Asianet Suvarna News Asianet Suvarna News

Gandhada Gudi : ಪುನೀತ್​ ಕನಸು ನನಸಾಗಿಸಲು ಮುಂದಾದ ಅಶ್ವಿನಿ, ಮಹತ್ವದ ಘೋಷಣೆ!

* ಅಪ್ಪು ಕನಸಿಗೆ ರೆಕ್ಕೆಯಾದ ಅಶ್ವಿನಿ

* ಪುನೀತ್ ರಾಜ್‌ಕುಮಾರ್ ಕರುನಾಡ ಬಗ್ಗೆ ಮಾಡಿದ್ದ ಡಾಕ್ಯುಮೆಂಟರಿ ಬಗ್ಗೆ ಅಶ್ವಿನಿ ಮಹತ್ವದ ಘೋಷಣೆ

* ಆ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು

Puneeth Rajkumar Dream Project Gandhada Gudi Documentary To Release Soon Wife Ashwini Makes Announcement pod
Author
Bangalore, First Published Nov 25, 2021, 12:01 AM IST

ಬೆಂಗಳೂರು(ಅ.30): ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌, ಜೋಯಿಡಾದ ಕಗ್ಗಾಡಿನಲ್ಲಿ ಪಕ್ಷಿ ವೀಕ್ಷಣೆ, ಅಭಿಮಾನಿಯ ಮನೆಯಂಗಳದಲ್ಲಿ ಊಟ, ಸುಗ್ಗಿ ಕುಣಿತದ ತಂಡದೊಂದಿಗೆ ಸಂಭ್ರಮ. ಜಿಲ್ಲೆಯುದ್ದಕ್ಕೂ ಹೆಜ್ಜೆ ಹಾಕಿದ ನೆನಪು ಹಸಿರಿರುವಾಗಲೇ ಪುನೀತ್‌ ರಾಜಕುಮಾರ್‌(Puneeth Rajkumar) ಮರೆಯಾಗಿದ್ದಾರೆ. ಜಿಲ್ಲೆಯುದ್ದಕ್ಕೂ ಅವರ ಅಭಿಮಾನಿಗಳಿದ್ದಾರೆ(Fans). ಅವರು ಬಂದಾಗ ಅವರೊಂದಿಗೆ ಸೆಲ್ಫಿ(Selfie), ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟವರಿದ್ದಾರೆ. ಅವರ ಬಂಧು ಬಳಗ ಇದೆ. ಅಪ್ಪು(Appu) ನಿಧನ ಎಲ್ಲರಿಗೂ ಬರಸಿಡಿಲೆರಗಿದಂತಾಗಿದೆ.

2020ರ ನವೆಂಬರ್‌ನಲ್ಲಿ ಸಾಕ್ಷ್ಯಚಿತ್ರಕ್ಕಾಗಿ ಆಗಮಿಸಿದ ಅವರು ದಾಂಡೇಲಿ(Dandeli), ಜೋಯಿಡಾ(Joida) ಕಾಡಿನಲ್ಲಿ(Forest) ಹೆಜ್ಜೆ ಹಾಕಿದ್ದಾರೆ. ಕುಮಟಾ, ಗೋಕರ್ಣ, ಮುರುಡೇಶ್ವರ, ಜೊಯಿಡಾ ತಾಲೂಕಿನಲ್ಲಿ  ತಿರುಗಾಡಿದ್ದಾರೆ. ಕಾಳಿ ನದಿಯ(Kali River) ಉಗಮ ಸ್ಥಾನ ಪಾತಾಗುಡಿ, ಡಿಗ್ಗಿ, ಡೇರಿಯಾ ಮತ್ತಿತರ ಕಡೆ ಚಾರಣ ಮಾಡಿದ್ದಾರೆ. ಅಲ್ಲಿನ ಜನರೊಂದಿಗೆ ಬೆರೆತಿದ್ದಾರೆ. ಕುಣಬಿ ಜನಾಂಗದ ಸುಗ್ಗಿ ಕುಣಿತದ ತಂಡದೊಂದಿಗೆ ನಿಂತು ಖುಷಿಪಟ್ಟಿದ್ದಾರೆ.

