ಡಾ.ರಾಜ್ 92ನೇ ಜನ್ಮದಿನದ ನೆನಪು | ಅಪ್ಪನಿಗಾಗಿ ಅಪ್ಪು ಹಾಡಿದ ಭಾವುಕ ಹಾಡು | ಪೋಸ್ಟ್ ಆದ 2 ಗಂಟೆಯಲ್ಲೇ ಲಕ್ಷಕ್ಕೂ ಹೆಚ್ಚು ವ್ಯೂಸ್

ಡಾ.ಡಾಜ್‌ ಕುಮಾರ್ ಅವರ 92ನೇ ಹುಟ್ಟಿದ ಹಬ್ಬ ಇಂದು. ರಾಜ್ ಅಭಿಮಾನಿಗಳು ಹಿರಿಯ ನಟನನ್ನು ನೆನಪಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ ಕುಮಾರ್ ಸುಂದರವಾದ ಹಾಡೊಂದನ್ನು ತಂದೆಗಾಗಿ ಡೆಡಿಕೇಟ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ ಎಂದು ಆರಂಭವಾಗುವ ಹಾಡು ಅರ್ಥಪೂರ್ಣವಾಗಿ ಭಾವನಾತ್ಮಕವಾಗಿ ಮೂಡಿ ಬಂದಿದೆ. ತಂದೆ ಕುರಿತ ಅಪ್ಪು ಪ್ರೀತಿ, ಮಮತೆ, ತಂದೆ-ಮಗನ ಗಾಢ ಸಂಬಂಧವನ್ನು ಸರಳ ಹಾಡಿನಲ್ಲಿ ಸುಂದರವಾಗಿ ಹಾಡಿನಲ್ಲಿ ಮೂಡಿ ಬಂದಿದೆ.

ಅಪ್ಪು, ಶಿವಣ್ಣ, ಕಿಚ್ಚ ಸೇರಿ ಸ್ಯಾಂಡಲ್‌ವುಡ್ ದಿಗ್ಗಜರ ಸಿನಿಮಾ ಶೂಟಿಂಗ್‌ಗೆ ಬ್ರೇಕ್

ಹಾಡಿನ ವಿಡಿಯೋವನ್ನು ಅಪ್ಪು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಶೇರ್ ಆಗಿ 2 ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ವ್ಯೂಸ್ ಪಡೆದಿದೆ. ಅಪ್ಪಾಜಿ ಅವರ ೯೨ನೆ ಜನ್ಮದಿನದ ಪ್ರಯುಕ್ತ ನಮ್ಮ ಒಂದು ಪುಟ್ಟ ಕಾಣಿಕೆ ಎಂದು ಕ್ಯಾಪ್ಶನ್ ಕೊಟ್ಟು ಪುನೀತ್ ವಿಡಿಯೋ ಶೇರ್ ಮಾಡಿದ್ದಾರೆ.

ಹಾಡನ್ನು ವೀಕ್ಷಿಸಿ ಬಹಳಷ್ಟು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಿಮ್ಮ ಧ್ವನಿಯಲ್ಲಿ ಹಾಡು ಕೇಳಿ ರಾಜ್ ನೆನಪಾದರು ಎಂದು ಕಮೆಂಟಿಸಿದ್ದಾರೆ ಅಭಿಮಾನಿಗಳು.

View post on Instagram