ಮರೆಯಾದ 'ಪವರ್' ಜೇಮ್ಸ್‌ ಸೇರಿ ಹಲವು ಸಿನಿಮಾ ಅತಂತ್ರ

* ಕನ್ನಡದ ಒವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ
* ಜೇಮ್ಸ್‌, ದ್ವಿತ್ವ ಸೇರಿ ಹಲವು ಸಿನಿಮಾ ಅತಂತ್ರ
* ಅಭಿಮಾನಿಗಳ ಕಣ್ತಪ್ಪಿಸಲು 5 ಆ್ಯಂಬುಲೆನ್ಸ್‌ ಬಳಕೆ
* ಹಲವು ಪ್ರಾಜೆಕ್ಟ್ ಗಳು ಜಾರಿಯಲ್ಲಿದ್ದವು

Puneeth Rajkumar s Death James And Other Unfinished Projects Of The Power Star mah

ಬೆಂಗಳೂರು(ಅ. 30)  ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ನಿಧನದಿಂದ (Death) ಚಿತ್ರರಂಗಕ್ಕೆ (Sandalwood) ಬಹು ದೊಡ್ಡ ನಷ್ಟಆಗಿದೆ. ಚೇತನ್‌ ಕುಮಾರ್‌ ನಿರ್ದೇಶನದಲ್ಲಿ ‘ಜೇಮ್ಸ್‌’(James)  ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದರು. ಅದು ಡಬ್ಬಿಂಗ್‌ ಹಂತದಲ್ಲಿತ್ತು. ಲೂಸಿಯಾ ಪವನ್‌ ಕುಮಾರ್‌ ನಿರ್ದೇಶನದಲ್ಲಿ ‘ದ್ವಿತ್ವ’ ಸಿನಿಮಾ ಸೆಟ್ಟೇರಿ ಅದರ ಟೈಟಲ್‌ ಬಿಡುಗಡೆ ಮಾಡಲಾಗಿತ್ತು. ವಿಜಯ್‌ ಕಿರಗಂದೂರು ನಿರ್ಮಾಣದ ಚಿತ್ರವಿದು. 

ಇದರ ಜತೆಗೆ ಸಿ.ಆರ್‌.ಮನೋಹರ್‌ ನಿರ್ಮಾಣ, ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡುವ ತಯಾರಿ ಮಾಡಿಕೊಂಡಿದ್ದರು. ವಿಶೇಷ ಎಂದರೆ ಇದು ಪುನೀತ್‌ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ ಸಿನಿಮಾ ಆಗಿತ್ತು. ಕತೆ ಕೇಳಿ ಒಪ್ಪಿಕೊಂಡಿದ್ದರು. ಮತ್ತೊಮ್ಮೆ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಜತೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದರು. 

'ದೇವರಿಗೆ ನಿಸ್ವಾರ್ಥ ಆತ್ಮಗಳ ಮೇಲೆ ಪ್ರೀತಿ ಜಾಸ್ತಿ '  ಚಿರು-ಪುನೀತ್ ಪೋಟೋ ಹಂಚಿಕೊಂಡ ಮೇಘನಾ

ಅಡ್ವೆಂಚರ್‌ ಆಧಾರಿತ 90 ನಿಮಿಷಗಳ ಆವಧಿಯ ‘ಗಂಧದ ಗುಡಿ’ ಸಿನಿಮಾ ರೂಪಿಸಿದ್ದು, ಇದರ ಟ್ರೇಲರ್‌ ನ.1ಕ್ಕೆ ಬಿಡುಗಡೆ ಮಾಡುವುದಾಗಿ ಸ್ವತಃ ಪುನೀತ್‌ ಅವರೇ ಘೋಷಣೆ ಮಾಡಿದ್ದರು. ಇದರ ಜತೆಗೆ ಸಾಕಷ್ಟುಕತೆಗಳನ್ನು ಕೇಳಿದ್ದರು. ಆದರೆ, ಈಗ ಹಠಾತ್‌ ನಿಧನದಿಂದ ಪುನೀತ್‌ ಅವರಿಗಾಗಿ ಕಾಯುತ್ತಿದ್ದ ಸಿನಿಮಾಗಳು, ಕತೆಗಳು ಅನಾಥವಾಗಿವೆ. ಅಭಿಮಾನಿಗಳ ಜತೆ  ನಿರ್ಮಾಪಕರಿಗೂ ಈ ಸುದ್ದಿ ದೊಡ್ಡ ಆಘಾತ ನೀಡಿದೆ.

ಹೃದಯಾಘಾತದಿಂದ ಪುನೀತ್‌ಕುಮಾರ್‌ ಮೃತಪಟ್ಟಿರುವುದು ಖಚಿತವಾಗುತ್ತಲೇ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ವಸಂತ ನಗರದ ಮಿಲ್ಲ​ರ್‍ಸ್ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಗೆ ನುಗ್ಗಲು ಯತ್ನಿಸಿದರು. ಜೊತೆಗೆ ಆಸ್ಪತ್ರೆ ಮುಖ್ಯದ್ವಾರ ಮತ್ತು ಹಿಂಭಾಗದ ಗೇಟ್‌ ಬಳಿಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ತಮ್ಮ ನೆಚ್ಚಿನ ನಟನ ಕಳೆದುಕೊಂಡ ಅಭಿಮಾನಿಗಳು ದೇವರಿಗೆ ಮತ್ತು ಆಸ್ಪತ್ರೆ ವೈದ್ಯರುಗಳಿಗೆ ಹಿಡಿಶಾಪ ಹಾಕುತ್ತಾ, ಕಣ್ಣೀರು ಸುರಿಸುತ್ತಾ ನೋಡಲು ಅವಕಾಶ ನೀಡುವಂತೆ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಿದ್ದದ್ದು ಮನ ಕರಗಿಸುವಂತಿತ್ತು.

 


 

Latest Videos
Follow Us:
Download App:
  • android
  • ios