ಹೌದು 'ವೈಲ್ಡ್​ ಕರ್ನಾಟಕ’ ಡಾಕ್ಯುಮೆಂಟರಿ (Wild Karnataka Documentary) ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್​ ಕರುನಾಡ (Karnataka) ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್​ ಮಾಡಲಾಗಿತ್ತು. ಇದಕ್ಕೆ ‘ಗಂಧದಗುಡಿ’ (Gandhada Gudi) ಎಂದು ಹೆಸರಿಡಲಾಗಿದೆ. ಪುನೀತ್​ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್​ ನವೆಂಬರ್ 1ರಂದು ರಿಲೀಸ್​ ಆಗಬೇಕಿತ್ತು. ನವೆಂಬರ್​ 1 ಕನ್ನಡ ರಾಜ್ಯೋತ್ಸವ (Kannada Rajyotsava). ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್​ ಮಾಡಬೇಕು ಎಂದು ಪುನೀತ್​ ಕನಸು ಕಂಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಅಕ್ಟೋಬರ್​ 29ರಂದು ಪುನೀತ್​ ನಿಧನ ಹೊಂದಿದ್ದರು. ಈ ಕಾರಣಕ್ಕೆ ಆ ಟೀಸರ್​ ರಿಲೀಸ್​ ಆಗಿಲ್ಲ. ಈಗ ಅದನ್ನು ರಿಲೀಸ್​ ಮಾಡುವ ಬಗ್ಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್ (Ashwini Puneeth Rajkumar)​ ಚಿಂತನೆ ಮಾಡಿದ್ದಾರೆ.

Instagramಗೆ ಕಾಲಿಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್; ಅಭಿಮಾನಿಗಳು ಟ್ಯಾಗ್‌ ಮಾಡಿದ ಪೋಟೋಗಳಿವು!

ಈ ವಿಚಾರದ ಕುರಿತು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಟ್ವೀಟ್​ ಒಂದನ್ನು ಮಾಡಿದ್ದಾರೆ. ‘ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಅ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಬರೆದುಕೊಂಡಿದ್ದಾರೆ.

ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್​ ಪೋಸ್ಟ್ ಮಾಡಿದ್ದರು. ಅಲ್ಲದೆ, ನವೆಂಬರ್​ 1ಕ್ಕಾಗಿ ಕಾಯಿರಿ ಎಂದು ಹೇಳಿದ್ದರು. ಆ ಸಮಯ ಈಗ ಬಂದಿದೆ.

Puneeth Rajkumar Death : ಬಾಡಿದ ಬೆಟ್ಟದ ಹೂವು!

ಪುನೀತ್ ರಾಜ್ ಕುಮಾರ್ ಅವರು ಕುಮಟಾ, ಗೋಕರ್ಣ, ಮುರುಡೇಶ್ವರ, ಜೊಯಿಡಾ ತಾಲೂಕಿನಲ್ಲಿ  ತಿರುಗಾಡಿ ಚಿತ್ರೀಕರಣ ನಡೆಸಿದ್ದರು. ಅವರು ಕಡಲತೀರಗಳಲ್ಲಿ ಓಡಾಡಿ, ಸ್ಟಂಟ್ ಗಳನ್ನೂ ಮಾಡಿದ್ದರು. ವನ್ಯಜೀವಿ ಫೋಟೋಗ್ರಾಫರ್ ಅಮೋಘ ವರ್ಷ ಸಾರಥ್ಯದಲ್ಲಿ ಡಾಕ್ಯುಮೆಂಟರಿ ಚಿತ್ರೀಕರಣ ಮಾಡಲಾಗಿದೆ.

Follow Us:
Download App:
  • android
  • ios