ಮಾಯಾ ಬಜಾರ್‌ನಲ್ಲಿ ಪುನೀತ್ ಸಖತ್ ಸ್ಟೆಪ್!
ಎಸ್‌ಪಿಬಿ ಹಾಡಿಗೆ ಇದೇ ಮೊದಲು ತೆರೆ ಮೇಲೆ ಕುಣಿದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್..ಇದು ಮಾಯಾ ಬಜಾರ್
ಪುನೀತ್ ರಾಜ್‌ಕುಮಾರ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ‘ಮಾಯಾ ಬಜಾರ್’ ಇದೇ ವಾರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಸಖತ್ ಸ್ಟೆಪ್ ಹಾಕಿರುವುದು ಕೂಡ ಅಷ್ಟೇ ಸದ್ದು ಮಾಡುತ್ತಿದೆ. ಹೆಸರಾಂತ ಗಾಯಕ ಎಸ್‌ಪಿಬಿ ಹಾಡಿದ ಹಾಡು ಇದು. ಅವರ ಸಿನಿ ಜರ್ನಿಯಲ್ಲಿ ಎಸ್‌ಪಿಬಿ ಹಾಡಿಗೆ ಪುನೀತ್ ಹೆಜ್ಜೆ ಹಾಕಿದ್ದು ಇದೇ ಮೊದಲು.
ಪೊಲೀಸರೇ ನೈಜ ಹೀರೋಗಳು: ಪುನೀತ್ ರಾಜ್‌ಕುಮಾರ್
‘ಇದು ಚಿತ್ರದ ಪ್ರಮೋಷನ್ ಸಾಂಗ್. ಬ್ಲಾಕ್ ಆ್ಯಂಡ್ ವೈಟ್ ಲುಕ್‌ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ’ ಎನ್ನುತ್ತಾರೆ ನಿರ್ದೇಶಕ ರಾಧಾಕೃಷ್ಣ ರೆಡ್ಡಿ. ಇದು ದೊಡ್ಡ ತಾರಾಗಣವೇ ಇರುವ ಚಿತ್ರ. ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ಚೈತ್ರಾ ರಾವ್, ಅಚ್ಚುತ್‌ಕುಮಾರ್, ಪ್ರಕಾಶ್‌ರೈ, ಸುಧಾರಾಣಿ, ಸಾಧುಕೋಕಿಲ ಪ್ರಮುಖ ಪಾತ್ರಧಾರಿಗಳು.
ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುವರ್ ಸ್ಟಾರ್!
"