James 2022: ಪುನೀತ್ ಕೊನೆಯ ಚಿತ್ರವನ್ನು ನೋಡಿ ಕಣ್ಣೀರು ಹಾಕಿದ ಅಭಿಮಾನಿ!
ಇಂದು 'ಜೇಮ್ಸ್' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಪುನೀತ್ ಅಭಿಮಾನಿಯೊಬ್ಬ ಸಿನಿಮಾ ವೀಕ್ಷಿಸುವ ವೇಳೆ ಕಣ್ಣೀರು ಹಾಕಿದ್ದಾನೆ. ಅಲ್ಲದೇ ಅಪ್ಪು ನಿಧನರಾದ ದಿನ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ರಕ್ತವನ್ನು ಹರಿಸಿದ್ದಾನೆ.
ವಿಜಯಪುರ (ಮಾ.17): ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಇಂದು ಜನ್ಮದಿನದ (Birthday) ಸಂಭ್ರಮವಾಗಿದ್ದು, ಅವರ ಅಭಿಮಾನಿಗಳ ಪಾಲಿಗೆ ಸ್ಪೆಷಲ್ ಡೇ. ಮಾತ್ರವಲ್ಲದೇ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು 'ಜೇಮ್ಸ್' (James) ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಪವರ್ ಸ್ಟಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ. ಈ ನಡುವೆ ಪುನೀತ್ ಅಭಿಮಾನಿಯೊಬ್ಬ (Fan) 'ಜೇಮ್ಸ್' ಸಿನಿಮಾ ವೀಕ್ಷಿಸುವ ವೇಳೆ ಕಣ್ಣೀರು (Cries) ಹಾಕಿದ್ದಾನೆ. ಅಲ್ಲದೇ ಅಪ್ಪು ನಿಧನರಾದ ದಿನ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ರಕ್ತವನ್ನು ಹರಿಸಿದ್ದಾನೆ.
ಪುನೀತ್ ನಿಧನರಾದಾಗ ಅಂದು ಕೊನೆಯ ಬಾರಿ ಅಪ್ಪು ಮುಖ ನೋಡಲು ಸಿಗಲಿಲ್ಲ ಎಂದು ಬ್ಲೇಡ್‌ನಿಂದ ಎಡಗೈನ್ನು ಪ್ರದೀಪ್ (Pradeep) ಕೊಯ್ದುಕೊಂಡಿದ್ದನು. ಇಂದು 'ಜೇಮ್ಸ್' ಸಿನಿಮಾ ನೋಡಲು ಬಂದಾಗ ಅಪ್ಪು ಅಭಿಮಾನಿ ಪ್ರದೀಪ್ ಕಣ್ಣೀರು ಹರಿಸಿದ್ದಾನೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ಪ್ರದೀಪ್ ಕಣ್ಣೀರು ಹಾಕುತ್ತ 'ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ದೇವರ ಬಳಿ ಬೇಡಿಕೊಳ್ತೀನಿ. ಈಗ ಬೆಳ್ಳಿ ತೆರೆ ಮೇಲೆ ಅಪ್ಪುರನ್ನು ನೋಡಿದಾಗ ನನಗೆ ಏನಾಗುತ್ತೊ ಗೊತ್ತಿಲ್ಲ. ಪುನೀತ್ ರಾಜ್‌ಕುಮಾರ್ ಮತ್ತೆ ಹುಟ್ಟಿ ಬಂದೆ ಬರುತ್ತಾರೆ, ಅವರು ಮತ್ತೆ ಹುಟ್ಟಿ ಬಂದ ಮೇಲೆ ಜೀವ ಬಿಡ್ತೀನಿ ಎಂದು ಪ್ರದೀಪ್ ಭಾವುಕರಾಗಿ ಮಾತನಾಡಿದ್ದಾರೆ.
