Asianet Suvarna News Asianet Suvarna News

ಮಂಡ್ಯದ ಹೊಟೆಲ್ ಮ್ಯಾನೇಜರ್ ಮದುವೆಯಾದ್ರು ಪಂಡರಿಬಾಯಿ; ಸಾಯವವರೆಗೂ ಕಣ್ಣೀರಿನಲ್ಲೇ ಕೈ ತೊಳೆದ್ರು..!

50ನೇ ವಯಸ್ಸಿನಲ್ಲಿ ಮಂಡ್ಯದ ಹೊಟೆಲ್ ಮ್ಯಾನೇಜರ್‌ ಪಿಹೆಚ್ ರಾಮರಾವ್ ಎಂಬವರ ಜತೆ ಪ್ರೀತಿಯಲ್ಲಿ ಬಿದ್ದ ಪಂಡರಿಬಾಯಿ ಅವರನ್ನು ಮದುವೆಯಾದರು. ಆದರೆ ಅವರಿಗೆ ಅದಾಗಲೇ ಮದುವೆಯಾಗಿದ್ದು, ಹೆಂಡತಿ ಹಾಗು ನಾಲ್ಕು ಮಕ್ಕಳು ಜತೆಯಲ್ಲಿದ್ದರು.

Actress Pandari Bai married with PH Ramarao in 50th age and lived in chennai till her death in 2003 srb
Author
First Published Jan 29, 2024, 11:11 PM IST

ಸರಿಸುಮಾರು 75 ವರ್ಷಗಳಷ್ಟು ಹಿಂದೆ, ಅಂದರೆ 1950 ರ ದಶಕದಲ್ಲಿ ಚಿತ್ರರಂಗಕ್ಕೆ ಬಂದ ನಟಿ ಪಂಡರಿಬಾಯಿ, ಅಂದಿನ ಕಾಲದ ನಟರಾದ ಡಾ ರಾಜ್‌ಕುಮಾರ್, ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್ ಮೊದಲಾದವರೊಂದಿಗೆ ತೆರೆ ಹಂಚಿಕೊಂಡಿದ್ದ ಖ್ಯಾತ ನಟಿ. ಅಷ್ಟೇ ಅಲ್ಲ, ಕನ್ನಡದಲ್ಲಿ ನಾಯಕಿ ನಟಿಯಾಗಿ ಯಶಸ್ಸು ಕಂಡ ಮೊದಲ ಹೆಣ್ಣುಮಗಳು ಎಂಬ ಕೀರ್ತಿ ಪಂಡರೀಬಾಯಿಗೆ ಸಲ್ಲುತ್ತದೆ ಎನ್ನಲಾಗಿದೆ.

ಹಿರೋಯಿನ್ ಆಗಿ ಮಾತ್ರವಲ್ಲ, ವಯಸ್ಸಾದ ಬಳಿಕ ತಾಯಿ ಪಾತ್ರಗಳಲ್ಲಿ ಕೂಡ ನಟಿ ಪಂಡರಿಬಾಯಿ ಸಾಕಷ್ಟು ಕಲಾಸೇವೆ ಮಾಡಿದ್ದಾರೆ. ಅಮ್ಮ ಎಂದರೆ ಅದು ಪಂಡರಿಬಾಯಿ ಎಂಬಷ್ಟು ಮಮತಾಮಯಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಪಂಡರಿಬಾಯಿ. ನಟಿಯಾಗಿ ಬಹಳಷ್ಟು ಪ್ರಸಿದ್ಧಿ ಹಾಗು ಯಶಸ್ಸು ಪಡೆದಿರುವ ಪಂಡರಿಬಾಯಿ ವೈಯಕ್ತಿಕ ಜೀವನದಲ್ಲಿ ಬಹಳಷ್ಟು ನೋವು ಉಂಡವರು. 

ತಮ್ಮ 50ನೇ ವಯಸ್ಸಿನಲ್ಲಿ ಮಂಡ್ಯದ ಹೊಟೆಲ್ ಮ್ಯಾನೇಜರ್‌ ಪಿಹೆಚ್ ರಾಮರಾವ್ ಎಂಬವರ ಜತೆ ಪ್ರೀತಿಯಲ್ಲಿ ಬಿದ್ದ ಪಂಡರಿಬಾಯಿ ಅವರನ್ನು ಮದುವೆಯಾದರು. ಆದರೆ ಅವರಿಗೆ ಅದಾಗಲೇ ಮದುವೆಯಾಗಿದ್ದು, ಹೆಂಡತಿ ಹಾಗು ನಾಲ್ಕು ಮಕ್ಕಳು ಜತೆಯಲ್ಲಿದ್ದರು. ಆದರೆ, ಅವರೊಟ್ಟಿಗೇ ಸಂಸಾರ ಮಾಡುವ ನಿರ್ಧಾರ ಹಾಗು ಉತ್ಸಾಹದಲ್ಲಿ ಚೆನ್ನೈಗೆ ಹೋದ ಪಂಡರಿಬಾಯಿಗೆ ಸಂತಸ ಜಾಸ್ತಿ ದಿನ ಉಳಿಯಲಿಲ್ಲ. ಕಾರಣ, ಪಂಡರಿಬಾಯಿಯ ಗಂಡನ ಮೊದಲ ಹೆಂಡತಿ ಹಾಗೂ ಮಕ್ಕಳು.

