆಗಳನ್ನು ತಿಳಿಸಿದ್ದಾರೆ.

ಎಲ್ಲರಿಗೂ ನಮಸ್ಕಾರ, ಹೇಗಿದ್ದೀರಾ..? ಹುಷಾರಾಗಿರಿ, ನಿಮ್ಮ ಜಾಗೃತೆಯಿಂದಿರಿ ಎಂದು ಮಾತು ಆರಂಭಿಸಿದ ಅಪ್ಪು ಕೊರೋನಾ ಟೈಂನಲ್ಲಿ ಎಲ್ಲರಿಗೂ ಜಾಗೃತೆಯಾಗಿರುವಂತೆ ಸೂಚನೆ ಕೊಟ್ಟಿದ್ದಾರೆ.

"

ಬೆಳ್ಳಂಬೆಳಗ್ಗೆ ಸೈಕಲ್‌ ಏರಿ ಬೆಂಗಳೂರು ರೈಡ್‌ ಹೊರಟ ಪುನೀತ್‌ ರಾಜ್‌ಕುಮಾರ್!

ಸ್ನೇಹಿತ, ಪತ್ರಕರ್ತ ಜೋಗಿ ಒಂದು ವಿಡಿಯೋ ಕಳುಹಿಸಿದ್ದರು. ಈ ನಾಲ್ಕು ವರ್ಷದ ಹುಡಗ ಆಕಾಶ್ ಭಟ್ ಒಂದು ವಿಡಿಯೋ ಮಾಡಿದ್ದಾನೆ. ತಂದೆ ತಾಯಿ ಹೆಸರು ಪೂನಂ ಮತ್ತು ಆದಿತ್ಯ ಎಂದು ಪರಿಚಯ ತಿಳಿಸಿದ್ದಾರೆ.

ಈ ಹುಡುಗ ಬಭ್ರುವಾಹನ ಡಯಲಾಗ್ ಮತ್ತು ಹಾಡನ್ನೂ ಹಾಡಿದ್ದಾನೆ ಎಂದು ಹೇಳಿ ವಿಡಿಯೋ ಶೇರ್ ಮಾಡಿದ್ದಾರೆ. ಪುಟ್ಟ ಅಭಿಮಾನಿಗೆ ನನ್ನ ವಂದನೆಗಳೂ ಎಂದು ಅವರು ಹೇಳಿದ್ದಾರೆ.

ತಮ್ ಬಗ್ಗೆ ತಿಳಿದೂ ತಪ್ಪು ಸುದ್ದಿ ಬರ್ದೋರನ್ನ ಚಂದನ್ ಕನ್ಫ್ಯೂಸ್ ಮಾಡಿದ್ದು ಹೀಗೆ..!

ಪುಟ್ಟ ಬಾಲಕ ಬಭ್ರುವಾಹನ ಸಿನಿಮಾದ ಡಯಲಾಗ್ ಹೇಳಿ ಅಭಿನಯಿಸಿದ್ದು, ನಂತರ ಹಾಡನ್ನೂ ಹಾಡಿದ್ದಾರೆ. ವಿಡಿಯೋವನ್ನು ಅಪ್ಪು ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡು ಮೆಚ್ಚುಗೆ ತಿಳಿಸಿದ್ದಾರೆ.