James 2022 ಕನ್ನಡ ಚಿತ್ರರಂಗದ ಅತಿ ದೊಡ್ಡ ರಿಲೀಸ್; ಜೇಮ್ಸ್‌ಗೆ ಅದ್ದೂರಿ ಸ್ವಾಗತ
'ಜೇಮ್ಸ್' ಸಿನಿಮಾ ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ಜೇಮ್ಸ್' ದರ್ಶನವಾಗುತ್ತಿದೆ. 150ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಅಬ್ಬರ ಶುರುವಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಚಿತ್ರದ ಶೋ ಆರಂಭವಾಗಿದ್ದು, ಈಗಾಗಲೇ ಚಿತ್ರದ ಮೊದಲ ದಿನದ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ವಿಶೇಷವಾಗಿ ರಾಜ್ಯದ ಎಲ್ಲ ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿವೆ. ಬೆಂಗಳೂರುವೊಂದರಲ್ಲೇ 800ಕ್ಕೂ ಹೆಚ್ಚಿನ ಶೋ ಪ್ರದರ್ಶನ ಕಾಣುತ್ತಿದ್ದು,. ಕರ್ನಾಟಕದಾದ್ಯಂತ ಒಟ್ಟು 1700 ಶೋಗಳು ಇರುತ್ತವೆ.
ನ್ಯೂಜೆರ್ಸಿಯಲ್ಲಿ ಅಪ್ಪು ಜೇಮ್ಸ್ ಜಾತ್ರೆ: ನ್ಯೂಜೆರ್ಸಿಯಲ್ಲಿ ಶನಿವಾರ ಪುನೀತ್ ಸ್ಮರಣೆ ನಡೆಯಲಿದ್ದು ಸುಮಾರು 150 ಕಾರುಗಳ ಮೆರವಣಿಗೆ ನಡೆಯಲಿದೆ. ನ್ಯೂಜೆರ್ಸಿಯ ನಾತ್‌ರ್ ಬ್ರೂನ್ಸ್‌ವಿಕ್ ಕಮ್ಯೂನಿಟಿ ಪಾರ್ಕ್ನಲ್ಲಿ ಕನ್ನಡಿಗರೆಲ್ಲ ಒಟ್ಟು ಸೇರಿ ಅಪ್ಪು ಅವರನ್ನು ಸ್ಮರಿಸಲಿದ್ದಾರೆ. ಬಳಿಕ 5 ಕಿಮೀ ದೂರ ಕಾರುಗಳ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಪುನೀತ್ ಅವರ ಭಾವಚಿತ್ರ, ಕನ್ನಡ ಬಾವುಟಗಳ ಪ್ರದರ್ಶನ ನಡೆಯಲಿದೆ. ಬಳಿಕ ನೂರಾರು ಕನ್ನಡಿಗರು ಇಲ್ಲಿನ ರೀಗಲ್ ಥಿಯೇಟರ್‌ನಲ್ಲಿ 'ಜೇಮ್ಸ್' ಚಿತ್ರ ವೀಕ್ಷಿಸಲಿದ್ದಾರೆ. 200ಕ್ಕೂ ಹೆಚ್ಚು ಮಂದಿ ಅಪ್ಪು ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಇಂದು Puneeth Rajkumar ಹುಟ್ಟುಹಬ್ಬ, ವಿ ಮಿಸ್ ಯು ಅಪ್ಪು!
ಮೆರವಣಿಗೆಗೆ ಅವಕಾಶ ಇಲ್ಲ: ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಕೆಲವೆಡೆ ಪುನೀತ್ ಜನ್ಮದಿನಾಚರಣೆಗೆ ಅನುಮತಿ ಸಿಕ್ಕಿಲ್ಲ. ಬೆಂಗಳೂರಿನ ಚಾಮರಾಜಪೇಟೆಯಿಂದ ವೀರೇಶ್ ಚಿತ್ರಮಂದಿರದವರೆಗೂ ಬೈಕ್ ರಾರಯಲಿ, ಮೆರವಣಿಗೆ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದರು. ಜೊತೆಗೆ ಪುನೀತ್ ಸಮಾಧಿ, ವೀರಭದ್ರೇಶ್ವರ, ಪ್ರಸನ್ನ ಹಾಗೂ ವೀರೇಶ್ ಚಿತ್ರಮಂದಿರಗಳ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪಮಳೆ ಸುರಿಸಲು ಅಭಿಮಾನಿಗಳು ಸಜ್ಜಾಗಿದ್ದರು. ಇವೆರಡೂ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಅಭಿಮಾನಿಗಳು ಈ ಕಾರಣಕ್ಕೆ ಕಣ್ಣೀರು ಹಾಕಿದ್ದಾರೆ.