ಇಷಾ ಕೊಪ್ಪೀಕರ್-ಟಿಮ್ಮಿ ನಾರಂಗ ಮಧ್ಯೆ ಪ್ರೀತಿ ಜಿಂಟಾ ಹೆಸರೇಕೆ ಬಂತು; ರಿಯಲ್ ಕಥೆ ಶುರುವಾಗಿದ್ದೇ ಅಲ್ಲಿ..! 

ಹೌದು, ತನ್ನ ಗಂಡನ ಜತೆ ಕೆಲಸದವಳು ಬಂದಿದ್ದಾಳೆ ಎಂಬಂತೆ ಪಂಡರಿಬಾಯಿಯವರನ್ನು ನೋಡುತ್ತಿದ್ದರಂತೆ ರಾಮರಾವ್ ಅವರ ಮೊದಲ ಹೆಂಡತಿ. ಅಮ್ಮನಂತೆ ಮಕ್ಕಳು ಕೂಡ ಇವರನ್ನು ಕೆಲಸದವಳಂತೆ ಟ್ರೀಟ್ ಮಾಡುತ್ತ ಬಹಳಷ್ಟು ತೊಂದರೆ ಕೊಡುತ್ತಿದ್ದರಂತೆ. ಆದರೆ ಅದೆಲ್ಲವನ್ನೂ ಸಹಿಸಿಕೊಂಡು ಗಂಡನೊಟ್ಟಿಗೆ ಸಂಸಾರ ಮಾಡಿದರಂತೆ ಪಂಡರಿಬಾಯಿ. ಆದರೆ, ಅದೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ? ಮೊದಲ ಹೆಂಡತಿ ಖಾಯಿಲೆ ಬಿದ್ದು ಅವಳ ಸೇವೆ ಮಾಡುತ್ತಿರುವಂತೆ ಗಂಡ ಹಾಗು ಮಕ್ಕಳು ಕೂಡ ಸೇವೆ ಮಾಡಿಸಿಕೊಳ್ಳಲು ಸಿದ್ಧರಾಗಿ ಕುಳಿತಿರುತ್ತಿದ್ದರಂತೆ.

ಯಾರಿಗೂ ತಲೆನೋವು ಆಗ್ಬೇಡಿ, ಅನಾಸಿನ್ ಆಗಿರಿ, ಜಗಳವಾಡಬೇಡಿ, ಜಗತ್ತನ್ನೇ ಪ್ರೀತಿಸಿ; ಕತ್ರಿನಾ ಕೈಫ್ 

ಭಟ್ಕಳದಲ್ಲಿ ಹುಟ್ಟಿದ್ದ ಪಂಡರಿಬಾಯಿ ಸಿನಿಮಾ ನಟನೆ ಮೂಲಕ ಬೆಂಗಳೂರು ಹಾಗೂ ಚೆನ್ನೈ ತಲುಪಿದ್ದರು. ಬಳಿಕ ಗಂಡನೊಟ್ಟಿಗೆ ಚೆನ್ನೈನಲ್ಲಿ ಮೊದಲ ಗಂಡ ಹಾಗೂ ಮಲಮಕ್ಕಳ ಸೇವೆ ಮಾಡುತ್ತಾ ಕಾಲಕಳೆದ ನಟಿ ಪಂಡರಿಬಾಯಿ ಕೊನೆಗೆ 29 ಜನವರಿ 2003ರಲ್ಲಿ ತೀರಿಕೊಂಡರು, ಮದುವೆ ಬಳಿಕ ಪಂಡರಿಬಾಯಿ ಅದೆಷ್ಟು ಕಷ್ಟ ಪಟ್ಟರಂತೆ ಎಂದರೆ ದಿನಾಲು ಕಣ್ಣೀರಿನಲ್ಲೇ ಕೈ ತೊಳೆಯುತ್ತಿದ್ದರಂತೆ. ಅಂಥ ನಟಿ ಸತ್ತು ಇಂದಿಗೆ 20 ವರ್ಷಗಳೇ ಕಳೆದುಹೋಗಿವೆ. 

ಅಪ್ಪನ ಮಾತು ಕೇಳ್ದೇ ಹದಿನೈದು ವರ್ಷ ನರಕ ಅನುಭವಿಸಿದೆ; ಸಿಂಧು ಮದ್ವೆಯಾಗಿದ್ದ ರಘುವೀರ್ ಸತ್ತೇ ಹೋಗ್ಬಿಟ್ರು!

Follow Us:
Download App:
  • android
  • ios